ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಆಕ್ರಮಣಕ್ಕೆ ಸಿಲುಕಿರುವ ವಿಂಡೀಸ್ ತಂಡ 43 ಓವರ್‌ಗಳಲ್ಲಿ 140 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಪ್ರವಾಸಿಗರು ಮುನ್ನಡೆ ಸಾಧಿಸಬೇಕಾದರೆ 378 ರನ್‌ಗಳನ್ನು ಗಳಿಸಬೇಕಾಗಿದೆ.
ದಿನದಾಟದ ಮಧ್ಯಾಹ್ನದ ನಂತರ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಆರಂಭಿಕ ಆಘಾತ ಸಿಕ್ಕಿತು. ಜಾನ್ ಕ್ಯಾಂಪ್‌ಬೆಲ್ 10 ರನ್‌ಗಳಿಗೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಔಟ್ ಆದರು. ಟಿ ಚಂದ್ರಪೌಲ್ 34 ರನ್‌ಗಳೊಂದಿಗೆ ತಂಡಕ್ಕೆ ಸ್ಥಿರತೆ ನೀಡಲು ಯತ್ನಿಸಿದರೂ, ಜಡೇಜಾ ದಾಳಿಗೆ ಬಲಿಯಾದರು. ಅಲಿಕ್ ಅಥನೇಜ್ 41 ರನ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸಲು ಪ್ರಯತ್ನಿಸಿದರು, ಆದರೆ ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಸಿದ್ದ; ಶುಭಮನ್ ಗಿಲ್‌ಗೆ ನಾಯಕತ್ವ – ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್
ನಾಯಕ ರಾಸ್ಟನ್ ಚೇಸ್ ಶೂನ್ಯಕ್ಕೆ ಜಡೇಜಾ ಬೌಲಿಂಗ್‌ನಲ್ಲಿ ಔಟ್ ಆದರು. ಇದರ ನಡುವೆ ಶಾಯ್ ಹೋಪ್ 31 ರನ್‌ಗಳೊಂದಿಗೆ ಮತ್ತು ಟೆವಿನ್ ಇಮ್ಲಾಚ್ 14 ರನ್‌ಗಳೊಂದಿಗೆ ಅಜೇಯರಾಗಿ ಉಳಿದು ತಂಡಕ್ಕೆ ಸ್ವಲ್ಪ ಹೋರಾಟದ ಆಸರೆ ನೀಡಿದರು. ಒಟ್ಟಾರೆಯಾಗಿ ವಿಂಡೀಸ್ ಬ್ಯಾಟಿಂಗ್ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಹೋಯಿತು, ರವೀಂದ್ರ ಜಡೇಜಾ 3 ವಿಕೆಟ್ ಮಿಂಚಿದರೆ ಕುಲದೀಪ್ 1 ವಿಕೆಟ್ ಕಬಳಿಸಿದರು.
ಭಾರತ ತಂಡ ಎರಡನೇ ದಿನದಲ್ಲಿ ತನ್ನ ಇನ್ನಿಂಗ್ಸ್ ಅನ್ನು ಮುಂದುವರೆಸಿತು. ಯಶಸ್ವಿ ಜೈಸ್ವಾಲ್ 175 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿ ಔಟ್ ಆದರು. ಸಾಯಿ ಸುಧರ್ಶನ್ 87 ರನ್‌ಗಳೊಂದಿಗೆ ಉತ್ತಮ ಬೆಂಬಲ ನೀಡಿದರೂ ಶತಕಕ್ಕೆ ತಪ್ಪಿದರು. ನಾಯಕ ಶುಭಮನ್ ಗಿಲ್ 129 ರನ್‌ಗಳ ಅಜೇಯ ಶತಕದೊಂದಿಗೆ ಮಿಂಚಿದರು, ಇದರೊಂದಿಗೆ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 518/5 ರನ್‌ಗಳಿಗೆ ಡಿಕ್ಲೇರ್ ಮಾಡಿತು.
ನಿತೀಶ್ ಕುಮಾರ್ ರೆಡ್ಡಿ 43 ಮತ್ತು ಧ್ರುವ್ ಜುರೆಲ್ 44 ರನ್‌ಗಳೊಂದಿಗೆ ಉಪಯುಕ್ತ ಕೊಡುಗೆ ನೀಡಿದರು. ಭಾರತದ ಬ್ಯಾಟಿಂಗ್ ಲೈನ್‌ಅಪ್ ವಿಂಡೀಸ್ ಬೌಲರ್‌ಗಳನ್ನು ಸಂಪೂರ್ಣವಾಗಿ ಆಧೀನಗೊಳಿಸಿತು, ವಿಶೇಷವಾಗಿ ಜೊಮೆಲ್ ವಾರಿಕನ್ 3 ವಿಕೆಟ್ ಪಡೆದರೂ ತಂಡದ ಇತರ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್ ಮಾಡಲಿಲ್ಲ.





