ಜೆಮಿಮಾ ರಾಡ್ರಿಗ್ಸ್ | ಭಾರತದ ಹೆಮ್ಮೆ; ಕಣ್ಣೀರಿನೊಳಗೆ ಕಂಗೊಳಿಸಿದ ಗೆಲುವು

Date:

ಜೆಮಿಮಾ ಕ್ರಿಕೆಟ್‌ ತಾರೆ ಮಾತ್ರವಲ್ಲ ಬಹುಮುಖ ತಾರೆಯಾಗಿದ್ದಾರೆ. ಅವರು ಗಿಟಾರ್ ಬಾರಿಸುತ್ತಾರೆ, ಹಾಡುತ್ತಾರೆ. ತಂಡದವರೊಂದಿಗೆ ನೃತ್ಯ ಮಾಡುತ್ತಾರೆ. ಅವರ ನೆಚ್ಚಿನ ಶ್ವಾನ ಜೇಡ್‌ನೊಂದಿಗೆ ಆಟವಾಡುತ್ತಾರೆ. ಗೂಗಲ್ ಸರ್ಚ್‌ನಲ್ಲಿ ಜೆಮಿಮಾ ಹೆಸರು ಹಾಕಿದರೆ, ಗಿಟಾರ್, ನೃತ್ಯ, ಆಕೆಯ ನೆಚ್ಚಿನ ಶ್ವಾನದ ಚಿತ್ರಗಳು ಬರುತ್ತವೆ

ಗುರುವಾರ ರಾತ್ರಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಜೆಮಿಮಾ ರಾಡ್ರಿಗ್ಸ್ ಕ್ರಿಕೆಟ್ ಪ್ರಪಂಚವನ್ನೇ ಮಂತ್ರಮುಗ್ಧಳನ್ನಾಗಿ ಮಾಡಿದರು. ಆಸ್ಟ್ರೇಲಿಯಾ ನೀಡಿದ್ದ 339 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತ ತಂಡ ತೀವ್ರ ಒತ್ತಡದಲ್ಲಿತ್ತು. ಆ ಸಮಯದಲ್ಲಿ ಕ್ರೀಸ್‌ಗೆ ಬಂದ ಜೆಮಿಮಾ 134 ಎಸೆತಗಳಲ್ಲಿ ಅಜೇಯ 127 ರನ್‌ಗಳ ಶತಕ ಬಾರಿಸಿ, ಭಾರತವನ್ನು ಐತಿಹಾಸಿಕ ಗೆಲುವಿನತ್ತ ಕರೆದೊಯ್ದರು. ಅವರ ಬ್ಯಾಟಿಂಗ್ ಕೇವಲ ಅಂಕೆಗಳ ಆಟವಲ್ಲ; ಅದು ಧೈರ್ಯ, ಮಾನಸಿಕ ಬಲ ಮತ್ತು ನಂಬಿಕೆಯ ಸಂಕೇತವಾಗಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ (89) ಜೊತೆ 167 ರನ್‌ಗಳ ಜೊತೆಯಾಟ ಕಟ್ಟಿದ ಅವರು ತಂಡಕ್ಕೆ ದೃಢ ಆಧಾರ ನೀಡಿದರು.

ಹರ್ಮನ್ ಔಟಾದ ಬಳಿಕ ಎಲ್ಲರೂ ಆತಂಕಗೊಂಡರೂ, ಜೆಮಿಮಾ ಶಾಂತವಾಗಿ ಆಟ ಮುಂದುವರಿಸಿದರು. ಅವರ ಪ್ರತಿಯೊಂದು ಶಾಟ್‌ — ರಿವರ್ಸ್ ಸ್ವೀಪ್, ಡ್ರೈವ್, ಸ್ಕೂಪ್ — ಪ್ರೇಕ್ಷಕರನ್ನು ಉತ್ಸಾಹಕ್ಕೆ ತಳ್ಳಿತು. ಭಾರತ ಗೆದ್ದ ಕ್ಷಣದಲ್ಲಿ ಜೆಮಿಮಾ ನೆಲಕ್ಕೆ ಮಂಡಿಯೂರಿ ಕಣ್ಣೀರು ಹಾಕಿದರು. ಅದು ಕ್ರೀಡಾ ಭಾವನೆಯ ಶುದ್ಧ ಕ್ಷಣವಾಗಿತ್ತು. ಪಂದ್ಯದ ನಂತರ ಜೆಮಿಮಾ ಭಾವುಕರಾಗಿ ಅಳುತ್ತಾ ತನ್ನ ತಂದೆ-ತಾಯಿಯನ್ನು ತಬ್ಬಿಕೊಂಡರು. “ನಾನು ಯೇಸುವನ್ನು ಧನ್ಯವಾದಿಸುತ್ತೇನೆ” ಎಂದು ಹೇಳಿ, ಬೈಬಲ್‌ನ ಸಾಲುಗಳನ್ನು ನೆನಪಿಸಿಕೊಂಡರು. ಈ ಆಟ ಅವರ ಮಾನಸಿಕ ಶಕ್ತಿಯನ್ನು ತೋರಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೆಮಿಮಾ ಕುಟುಂಬ ಮೂಲತಃ ಮಂಗಳೂರಿನ ಕ್ರೈಸ್ತ ಸಮುದಾಯದವರು. ವರ್ಷಗಳ ಹಿಂದೆ ಅವರ ತಾತ-ಅಜ್ಜಿ ಮುಂಬೈಗೆ ಬಂದು ನೆಲಸಿದರು. ಕರಾವಳಿ ಸಂಸ್ಕೃತಿಯ ಮೃದುತೆ ಮತ್ತು ಮುಂಬೈನ ಚುರುಕಿನ ಸಂಯೋಜನೆಯೇ ಜೆಮಿಮಾ ಅವರ ವ್ಯಕ್ತಿತ್ವದ ಶಕ್ತಿ. ಜೆಮಿಮಾ ರಾಡ್ರಿಗ್ಸ್ 2000ರ ಸೆಪ್ಟೆಂಬರ್ 5ರಂದು ಮುಂಬೈಯ ಭಾಂದುಪ್‌ನಲ್ಲಿ ಜನಿಸಿದರು. ಅವರ ತಂದೆ ಇವಾನ್ ರಾಡ್ರಿಗ್ಸ್ ಕ್ರಿಕೆಟ್ ಕೋಚ್ ಹಾಗೂ ಕ್ರೀಡಾಪ್ರಿಯರು. ತಾಯಿ ಲವಿತಾ ಗೃಹಿಣಿ. ಜೆಮಿಮಾ ಅವರಿಗೆ ಇಬ್ಬರು ಸಹೋದರರು – ಎನೋಕ್ ಮತ್ತು ಎಲಿ. ಕುಟುಂಬದಲ್ಲಿ ಕ್ರೀಡೆಗೆ ಬಹಳ ಮಹತ್ವ. ತಂದೆ ಇವನ್ ಜೂನಿಯರ್ ಕ್ರಿಕೆಟ್ ಕೋಚ್ ಆಗಿದ್ದರು. ಅವರು ತಮ್ಮ ಶಾಲೆಯಲ್ಲಿ ಬಾಲಕಿಯರ ಕ್ರಿಕೆಟ್ ತಂಡವನ್ನು ರಚಿಸಿದರು.

Jemimah 9

ಜೆಮಿಮಾ 4 ವರ್ಷದಲ್ಲೇ ಕ್ರಿಕೆಟ್ ಆಡಲು ಆರಂಭಿಸಿದರು. ಅವರ ಸಹೋದರರು ಕೂಡ ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್‌ನಲ್ಲಿ ಇನ್ನಷ್ಟು ಸಾಧನೆ ಮಾಡುವ ಸಲುವಾಗಿ ಜೆಮಿಮಾ ಕುಟುಂಬ ಭಾಂದುಪ್‌ನಿಂದ ಬಾಂದ್ರಾ ವೆಸ್ಟ್‌ಗೆ ಸ್ಥಳಾಂತರವಾಯಿತು, ಏಕೆಂದರೆ ಅಲ್ಲಿ ಉತ್ತಮ ಕ್ರೀಡಾ ಸೌಲಭ್ಯಗಳಿದ್ದವು. ಜೆಮಿಮಾ ಸೇಂಟ್ ಜೋಸೆಫ್ ಕಾನ್ವೆಂಟ್ ಹೈಸ್ಕೂಲ್ ಮತ್ತು ರಿಜ್ವಿ ಕಾಲೇಜ್‌ನಲ್ಲಿ ಓದಿದರು. ಹಾಕಿಯಲ್ಲೂ ಅವರಿಗೆ ಆಸಕ್ತಿಯಿತ್ತು. ಆದರೆ ಕುಟುಂಬದ ಆಟವನ್ನು ಬಿಟ್ಟುಕೊಡಲು ಅವರು ತಯಾರಾಗಿರಲಿಲ್ಲ. ಸತತ ಪರಿಶ್ರಮದಿಂದ ಮಹಾರಾಷ್ಟ್ರ ಅಂಡರ್-17 ತಂಡಕ್ಕೆ ಆಯ್ಕೆಯಾದರು. ಆದರೆ ಕ್ರಿಕೆಟ್ ಅವರ ಮೊದಲ ಪ್ರೀತಿ. ತಂದೆಯ ಬೆಂಬಲದಿಂದ ಅವರು ಬೆಳೆದರು. “ತಂದೆ ನನ್ನ ಹೀರೋ” ಎಂದು ಜೆಮಿಮಾ ಯಾವಾಗಲೂ ಹೇಳುತ್ತಾರೆ. ಕುಟುಂಬದವರು ಸದಾ ಅವರ ಜೊತೆಗಿದ್ದರು, ಸಂತೋಷ ಮಾತ್ರವಲ್ಲದೆ ದುಃಖದ ಸಮಯದಲ್ಲೂ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುತ್ತಿದ್ದರು.

2018ಕ್ಕೆ ಟೀಂ ಇಂಡಿಯಾಗೆ ಆಯ್ಕೆ

ಜೆಮಿಮಾ ಅವರ ಪಯಣ ಅತ್ಯಂತ ವೇಗದಲ್ಲಿ ಸಾಗಿತು. 12ನೇ ವಯಸ್ಸಿನಲ್ಲಿ ಅಂಡರ್-19 ಕ್ರಿಕೆಟ್‌ನಲ್ಲಿ ಆಯ್ಕೆ, 13ನೇ ವಯಸ್ಸಿನಲ್ಲಿ ರಾಜ್ಯ ತಂಡದ ಸದಸ್ಯೆ. 2014ರಲ್ಲಿ ಮುಂಬೈ ಮಹಿಳಾ ತಂಡದ ಸದಸ್ಯೆಯಾಗಿದ್ದ ಅವರು, ಅಂದಿನಲ್ಲೇ ಭವಿಷ್ಯದ ತಾರೆ ಎಂಬ ಖ್ಯಾತಿ ಪಡೆದರು. 2017ರಲ್ಲಿ ಸೌರಾಷ್ಟ್ರ ವಿರುದ್ಧ ಅಜೇಯ 202 ರನ್ ಬಾರಿಸಿ ಇತಿಹಾಸ ನಿರ್ಮಿಸಿದರು — ಮಹಿಳಾ ಕ್ರಿಕೆಟ್‌ನಲ್ಲಿ 50 ಓವರ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತದ ಎರಡನೇ ಮಹಿಳೆ. ಆ ದಿನದಿಂದಲೇ ಜೆಮಿಮಾ ರೋಡ್ರಿಗಸ್ ಎಂಬ ಹೆಸರು ಕ್ರಿಕೆಟ್ ವಲಯದಲ್ಲಿ ಪ್ರಕಾಶಮಾನವಾಯಿತು.

2018ರಲ್ಲಿ ಅವರ ಜೀವನ ಬದಲಾಗಿತು. ಫೆಬ್ರವರಿ 13ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಾದಾರ್ಪಣೆ ಮಾಡಿದರು. ಡಿಸೆಂಬರ್ 2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಆಯ್ಕೆಯಾದರು. ಇಲ್ಲಿಯವರೆಗೂ ತಮ್ಮ ಅಂತಾರಾಷ್ಟ್ರೀಯ ವೃತ್ತಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 3 ಟೆಸ್ಟ್‌ಗಳಲ್ಲಿ 235 ರನ್ (58.75), 57 ಏಕದಿನಗಳಲ್ಲಿ 1598 ರನ್ (2 ಶತಕ, 8 ಅರ್ಧಶತಕ),112 ಟಿ20 ಪಂದ್ಯಗಳಲ್ಲಿ 2375 ರನ್ (13 ಅರ್ಧಶತಕ) ಪೇರಿಸಿದ್ದಾರೆ. 2017ರಲ್ಲಿ ಬಾರಿಸಿದ ದ್ವಿಶತಕದಿಂದ ಹಿಡಿದು, 2025ರ ಸೆಮಿಫೈನಲ್ ಶತಕದವರೆಗೂ ಪ್ರತಿ ಪಂದ್ಯವು ಹೊಸ ಅಧ್ಯಾಯವಾಗಿದೆ.

ಜೆಮಿಮಾ ಸಾಧನೆಗೆ 2018ರಲ್ಲಿ ಬಿಸಿಸಿಐಯಿಂದ ಜಗಮೋಹನ್ ದಲ್ಮಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದಲ್ಲದೆ  2021ರ ವಿದೇಶಿ ತಂಡವಾದ ಹಂಡ್ರೆಡ್ ಟೂರ್ನಿಯಲ್ಲಿ ನಾರ್ಥರ್ನ್ ಸೂಪರ್‌ಚಾರ್ಜಸ್‌ ಪರವಾಗಿ 249 ರನ್ ಬಾರಿಸಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದರು. ಕಾಮನ್ವೆಲ್ತ್ ಗೇಮ್ಸ್ (2022) ನಲ್ಲಿ ಸಿಲ್ವರ್ ಮೆಡಲ್, ಏಷ್ಯಾ ಕಪ್ ಮತ್ತು ಏಷ್ಯನ್ ಗೇಮ್ಸ್ ಗೆಲುವುಗಳು ಅವರ ಸಾಧನೆಯ ಹೆಮ್ಮೆ. 2023ರ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಹಿ ಕ್ಯಾಪಿಟಲ್ಸ್ ಪರವಾಗಿ 2.2 ಕೋಟಿ ರೂಪಾಯಿಗೆ ಖರೀದಿಯಾದರು. ಇದು ಅವರ ಪ್ರತಿಭೆಗೆ ಸಂದ ಮನ್ನಣೆ. ಆಲ್‌ರೌಂಡರ್ ಆಗಿರುವ ಅವರು ಟೀಂ ಇಂಡಿಯಾ, ದೇಶೀ ಕ್ರಿಕೆಟ್‌ ಅಲ್ಲದೆ ವಿದೇಶಿ ತಂಡಗಳಾದ ಸೂಪರ್‌ನೋವಾಸ್, ಯಾರ್ಕ್‌ಷೈರ್ ಡೈಮಂಡ್ಸ್, ನಾರ್ಥರ್ನ್ ಸೂಪರ್‌ಚಾರ್ಜರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಟ್ರೈಲ್‌ಬ್ಲೇಜರ್ಸ್, ಮೆಲ್ಬೋರ್ನ್ ಸ್ಟಾರ್ಸ್, ಡೆಲ್ಹಿ ಕ್ಯಾಪಿಟಲ್ಸ್, ಟ್ರಿನ್‌ಬಾಗೋ ನೈಟ್ ರೈಡರ್ಸ್, ಬ್ರಿಸ್ಬೇನ್ ಹೀಟ್ ತಂಡಗಳಲ್ಲಿ ಆಡಿದ್ದಾರೆ.

Jemimah Rodrigues 1

ಖಾರ್ ಜಿಮ್ಖಾನಾ ವಿವಾದ

ಆದರೆ ಜೀವನ ಯಾವಾಗಲೂ ಒಳ್ಳೆಯ ಪಿಚ್ ಆಗಿರುವುದಿಲ್ಲ. 2024ರ ಅಕ್ಟೋಬರ್‌ನಲ್ಲಿ ಅವರ ಜೀವನಕ್ಕೆ ಕಪ್ಪು ಮೋಡ ಆವರಿಸಿತು. ಮುಂಬೈನ  ಖಾರ್ ಜಿಮ್ಖಾನಾ ವಿವಾದ ಜೆಮಿಮಾ ಜೀವನದ ದುಃಖದ ದಿನವಾಗಿದೆ.  ಅವರ ತಂದೆ ಇವಾನ್ ರಾಡ್ರಿಗ್ಸ್ ಇವಾನ್ ಕ್ಲಬ್‌ನ ಬ್ಯಾಂಕ್ವೆಟ್ ಹಾಲಿನಲ್ಲಿ 35 ಧಾರ್ಮಿಕ ಸಭೆಗಳನ್ನು ನಡೆಸಿದ ಆರೋಪದ ಮೇಲೆ ಕ್ಲಬ್ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. “ಇದು ಮತಾಂತರ ಪ್ರಯತ್ನ” ಎಂಬ ಆರೋಪಗಳು ಟ್ರೋಲ್‌ಗಳ ಮೂಲಕ ಹಬ್ಬಿದವು. ಸಾಮಾಜಿಕ ಮಾಧ್ಯಮಗಳಲ್ಲಿ ಜೆಮಿಮಾ ವಿರುದ್ಧ ನಿಂದನೆ. ಕ್ರೀಡೆಗೆ ಸಂಬಂಧಿಸದ ವಿಷಯವಾಗಿತ್ತು. ಆದರೂ ಜೆಮಿಮಾ ಮೇಲೆ ಪರಿಣಾಮ ಬೀರಿತ್ತು. ಆ ಸಮಯದಲ್ಲಿ ಜೆಮಿಮಾ ಆತಂಕ ಮತ್ತು ಖಿನ್ನತೆಗೊಳಗಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ಆಘಾತದಿಂದ ಹೊರಬಂದರು. ಆನಂತರ ಅವರು ಹೇಳಿದ ಮಾತು ‘ಬೈಬಲ್‌ನ ಒಂದು ಸಾಲು ಅವಳ ನಂಬಿಕೆಯ ಶಕ್ತಿ:“ರಾತ್ರಿ ಅತ್ತ ನಂತರ ಬೆಳಿಗ್ಗೆ ಸಂತೋಷ ಬರುತ್ತದೆ.” ಇದನ್ನು ಯಾವಾಗಲು ತಮ್ಮ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ.

ಜೆಮಿಮಾ ಬಹುಮುಖ ಪ್ರತಿಭೆ

ಜೆಮಿಮಾ ಕ್ರಿಕೆಟ್‌ ತಾರೆ ಮಾತ್ರವಲ್ಲ ಬಹುಮುಖ ತಾರೆಯಾಗಿದ್ದಾರೆ. ಅವರು ಗಿಟಾರ್ ಬಾರಿಸುತ್ತಾರೆ, ಹಾಡುತ್ತಾರೆ. ತಂಡದವರೊಂದಿಗೆ ನೃತ್ಯ ಮಾಡುತ್ತಾರೆ. ಅವರ ನೆಚ್ಚಿನ ಶ್ವಾನ ಜೇಡ್‌ನೊಂದಿಗೆ ಆಟವಾಡುತ್ತಾರೆ. ಗೂಗಲ್ ಸರ್ಚ್‌ನಲ್ಲಿ ಜೆಮಿಮಾ ಹೆಸರು ಹಾಕಿದರೆ, ಗಿಟಾರ್, ನೃತ್ಯ, ಆಕೆಯ ನೆಚ್ಚಿನ ಶ್ವಾನದ ಚಿತ್ರಗಳು ಬರುತ್ತವೆ. ಬಿಡುವಾಗಿದ್ದಾಗ ಬೈಬಲ್ ಓದುತ್ತಾರೆ. ಕಷ್ಟದ ಸಮಯದಲ್ಲಿ ಬೈಬಲ್ ಉತ್ತೇಜನ ನೀಡುತ್ತದೆ ಎಂದು ಹೇಳುತ್ತಾರೆ. ವಿಶ್ವಕಪ್‌ನ ಆರಂಭದಲ್ಲಿ ಆತಂಕಕ್ಕೆ ಒಳಗಾಗಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯ ರನ್‌ಗೆ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧ ಬೆಂಚ್‌ನಲ್ಲಿ ಕೂರಿಸಲಾಗಿತ್ತು. ಆತ್ಮವಿಶ್ವಾಸ ಕಡಿಮೆಯಾಗಿತ್ತು.

ಇದನ್ನೂ ಓದಿ ವಿಶ್ಲೇಷಣೆ | ಜನಪ್ರಿಯ ಆಟಕ್ಕೆ ಮೆರಗು ತಂದವರು; ಭಾರತೀಯ ಮಹಿಳೆಯರ ಕ್ರಿಕೆಟ್‌ ಯಶೋಗಾಥೆ

ಆದರೆ ಕುಟುಂಬ, ಸ್ನೇಹಿತರು ಆಕೆಗೆ ಬೆಂಬಲ ನೀಡಿದರು. ಸೋತಾಗ ಜೆಮಿಮಾ ನಿತ್ಯ ಕಣ್ಣೀರಿಡುತ್ತಿದ್ದರು. ಕುಟುಂಬ ಮತ್ತು ಆಪ್ತರು ಅವರಿಗೆ ಧೈರ್ಯ ತುಂಬಿ ಅವರನ್ನು ಮಾನಸಿಕವಾಗಿ ಬಲಪಡಿಸಿದರು. ಜೆಮಿಮಾ ಅವರ ಬಗ್ಗೆ ಎಷ್ಟು ಹೇಳಿದರೂ ಮುಗಿಯಲಾರದು. ಅವರು ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಜೀವನದಲ್ಲಿ ಕೂಡ ಹೋರಾಡುತ್ತಾರೆ. ತಂಡದವರನ್ನು ನಗಿಸುತ್ತಾರೆ, ಅವರದ್ದು ಸದಾ ನಗುಮುಖ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...