ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಏಕದಿನ ಪಂದ್ಯಗಳ ಸರಣಿ ಭಾನುವಾರ ಆರಂಭವಾಗಿದೆ. ಮಳೆಯಿಂದಾಗಿ ಕೆಲ ಸಮಯ ವಿಳಂಬವಾಗಿ ಸರಣಿಯ ಮೊದಲ ಪಂದ್ಯವು ಆರಂಭವಾಗಿದೆ. ಟಾಸ್ ಸೋತ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದ ಸ್ಟಾರ್ ಆಟಗಾರರಾದ ವಿರೋಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ನಾಯಕ ಶುಭಮನ್ ಗಿಲ್ ಭಾರೀ ಕಳಪೆ ಪ್ರದರ್ಶನ ನೀಡಿದ್ದು, ಮೊದಲ 10 ಓವರ್‌ಗಳಲ್ಲೇ ಔಟ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರೆ, ರೋಹಿತ್ ಶರ್ಮಾ 8 ರನ್‌ಗಳಿಗೆ ವಿಕೆಟ್ ನೀಡಿದ್ದಾರೆ. ನಾಯಕ ಗಿಲ್ 10 ಗಳಿಸಿ ಸ್ಕ್ರೀಜ್‌ನಿಂದ ಹೊರ ನಡೆದಿದ್ದಾರೆ. ಭಾರತ ತಂಡವು 10 ಓವರ್‌ಗಳಿಗೆ 3 ವಿಕೆಟ್ ನಷ್ಟದೊಂದಿಗೆ 37 ರನ್‌ಗಳನ್ನು ಮಾತ್ರವೇ ಗಳಿಸಿದೆ. ಇದು, 2023ರ ನಂತರದಲ್ಲಿ ಭಾರತ ತಂಡವು ಪವರ್‌ಪ್ಲೇನಲ್ಲಿ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಮಳೆಯ ಕಾರಣದಿಂದಾಗಿ 50 ಓವರ್‌ಗಳ ಪಂದ್ಯವನ್ನು 49 ಓವರ್‌ಗಳಿಗೆ ಇಳಿಸಲಾಗಿದೆ.




