ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದೆ.
ಮಾರ್ಚ್ 28ರಂದು ನಡೆಯಲಿರುವ ಬಹುನಿರೀಕ್ಷಿತ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಎದುರಿಸಲಿದೆ. ಈ ರೋಚಕ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿರುವುದು ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿ ಮತ್ತಷ್ಟು ಹರ್ಷ ತಂದಿದೆ.
ಸದ್ಯ ಬಿಸಿಸಿಐ ಮೊದಲ 16 ದಿನಗಳಲ್ಲಿ ನಡೆಯಲಿರುವ ಕೇವಲ 20 ಪಂದ್ಯಗಳ (ಮಾರ್ಚ್ 28 ರಿಂದ ಏಪ್ರಿಲ್ 12ರವರೆಗೆ) ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಯಿಂದ ಟೂರ್ನಿಯ ಉಳಿದ ಪಂದ್ಯಗಳ ದಿನಾಂಕಗಳನ್ನು ಆಯಾ ರಾಜ್ಯಗಳ ಚುನಾವಣೆ ದಿನಾಂಕಗಳು ಅಂತಿಮಗೊಂಡ ನಂತರ ಪ್ರಕಟಿಸಲು ನಿರ್ಧರಿಸಲಾಗಿದೆ.
ಈ ಬಾರಿಯ ಐಪಿಎಲ್ ಆವೃತ್ತಿಯು ಇತಿಹಾಸದಲ್ಲೇ ಅತಿ ದೊಡ್ಡ ಟೂರ್ನಿಯಾಗಲಿದ್ದು, ಒಟ್ಟು 84 ಪಂದ್ಯಗಳು ನಡೆಯಲಿವೆ. ಟೂರ್ನಿಯು ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯಲಿದ್ದು, ಮೇ 31 ರಂದು ಬೆಂಗಳೂರಿನಲ್ಲಿಯೇ ಫೈನಲ್ ಪಂದ್ಯ ಜರುಗಲಿದೆ ಹಾಗೂ ಪ್ಲೇ-ಆಫ್ ಪಂದ್ಯಗಳು ಮೇ 26 ರಿಂದ ಆರಂಭವಾಗಲಿವೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಕಳೆದ ವರ್ಷ ಆರ್‌ಸಿಬಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದ ಬಳಿಕ ಯಾವುದೇ ಪಂದ್ಯಗಳು ನಡೆದಿರಲಿಲ್ಲ. ಇದೀಗ ಕಟ್ಟುನಿಟ್ಟಾದ ಹೊಸ ಭದ್ರತಾ ನಿಯಮಗಳೊಂದಿಗೆ ಮತ್ತೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲು ಸಜ್ಜಾಗಿವೆ. ತವರಿನ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಚಾಂಪಿಯನ್ ತಂಡವನ್ನು ಮತ್ತೆ ಕಣದಲ್ಲಿ ಕಣ್ತುಂಬಿಕೊಳ್ಳುವ ಸದವಕಾಶ ಒದಗಿಬಂದಿದೆ.
ಮೊದಲ ಹಂತದ ಪ್ರಮುಖ ಪಂದ್ಯಗಳ ವೇಳಾಪಟ್ಟಿ:
ಮಾರ್ಚ್ 28: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH) – ಬೆಂಗಳೂರು.
ಮಾರ್ಚ್ 29: ಮುಂಬೈ ಇಂಡಿಯನ್ಸ್ (MI) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಮುಂಬೈ.
ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) – ಗುವಾಹಟಿ.
ಮಾರ್ಚ್ 31: ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಗುಜರಾತ್ ಟೈಟಾನ್ಸ್ (GT) – ಮುಲ್ಲನ್‌ಪುರ್.
ಏಪ್ರಿಲ್ 01 ಬುಧವಾರ ಲಕ್ನೋ ಸೂಪರ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ – ಲಕ್ನೋ
ಏಪ್ರಿಲ್ 02 ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಕೋಲ್ಕತ್ತಾ
ಏಪ್ರಿಲ್ 03 ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ – ಚೆನ್ನೈ
ಏಪ್ರಿಲ್ 04 ಶನಿವಾರ ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ದೆಹಲಿ
ಏಪ್ರಿಲ್ 04 ಶನಿವಾರ ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
ಏಪ್ರಿಲ್ 05 ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್- ಹೈದರಾಬಾದ್
ಏಪ್ರಿಲ್ 05 ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
ಏಪ್ರಿಲ್ 06 ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ – ಕೋಲ್ಕತ್ತಾ
ಏಪ್ರಿಲ್ 07 ಮಂಗಳವಾರ ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಗುವಾಹಟಿ
ಏಪ್ರಿಲ್ 08 ಬುಧವಾರ ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ – ದೆಹಲಿ
ಏಪ್ರಿಲ್ 09 ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಕೋಲ್ಕತ್ತಾ
ಏಪ್ರಿಲ್ 10 ಶುಕ್ರವಾರ ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ – ಬೆಂಗಳೂರು





