ರಣಜಿ ಟ್ರೋಫಿ | ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ; ಕ್ವಾರ್ಟರ್ ಫೈನಲ್‌ ಕನಸು ಜೀವಂತ

Date:

ರಣಜಿ ಟ್ರೋಫಿ 2025–26 ರ ಸಾಲಿನ ಎಲೈಟ್ ಗ್ರೂಪ್ ‘ಬಿ’ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಚಂಡೀಗಢ ತಂಡದ ವಿರುದ್ಧ ಇನಿಂಗ್ಸ್ ಮತ್ತು 185 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೂರನೇ ದಿನದಲ್ಲಿ ಶ್ರೇಯಸ್ ಗೋಪಾಲ್‌ ಹಾಗೂ ಶಿಖರ್‌ ಶೆಟ್ಟಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಕರ್ನಾಟಕವನ್ನು ಗೆಲುವನ್ನು ಸುಲಭವಾಗಿಸಿತು. ಈ ಜಯದಿಂದ ತಂಡದ ಕ್ವಾರ್ಟರ್ ಫೈನಲ್ ಅವಕಾಶಗಳು ಇನ್ನಷ್ಟು ಬಲಗೊಂಡಿವೆ.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 547 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿದ ನಂತರ, ಚಂಡೀಗಢ ತಮ್ಮ ಮೊದಲ ಇನಿಂಗ್ಸ್‌ನಲ್ಲಿ 222 ರನ್‌ಗಳಿಗೆ ಆಲೌಟ್‌ ಆಗಿ ಫಾಲೋ ಆನ್ ಪಡೆದ ನಂತರ ಎರಡನೇ ಇನಿಂಗ್ಸ್‌ನಲ್ಲಿ 140 ರನ್‌ಗಳಿಗೆ ಆಲೌಟ್‌ ಆಗಿ ಸೋಲು ಒಪ್ಪಿಕೊಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಎರಡೂ ಇನಿಂಗ್ಸ್‌ಗಳಲ್ಲಿ ಕರ್ನಾಟಕದ ಬೌಲಿಂಗ್ ಅಮೋಘವಾಗಿತ್ತು. ಶ್ರೇಯಸ್ ಗೋಪಾಲ್ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 10 ವಿಕೆಟ್‌ಗಳನ್ನು(7/73 ಮತ್ತು 3/45) ಕಬಳಿಸಿದರು. ಶಿಖರ್ ಶೆಟ್ಟಿ 7 ವಿಕೆಟ್‌ಗಳು (2/43 , 5/61) ಕಬಳಿಸಿ ಚಂಡೀಗಢವನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದರು.

ಇದನ್ನು ಓದಿದ್ದೀರಾ? ಐಪಿಎಲ್ 2026: ಬೆಂಗಳೂರಿನಿಂದ ಎಲ್ಲ ಆರ್‌ಸಿಬಿ ಪಂದ್ಯಗಳು ಸ್ಥಳಾಂತರ

ಬ್ಯಾಟಿಂಗ್‌ನಲ್ಲಿ ಆರ್‌ ಸ್ಮರಣ್ ಅಜೇಯ 227 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರೆ, ಅನುಭವಿ ಕರುಣ್‌ ನಾಯರ್ 95 ಮತ್ತು ಶ್ರೇಯಸ್ ಗೋಪಾಲ್ 62 ರನ್‌ಗಳಿಂದ ಕರ್ನಾಟಕ ದೊಡ್ಡ ಮೊತ್ತ ಪೇರಿಸಿತು.

ಚಂಡೀಗಢ ಪರ ನಾಯಕ ಮನನ್ ವೋರಾ 106 ರನ್‌ಗಳ ಶತಕದೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಹೋರಾಟ ಮಾಡಿದರು. ಆದರೆ ಎಸ್ ಗೋಪಾಲ್, ಶಿಖರ್‌ ಅವರ ಬೌಲಿಂಗ್ ದಾಳಿಗೆ ಉಳಿದ ಬ್ಯಾಟರ್‌ಗಳು ಸರದಿ ಸಾಲಿನಂತೆ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು.

ಈ ದೊಡ್ಡ ಅಂತರದ ಗೆಲುವಿನಿಂದ 7 ಅಂಕ ಪಡೆದಿರುವ ಕರ್ನಾಟಕದ ಒಟ್ಟು ಅಂಕಗಳು 20ಕ್ಕೆ ಏರಿ ಗ್ರೂಪ್ ‘ಬಿ’ಯಲ್ಲಿ 2ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ (15 ಅಂಕ) ಅನ್ನು ಹಿಂದಿಕ್ಕಿದ ಕರ್ನಾಟಕ, ಉಳಿದ ಪಂದ್ಯಗಳಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್‌ಗೆ ಸುಲಭವಾಗಿ ಅರ್ಹತೆ ಪಡೆಯಬಹುದು. ಟಾಪ್-2 ತಂಡಗಳು ಮುಂದಿನ ಹಂತಕ್ಕೆ ಅರ್ಹವಾಗುವ ನಿಯಮದಂತೆ, ಕರ್ನಾಟಕದ ಅಂಕಗಳ ಪಟ್ಟಿಯಲ್ಲಿ ಉತ್ತಮವಾಗಿದೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...