428 ರನ್‌ ಸಿಡಿಸಿ ಲಾರಾ ದಾಖಲೆಗೆ ಹತ್ತಿರವಾದ ಹರಿಯಾಣ ಬ್ಯಾಟರ್

Date:

ಬರೋಬ್ಬರಿ 12 ಸಿಕ್ಸರ್‌, 46 ಬೌಂಡರಿಗಳೊಂದಿಗೆ ಅಜೇಯ 428 ರನ್‌ (465 ಎಸೆತ) ಸಿಡಿಸುವ ಮೂಲಕ ಹರಿಯಾಣದ ಬ್ಯಾಟರ್‌ ಯಶ್ವರ್ಧನ್ ದಲಾಲ್‌ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವೆಸ್ಟ್‌ ಇಂಡೀಸಿಗ ದಿಗ್ಗಜ ಬ್ಯಾಟರ್‌ ಅವರ ದಾಖಲೆಗೆ ಹತ್ತಿರವಾಗಿದ್ದಾರೆ. ಬ್ರಿಯಾನ್‌ ಲಾರಾ 1994ರ ಜೂನ್‌ 4 ರಂದು ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ವಾರ್ವಿಂಕ್‌ಷೈರ್ ತಂಡದ ಪರವಾಗಿ ದರ್ಹಾಮ್‌ ತಂಡದ ವಿರುದ್ದ ಅಜೇಯ 501 ರನ್‌ ಸಿಡಿಸಿದ್ದರು. ಹಾಗೆಯೇ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 2004ರಲ್ಲಿ ಅಜೇಯ 400 ರನ್‌ ಸಿಡಿಸಿದ್ದರು.

ಶುಕ್ರವಾರದಿಂದ ಆರಂಭಗೊಂಡಿರುವ ನಡೆದ ಕರ್ನಲ್ ಸಿ ಕೆ ನಾಯ್ಡು ಟ್ರೋಫಿ ಅಂಗವಾಗಿ ಹರಿಯಾಣದ ಸುಲ್ತಾನ್ ಪುರದಲ್ಲಿರುವ ಗುರುಗ್ರಾಮ ಕ್ರಿಕೆಟ್ ಮೈದಾನದಲ್ಲಿ ನಡೆದ ಹರಿಯಾಣ ಹಾಗೂ ಮುಂಬೈ ತಂಡಗಳ ನಡುವೆ ಅಂಡರ್‌ 23 ಪಂದ್ಯದಲ್ಲಿ ಆರಂಭಿಕ ಆಟಗಾರ ಯಶ್ವರ್ಧನ್‌ ದಲಾಲ್‌ ಆರಂಭದಲ್ಲೇ ಭರ್ಜರಿ ಕಮಾಲ್‌ ಮಾಡಿದ್ದಾರೆ. ಮುಂಬೈ ವಿರುದ್ಧ 92.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಯಶ್ವರ್ಧನ್‌ ದಲಾಲ್‌ 426 ರನ್‌ ಚಚ್ಚಿ ಕ್ರೀಸ್‌ನಲ್ಲಿ ಅಜೇಯರಾಗುಳಿದರು. ಇದರೊಂದಿಗೆ 2ನೇ ದಿನದ ಅಂತ್ಯಕ್ಕೆ ಹರಿಯಾಣ ತಂಡ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 732 ರನ್‌ ಬಾರಿಸಿತು.

ಈ ಸುದ್ದಿ ಓದಿದ್ದೀರಾ? ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಲಾಲ್‌ ಈ ಇನ್ನಿಂಗ್ಸ್‌ನಲ್ಲಿ ಅಜೇಯ 428 ರನ್ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ದಾಖಲೆ ಬರೆದರು. ಇದರೊಂದಿಗೆ ಅಂಡರ್ 23 ಪಂದ್ಯದಲ್ಲಿ ಕಳೆದ ವರ್ಷ ಇದೇ ಟೂರ್ನಿಯಲ್ಲಿ ಒಂದೇ ಇನಿಂಗ್ಸ್ ನಲ್ಲಿ 312 ರನ್ ಸಿಡಿಸಿ ಅತಿ ದೊಡ್ಡ ವೈಯಕ್ತಿಕ ಮೊತ್ತ ದಾಖಲೆ ಬರೆದಿದ್ದ ಉತ್ತರ ಪ್ರದೇಶ ಬ್ಯಾಟ್ಸ್‌ಮನ್‌ ಸಮೀರ್ ರಿಝ್ವಿಯವರ ದಾಖಲೆಯನ್ನು ಅಳಿಸಿ ಹಾಕಿದರು.

ಮೊದಲು ಟಾಸ್ ಗೆದ್ದಿದ್ದ ಮುಂಬೈ ತಂಡ, ಫೀಲ್ಡಿಂಗ್ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಹರಿಯಾಣಕ್ಕೆ ಬಿಟ್ಟುಕೊಟ್ಟಿತು. ಫೀಲ್ಡಿಂಗ್‌ ಆಯ್ಡುಕೊಂಡ ಮುಂಬೈ ಎದುರಾಳಿ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿತ್ತು. ಆದರೆ ಹರಿಯಾಣ ಬ್ಯಾಟರ್‌ಗಳ ಆರ್ಭಟಕ್ಕೆ ಲೆಕ್ಕಾಚಾರ ಫಲಿಸಲಿಲ್ಲ. ಆರಂಭಿಕರಾದ ದಲಾಲ್ ಮತ್ತು ಅರ್ಶ್‌ ರಂಗಾ ಅವರ ಜೊತೆಯಾಟ ಮುಂಬೈ ಬೌಲರ್‌ಗಳನ್ನು ಕಂಗಾಲು ಮಾಡಿತ್ತು. ಇವರಿಬ್ಬರ ಜುಗಲ್ ಬಂದಿಯಲ್ಲಿ ಆಟ ಮೊದಲ ವಿಕೆಟ್‌ಗೆ 410 ರನ್‌ಗಳನ್ನು ಕಲೆಹಾಕಿತ್ತು.

ರಂಗಾ ಅವರ ವಿಕೆಟ್ ಪತನವಾದ ನಂತರ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸರದಿ ಸಾಲಿನಲ್ಲಿ ಪೆವಿಲಿಯನ್‌ಗೆ ತೆರಳಿದರು. ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರು ಆಡಿದ ದಲಾಲ್ ಶನಿವಾರದ ಆಟದಲ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಭರ್ಜರಿ ಅಜೇಯ ಆಟದಿಂದಾಗಿ ಹರಿಯಾಣ ತಂಡ, ಪಂದ್ಯದ 2ನೇ ದಿನವಾದ ಶನಿವಾರದ ಅಂತ್ಯಕ್ಕೆ 8 ವಿಕೆಟ್ ಗೆ 732 ರನ್ ಗಳನ್ನು ಪೇರಿಸಿದೆ. 

ಸಂಕ್ಷಿಪ್ತ ಸ್ಕೋರ್:
ಹರಿಯಾಣ ಮೊದಲ ಇನಿಂಗ್ಸ್ 732/8, ಯಶ್ ವರ್ದನ್ ದಲಾಲ್ ಅಜೇಯ 426 ರನ್‌ (463 ಎಸೆತ, 58 ಬೌಂಡರಿ, 12 ಸಿಕ್ಸರ್), ಅರ್ಶ್ ರಂಗಾ 151 ರನ್‌ (311 ಎಸೆತ, 18 ಬೌಂಡರಿ, 1 ಸಿಕ್ಸರ್), ಸರ್ವೇಶ್‌ ರೋಹಿಲಾ 48 ರನ್‌, ಪರ್ಥ್‌ ನಗಿಲ್‌ 25 ರನ್‌, ಪರ್ಥ್‌ ವಾಟ್ಸ್‌ 24 ರನ್‌.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...