ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತೀವ್ರ ಕಳಪೆ ಪ್ರದರ್ಶನ ನೀಡಿದ್ದು, 119ಕ್ಕೆ ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 119 ರನ್ ಗಳಿಸುವ ವೇಳೆಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 120 ರನ್ಗಳ ಸಾಧಾರಣ ಗುರಿ ನೀಡಿದೆ.
Innings Break!
Rishabh Pant scored 4⃣2⃣ as #TeamIndia posted 119 on the board!
Over to our bowlers now! 👍 👍
Scorecard ▶️ https://t.co/M81mEjp20F#T20WorldCup | #INDvPAK pic.twitter.com/PYFsTAurc0
— BCCI (@BCCI) June 9, 2024
11 ಓವರ್ಗಳ ಮುಕ್ತಾಯದ ವೇಳೆ ಕೇವಲ ಮೂರು ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದ ಟೀಮ್ ಇಂಡಿಯಾ, ನಾಟಕೀಯ ಕುಸಿತ ಕಂಡು ಮತ್ತೆ 30 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಗಿದೆ. 119 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್ನ ಇತಿಹಾಸದಲ್ಲಿ ಅತೀ ಕಡಿಮೆ ಮೊತ್ತ ಕಲೆ ಹಾಕಿದ ಬೇಡದ ದಾಖಲೆ ಬರೆದಿದೆ.
Terrific job by the bowlers as India are all out for 1️⃣1️⃣9️⃣ ✨
Over to the batters after the break 🏏#INDvPAK | #T20WorldCup | #WeHaveWeWill pic.twitter.com/89xbY8pMen
— Pakistan Cricket (@TheRealPCB) June 9, 2024
ಟೀಮ್ ಇಂಡಿಯಾ ಪರವಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಷಭ್ ಪಂತ್ 31 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿ, ಮೊಹಮ್ಮದ್ ಆಮಿರ್ಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಅಕ್ಷರ್ ಪಟೇಲ್ 20 ರನ್, ನಾಯಕ ರೋಹಿತ್ ಶರ್ಮಾ 13 ಗಳಿಸಿದರೆ, ಉಳಿದ ಯಾವ ಬ್ಯಾಟರ್ಗಳೂ ಕೂಡ ಎರಡಂಕೆ ದಾಟಲಿಲ್ಲ. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಮತ್ತೆ ಇಂದಿನ ಪಂದ್ಯದಲ್ಲೂ ವಿಫಲರಾದರು.
Pakistan’s fab four delivered in New York 🎯
👉 https://t.co/Vl1gwzchlJ | #INDvPAK | #T20WorldCup pic.twitter.com/Z73Td0dsty
— ESPNcricinfo (@ESPNcricinfo) June 9, 2024
ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಪಾಕಿಸ್ತಾನದ ಬೌಲರ್ಗಳು
ತನ್ನ ಸಾಂಪ್ರದಾಯಿಕ ಎದುರಾಳಿ ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದಿದ್ದನ್ನು ಬಳಸಿಕೊಂಡ ಪಾಕಿಸ್ತಾನದ ಬೌಲರ್ಗಳು, ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದರು.
ಪಾಕ್ ಪರ 4 ಓವರ್ ಎಸೆದ ನಸೀಮ್ ಶಾ ಕೇವಲ 21 ರನ್ ನೀಡಿ, ಮೂರು ವಿಕೆಟ್ ಪಡೆದು ಮಿಂಚಿದರು. ಮೂರು ಓವರ್ ಎಸೆದಿದ್ದ ಹಾರಿಸ್ ರೌಫ್ 21ಕ್ಕೆ ಮೂರು ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಆಮಿರ್ 23ಕ್ಕೆ 2, ಶಾಹೀನ್ ಶಾ ಅಫ್ರೀದಿ 29ಕ್ಕೆ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
India bowled out for 119.
– Lowest total for India in a T20 World Cup match where they’re bowled out. pic.twitter.com/wsZ8cijVGd
— Mufaddal Vohra (@mufaddal_vohra) June 9, 2024





