ಇಂದೋರ್‌ನಲ್ಲಿ ‘ವಿರಾಟ್’ ದಾಖಲೆಗಳ ಆಟ: 54ನೇ ಶತಕ ವ್ಯರ್ಥ, ಕಿವೀಸ್‌ಗೆ ಶರಣಾದ ಭಾರತ

Date:

ಅಂತಾರಾಷ್ಟ್ರೀಯ ಕ್ರಿಕೆಟ್‌ನ ‘ರನ್ ಮಷಿನ್’ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪ್ರಭಾವವನ್ನು ಜಗತ್ತಿಗೆ ತೋರಿಸಿದ್ದಾರೆ. ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ (ODI) ಪಂದ್ಯದಲ್ಲಿ, ಕೊಹ್ಲಿ ತಮ್ಮ ವೃತ್ತಿಜೀವನದ 54ನೇ ಶತಕವನ್ನು ಸಿಡಿಸಿ, ದಾಖಲೆಯ ಮೈಲಿಗಲ್ಲನ್ನು ಸ್ಥಾಪಿಸಿದರು. ಆದರೆ, ಅವರ ಈ ಅಮೋಘ ಆಟದ ಹೊರತಾಗಿಯೂ, ಭಾರತದ ಇತರ ಬ್ಯಾಟರ್‌ಗಳ ವೈಫಲ್ಯದಿಂದಾಗಿ, ತಂಡವು ಸೋಲನ್ನು ಅನುಭವಿಸಬೇಕಾಯಿತು.

ದಾಖಲೆಯ ಪುಟಗಳಲ್ಲಿ ಕೊಹ್ಲಿ
ಇದು ಕೇವಲ ಒಂದು ಶತಕವಲ್ಲ, ಕ್ರಿಕೆಟ್ ಇತಿಹಾಸದ ದಾಖಲೆಯ ಪುಟಗಳಿಗೆ ಸೇರಿದ ಹೊಸದೊಂದು ಅಧ್ಯಾಯ. ವಿರಾಟ್ ಕೊಹ್ಲಿ ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 54 ಶತಕಗಳನ್ನು ಪೂರೈಸಿದ ಮೊದಲ ಆಟಗಾರ ಎಂದು ಗುರುತಿಸಿಕೊಂಡರು. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಈಗಾಗಲೇ ಮುರಿದಿರುವ ಕೊಹ್ಲಿ, ಈಗ ಆ ಅಂತರವನ್ನು ಇನ್ನು ಹೆಚ್ಚಿಸಿಕೊಂಡಿದ್ದಾರೆ.

ವಿಶೇಷವಾಗಿ, ಇಂದೋರ್‌ನ ಹೋಲ್ಕರ್ ಮೈದಾನ ಕೊಹ್ಲಿ ಅವರಿಗೆ ಅತ್ಯಂತ ಅದೃಷ್ಟದ ತಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಮೈದಾನದಲ್ಲಿ ಅವರು ಬಾರಿಸಿದ 4ನೇ ಶತಕ ಇದಾಗಿದೆ. ಅದರ ಜೊತೆಗೆ, ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಅತ್ಯಂತ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂಟಿ ಸಲಗನಂತೆ ಹೋರಾಡಿದ ಕೊಹ್ಲಿ
ನ್ಯೂಜಿಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲಿ ಆಘಾತ ಎದುರಾದರೂ, ಕೊಹ್ಲಿ ಒಂದು ಕಡೆ ಗೋಡೆಯಂತೆ ನಿಂತರು. ಅವರ ಇನ್ನಿಂಗ್ಸ್‌ನಲ್ಲಿ ಆಕ್ರಮಣಶೀಲತೆ ಹಾಗೂ ಸಂಯಮ ಎರಡೂ ಅಡಗಿತ್ತು. ಕವರ್ ಡ್ರೈವ್, ಫ್ಲಿಕ್ ಶಾಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು, ನ್ಯೂಜಿಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಕ್ರೀಸ್‌ನಲ್ಲಿ ಇದ್ದಾಗ ಭಾರತ ಗೆಲುವಿನ ಕಡೆಗೆ ಸಾಗುತ್ತಿತ್ತು.

ಇದನ್ನು ಓದಿದ್ದೀರಾ? ದಾಖಲೆಗಳನ್ನು ಬರೆದರೂ ವೈಭವ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನವಿಲ್ಲ; ಐಸಿಸಿ ನಿಯಮ ಅಡ್ಡಿಯಾಗಿದ್ದು ಹೇಗೆ?

ಗೆಲುವು ಕಸಿದ ನ್ಯೂಜಿಲೆಂಡ್
ಆದರೆ, ಕ್ರಿಕೆಟ್ ಎಂಬ ತಂಡದ ಆಟದಲ್ಲಿ ಒಂಟಿ ಆಟಗಾರನ ಪ್ರಯತ್ನ ಯಾವಾಗಲೂ ಸಾಕಾಗುವುದಿಲ್ಲ ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಇನ್ನೊಂದು ಕಡೆಯಿಂದ ಸಮರ್ಥ ಬೆಂಬಲ ಸಿಗದಿದ್ದಾಗ, ಒತ್ತಡ ಹೆಚ್ಚಾಯಿತು. ಕೊನೆಯಲ್ಲಿ, ಕೊಹ್ಲಿ ಔಟಾದಂತೆಯೇ ಭಾರತದ ಗೆಲುವಿನ ಆಸೆಯೂ ಕರಗಿತು. ನ್ಯೂಜಿಲೆಂಡ್ ಬೌಲರ್‌ಗಳ ಶಿಸ್ತಿನ ದಾಳಿ ಮುಂದೆ ಭಾರತೀಯ ಬಾಲಂಗೋಚಿ ಆಟಗಾರರು ನಿಲ್ಲಲಿಲ್ಲ. ಕೊಹ್ಲಿಯ ‘ವಿರಾಟ್’ ಸಾಧನೆಯ ನಡುವೆಯೂ, ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿದ ನ್ಯೂಜಿಲೆಂಡ್, ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಸರಣಿಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

ಗೆಲ್ಲಲು 338 ರನ್ ಗುರಿ ಪಡೆದಿದ್ದ ಭಾರತ ತಂಡವು 46 ಓವರ್‌ಗಳಲ್ಲಿ 296 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಕ್ರಿಸ್ಟಿಯನ್ ಕ್ಲಾರ್ಕ್(3-54) ಹಾಗೂ ಝ್ಯಾಕ್ ಫೌಲ್ಕ್ಸ್(3-77) ತಲಾ ಮೂರು ವಿಕೆಟ್‌ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೇಡನ್ ಲೆನೊಕ್ಸ್(2-42)ಎರಡು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.

ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ(11 ರನ್),ನಾಯಕ ಶುಭಮನ್ ಗಿಲ್(23 ರನ್), ಉಪ ನಾಯಕ ಶ್ರೇಯಸ್ ಅಯ್ಯರ್(3 ರನ್) ಹಾಗೂ ಕೆ.ಎಲ್.ರಾಹುಲ್(1 ರನ್)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತವು 71 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಗ ಕೊಹ್ಲಿ ಹಾಗೂ ನಿತೀಶ್ ರೆಡ್ಡಿ(53 ರನ್, 57 ಎಸೆತ, 2 ಬೌಂಡರಿ, 2 ಸಿಕ್ಸರ್)ಐದನೇ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ಸರಿಪಡಿಸಲು ಮುಂದಾದರು. ರೆಡ್ಡಿ ವಿಕೆಟನ್ನು ಪಡೆದ ಕ್ಲಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು.

ರವೀಂದ್ರ ಜಡೇಜ(12 ರನ್) ಬೇಗನೆ ಔಟಾದರು. ಏಳನೇ ವಿಕೆಟ್‌ಗೆ 99 ರನ್ ಸೇರಿಸಿದ ಕೊಹ್ಲಿ ಹಾಗೂ ಹರ್ಷಿತ್ ರಾಣಾ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ ರಾಣಾ 43 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಹಿತ 52 ರನ್ ಗಳಿಸಿದ ಬೆನ್ನಿಗೇ ಔಟಾದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...