ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯವು ಮಳೆಯಿಂದ ರದ್ದಾಗಿದ್ದು, ಸರಣಿ ಮುನ್ನಡೆಯಿದ್ದ ಕಾರಣ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ವಿಜಯ ಸಾಧಿಸಿದೆ. ಒಟ್ಟು 5 ಪಂದ್ಯಗಳಲ್ಲಿ 2 ಪಂದ್ಯಗಳು ಮಳೆಯಿಂದ ರದ್ದಾದವು.
ಬ್ರಿಸ್ಬೇನ್‌ನ ವೂಲೂಂಗಾಬಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಕೇವಲ 4.5 ಓವರ್‌ಗಳಲ್ಲಿ ತಂಡ 52 ರನ್‌ಗಳನ್ನು ಗಳಿಸಿತ್ತು. ಅಭಿಷೇಕ್ 13 ಎಸೆತಗಳಲ್ಲಿ 23 (ಒಂದು ಬೌಂಡರಿ 1 ಸಿಕ್ಸರ್) ಮತ್ತು ಗಿಲ್ 16 ಎಸೆತಗಳಲ್ಲಿ 29 (6 ಬೌಂಡರಿ) ರನ್‌ಗಳೊಂದಿಗೆ ಅಜೇಯರಾಗಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 28 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನಡೆಸಿತ್ತು. ಆದರೆ, ಆ ತರುವಾಯ ಮಳೆ ಅಡ್ಡಿಬಂದು ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.
ಇದನ್ನು ಓದಿದ್ದೀರಾ? ಸಮಾನತೆ ಹೆಸರಿನಲ್ಲಿ ಮಹಿಳಾ ಕ್ರಿಕೆಟಿಗರಿಗೆ ತಾರತಮ್ಯ ಮಾಡಿದ ಬಿಸಿಸಿಐ
ಆಸ್ಟ್ರೇಲಿಯಾ ಬೌಲರ್‌ಗಳಲ್ಲಿ ಬೆನ್ ಡ್ವಾರ್ಶುಯಿಸ್ 2 ಓವರ್‌ಗಳಲ್ಲಿ 27 ರನ್, ಕ್ಸೇವಿಯರ್ ಬಾರ್ಟ್ಲೆಟ್ 1.5 ಓವರ್‌ಗಳಲ್ಲಿ 13 ರನ್ ಮತ್ತು ನಥಾನ್ ಎಲ್ಲಿಸ್ 1 ಓವರ್‌ಗಳಲ್ಲಿ 12 ರನ್ ನೀಡಿದ್ದರು. ಆದರೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಸರಣಿ ಫಲಿತಾಂಶ:
ಭಾರತ 2-1 ಅಂತರದಿಂದ ಭಾರತಕ್ಕೆ ಸರಣಿ ಗೆಲುವು (ಒಟ್ಟು 5 ಪಂದ್ಯಗಳು: 2 ಗೆಲುವು, 1 ಸೋಲು, 2 ರದ್ದು).
ಸರಣಿ ಆಟಗಾರ:
ಅಭಿಷೇಕ್ ಶರ್ಮಾ (ಭಾರತ) – ಸರಣಿಯಲ್ಲಿ 163 ರನ್ ಗಳಿಸಿ ಪ್ರಶಸ್ತಿ ಪಡೆದರು.





