ಏಷ್ಯಾ ಕಪ್ ಕ್ರಿಕೆಟ್ | 10 ವಿಕೆಟ್ ಗೆಲುವಿನೊಂದಿಗೆ ಸೂಪರ್‌ 4 ಪ್ರವೇಶಿಸಿದ ಭಾರತ

Date:

ಏಷ್ಯಾ ಕಪ್ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಅವರ ಅರ್ಧ ಶತಕದ ನೆರವಿನಿಂದ ನೇಪಾಳ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯಗಳಿಸುವುದರೊಂದಿಗೆ ಪಾಕಿಸ್ತಾನದ ಜೊತೆ ಸೂಪರ್‌ ಫೋರ್‌ಗೆ ಅರ್ಹತೆ ಪಡೆದಿದೆ.

ನೇಪಾಳ ನೀಡಿದ 231 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ 2 ಓವರ್‌ಗಳಾಗುವಷ್ಟರಲ್ಲೇ ಮಳೆರಾಯನ ಆಗಮನವಾಯಿತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿಯಿತು. ವರುಣ ತಡೆ ನೀಡಿದ ನಂತರ 23 ಓವರ್‌ಗಳಲ್ಲಿ 145 ರನ್‌ ನಿಗದಿಪಡಿಸಲಾಯಿತು.

ಬಿರುಸಿನ ಆಟವಾಡಿದ ರೋಹಿತ್‌ ಶರ್ಮಾ 74(59 ಎಸೆತ, 5 ಸಿಕ್ಸ್, 6 ಫೋರ್) ಹಾಗೂ ಶುಭಮನ್‌ ಗಿಲ್ 67(62 ಎಸೆತ, 8 ಫೋರ್, 1 ಸಿಕ್ಸ್) ರನ್‌ ಗಳಿಸಿ 20.1 ಓವರ್‌ಗಳಲ್ಲಿ ಗುರಿ ಮುಟ್ಟಿ ಭಾರತಕ್ಕೆ ಜಯ ತಂದುಕೊಟ್ಟರು. ಏಷ್ಯಾ ಕಪ್ ಸೂಪರ್‌ 4ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸೆ.10ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುದ್ದಿ ಓದಿದ್ದೀರಾ? ದೇಶ-ದ್ವೇಷ ಮೀರಿ ನಿಂತ ನೀರಜ್ ಚೋಪ್ರಾ – ಭಾರತದ ನಿಜವಾದ ಕ್ರೀಡಾ ಜ್ಯೋತಿ

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ನಾಯಕ ರೋಹಿತ್ ಪೌದೆಲ್ ನೇತೃತ್ವದ ನೇಪಾಳ ತಂಡ ಸೋಂಪಾಲ್ ಕಾಮಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ 230 ರನ್‌ಗಳ ಜವಾಬ್ದಾರಿಯುತ ಮೊತ್ತ ಪೇರಿಸಿತು. ಭಾರತದ ಕಳಪೆ ಕ್ಷೇತ್ರ ರಕ್ಷಣೆಯ ನಡುವೆ ನೇಪಾಳ ದಿಟ್ಟ ಹೋರಾಟ ನೀಡಿತು. ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ ಕಾರಣ ಭಾರತ ದುಬಾರಿ ಬೆಲೆ ತೆತ್ತಿತು.

ನೇಪಾಳ ಆರಂಭಿಕ 4 ಓವರ್‌ಗಳಲ್ಲಿ 3 ಕ್ಯಾಚ್ ನೀಡಿತ್ತು. ಆದರೆ ಮೂರು ಕ್ಯಾಚ್‌ಗಳನ್ನು ಭಾರತದ ಫೀಲ್ಡರ್‌ಗಳು ಕೈಚೆಲ್ಲಿದರು. ಕುಶಾಲ್ ಭರ್ಟೆಲ್ ಹಾಗೂ ಆಸಿಫ್ ಶೇಕ್ ಜೊತೆಯಾಟ ನೇಪಾಳ ತಂಡಕ್ಕೆ ಉತ್ತಮ ಆರಂಭ ನೀಡಿತು. ಕುಶಾಲ್ ಭರ್ಟೆಲ್ 25 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 65 ರನ್ ಜೊತೆಯಾಟ ನೀಡಿತು. ಇತ್ತ ಆಸೀಫ್ ಶೇಕ್ 58 ರನ್ ಸಿಡಿಸಿ ಔಟಾದರು.

ಆರಂಭಿಕರ ವಿಕೆಟ್ ಪತನದ ಬಳಿಕ ನೇಪಾಳ ದಿಢೀರ್ ಕುಸಿತ ಕಂಡಿತು. ಭೀಮ್ ಶರ್ಕಿ 7, ನಾಯಕ ರೋಹಿತ್ ಪೌದೆಲ್ 5 ಹಾಗೂ ಕುಶಾಲ್ ಮಲ್ಲಾ 2 ರನ್‌ಗೆ ಪೆವಿಲಿಯನ್‌ಗೆ ತೆರಳಿದರು. ಗುಲ್ಶನ್ ಜಾ ಹಾಗೂ ದೀಪೇಂದ್ರ ಸಿಂಗ್ ಜೊತೆಯಾಟದಿಂದ ನೇಪಾಳ ಮತ್ತೆ ಚೇತರಿಸಿಕೊಂಡಿತು. ಗುಲ್ಶನ್ ಜಾ 23 ರನ್ ಕಾಣಿಕೆ ನೀಡಿದರು. ದೀಪೇಂದ್ರ ಸಿಂಗ್ 29 ರನ್ ಬಾರಿಸಿದರು.

ಅಂತಿಮ ಹಂತದಲ್ಲಿ ಸೋಂಪಾಲ್ ಕಮಿ ಹೋರಾಟ ನೇಪಾಳ ತಂಡವನ್ನು 200ರ ಗಡಿ ದಾಟಿಸಿತು. ಸೋಂಪಾಲ್ 48 ಪೇರಿಸಿದರು. ಆದರೆ ಸಂದೀಪ್ ಲಮಿಚಾನೆ, ಕರನ್ ಕೆಸಿ ಹಾಗೂ ಲಲಿತ್ ರಾಜಬನ್ಶಿ ಹೋರಾಟ ನೀಡಲಿಲ್ಲ. ಹೀಗಾಗಿ ನೇಪಾಳ ಅಂತಿಮವಾಗಿ 48.2 ಓವರ್‌ಗಳಲ್ಲಿ 230 ರನ್ ಗಳಿಸಿ ಆಲೌಟ್ ಆಯಿತು.ಭಾರತದ ಪರ ರವೀಂದ್ರ ಜಡೇಜಾ 40/3, ಮೊಹಮ್ಮದ್ ಸಿರಾಜ್ 61/3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳೆನಿಸಿದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...