ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂದು ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಮಿಚೆಲ್ ಮಾರ್ಶ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ದಾರೆ.
ಮೊದಲ ಏಕದಿನದಲ್ಲಿ ಸೋತಿರುವ ಕಾರಣ ಭಾರತ 0-1 ರಿಂದ ಸರಣಿ ಹಿನ್ನಡೆಯಲ್ಲಿದ್ದು, ಈ ಪಂದ್ಯ ಗೆದ್ದು ಸರಣಿ ಸಮತೋಲನಗೊಳಿಸುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ಪರ್ಥ್‌ನಲ್ಲಿ ಮೊದಲ ಪಂದ್ಯದಲ್ಲಿ ಭಾರತ 131 ರನ್‌ಗಳನ್ನು ಗಳಿಸಿದ್ದರೂ ಮಳೆಯಿಂದಾಗಿ ಡಕ್‌ವರ್ಥ್ ಲೂಯಿಸ್ ವಿಧಾನದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಈಗ ಅಡಿಲೇಡ್‌ನಲ್ಲಿ ಚೆನ್ನಾಗಿ ನುರಿದು ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದು, ಭಾರತ ಉತ್ತಮ ರನ್ ರನ್‌ಗಳಿಸುವ ತವಕದಲ್ಲಿದೆ.
ಭಾರತದ ತಂಡದಲ್ಲಿ ಈ ಪಂದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಅವರು ಉತ್ತಮ ಆಟ ಆಟವಾಡುವ ಸಂಭವವಿದೆ.
ಆಸ್ಟ್ರೇಲಿಯಾದಲ್ಲಿ ಜೋಶ್ ಫಿಲಿಪ್ ಬದಲಿಗೆ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಸೇರಿಕೊಂಡಿದ್ದಾರೆ ಹಾಗೂ ನೆಥನ್ ಎಲಿಸ್ ಬದಲಿಗೆ ಜೇವಿಯರ್ ಬಾರ್ಟ್ಲೆಟ್ ತಂಡಕ್ಕೆ ಅವಕಾಶ ಪಡೆದಿದ್ದಾರೆ. ಆಡಮ್ ಜಾಂಪಾ ಕೂಡ ಮ್ಯಾಥ್ಯೂ ಕುಹ್ನೆಮನ್ ಬದಲಿಗೆ ಮರುಪ್ರವೇಶ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಕಾರ್ಮಿಕರ ಹೊಟ್ಟೆ ಮೇಲೆ ಮತ್ತೆ ಮೋದಿ ಹೊಡೆತ – ಕಡುಕಠಿಣ ಪಿಎಫ್ ಹಿಂಪಡೆತ
ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಸರಣಿಯನ್ನು ಸಮನಾಗಿಸಿಕೊಳ್ಳಲಿದೆ. ಆಸ್ಟ್ರೇಲಿಯಾ ಕೂಡ ತವರಿನ ಪಿಚ್‌ನಲ್ಲಿ ಸರಣಿಯ ಜಯವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಿದೆ.
ಪಂದ್ಯವಾಡುವ ಉಭಯ ತಂಡಗಳು:
ಭಾರತ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ ಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಮಿಚೆಲ್ ಮಾರ್ಶ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕಾಂನೊಲಿ, ಮಿಚೆಲ್ ಓವೆನ್, ಜೇವಿಯರ್ ಬಾರ್ಟ್ಲೆಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಾಂಪಾ, ಜೋಷ್ ಹೇಜಲ್‌ವುಡ್.





