ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ನ ಮೊದಲ ದಿನದಲ್ಲಿ ಸಮಾಧಾನಕರ ಬ್ಯಾಟಿಂಗ್ ಪ್ರದರ್ಶಿಸಿತು. 81.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 247 ರನ್‌ಗಳು ಪೇರಿಸಿ ದಿನದ ಆಟವನ್ನು ಮುಗಿಸಿತು. ಆರಂಭದಲ್ಲಿ ಉತ್ತಮ ಆಟವಾಡಿದರೂ, ನಂತರದಲ್ಲಿ ಭಾರತೀಯ ಸ್ಪಿನ್ನರ್‌ಗಳು ಹರಿಣಗಳ ಬ್ಯಾಟರ್‌ಗಳಿಗೆ ಒತ್ತಡ ನೀಡಿದರು.
ಗುವಾಹಟಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದಾಗಿ ತೀರ್ಮಾನಿಸಿತು. ಪಿಚ್ ಬ್ಯಾಟಿಂಗ್‌ಗೆ ಸಹಾಯವಾಗುವುದನ್ನು ಗಮನಿಸಿದ ಅವರು, ಮೊದಲ ದಿನ ಹೆಚ್ಚು ರನ್‌ಗಳನ್ನು ಸೇರಿಸುವ ಉದ್ದೇಶದಿಂದ ಇನಿಂಗ್ಸ್ ಆರಂಭಿಸಿದರು.
ಮಾರ್ಕ್ರಮ್ 38 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ರಿಕ್ಕೆಲ್ಟನ್ 35 ಮತ್ತು ನಾಯಕ ತೆಂಬು ಬವುಮಾ 41 ರನ್ ಬಾರಿಸಿದರೆ, ಟ್ರಿಸ್ಟನ್ ಸ್ಟಬ್ಸ್ 49 ರನ್ ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ನೀಡಿದರು. ಡಿ ಝೋರ್ಝಿ 28 ರನ್ ಗಳಿಸಿ ಔಟಾದರೆ, ದಿನದಾಂತ್ಯಕ್ಕೆ ಮುತ್ತುಸ್ವಾಮಿ 25 ರನ್‌ನೊಂದಿಗೆ ಕ್ರೀಸ್‌ನಲ್ಲಿ ಉಳಿದಿದ್ದಾರೆ.
ಇದನ್ನು ಓದಿದ್ದೀರಾ? U19 ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ತಂಡಗಳು 16, ಭಾರತಕ್ಕೆ ಮೂರು ಎದುರಾಳಿಗಳು
ಭಾರತದ ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದರು. ಕುಲದೀಪ್ ಯಾದವ್ 3 ವಿಕೆಟ್‌ಗಳನ್ನು ಪಡೆದು ದಕ್ಷಿಣ ಆಫ್ರಿಕಾದ ಮಧ್ಯ ಕ್ರಮಾಂಕಕ್ಕೆ ಪೆಟ್ಟು ನಿಡಿದರು. ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ತಂಡದ ರನ್ ವೇಗವನ್ನು ನಿಯಂತ್ರಣದಲ್ಲಿಟ್ಟರು.





