ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಟೆಸ್ಟ್ ಪಂದ್ಯಾವಳಿ ಶನಿವಾರ ಮುಕ್ತಾಯಗೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಹೊಸ ದಾಖಲೆ ಬರೆದಿದೆ. ಗರಿಷ್ಠ ರನ್ ಗಳಿಸಿ, ವಿಶ್ವದ ಗಮನ ಸೆಳೆದಿದೆ. ಹೆಚ್ಚು ರನ್‌ಗಳಿಸಿದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಿಂದ ಇಂಗ್ಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ಟೆಸ್ಟ್ ಟೂರ್ನಿ ನಡೆಯುತ್ತಿತ್ತು. ಶನಿವಾರ, ಟೂರ್ನಿಯ ಕೊನೆಯ ಪಂದ್ಯವಾದ 5ನೇ ಪಂದ್ಯ ನಡೆದಿದೆ. ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ.
ಟೂರ್ನಿಯಲ್ಲಿ ಭಾರತ ತಂಡವು ಬರೋಬ್ಬರಿ 3,468 ರನ್‌ಗಳು ಗಳಿಸಿದೆ. ಟೆಸ್ಟ್ ಸರಣಿಯಲ್ಲಿ ಅಧಿಕ ರನ್‌ಗಳನ್ನು ಗಳಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂತರದ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, 1989ರಲ್ಲಿ ಇಂಗ್ಲೆಂಡ್ ವಿರುದ್ಧವೇ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡು 3,877 ರನ್ ಬಾರಿಸಿತ್ತು.
ಈ ಹಿಂದೆ, ಟೆಸ್ಟ್ ಸರಣಿಯಲ್ಲಿ ಭಾರತ ತಂಡವೇ ಗಣಿಸಿದ್ದ ಅಧಿಕ ರನ್‌ಗಳ (3,270 ರನ್) ದಾಖಲೆಯನ್ನು ಮುರಿದಿದೆ. ಈ ರನ್‌ಗಳನ್ನು 1978-79ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದಿದ್ದ 6 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 3,270 ರನ್ ಗಳಿಸಿತ್ತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 10 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 471, 364, 587, 427/6 ಡಿಕ್ಲೇರ್, 387, 170, 358, 425/4, 224 ಹಾಗೂ 181/3* ರನ್‌ಗಳನ್ನು ಕಲೆ ಹಾಕಿದೆ.




