ಐಪಿಎಲ್ ಹಾಗೂ ಕರ್ನಾಟಕ ರಣಜಿ ಆಟಗಾರ ಕೆ ಸಿ ಕಾರಿಯಪ್ಪ ಅವರ ವಿರುದ್ದ ಯುವತಿಯೊಬ್ಬರು ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ.
ಕಾರಿಯಪ್ಪ ಅವರು ಬೆಂಗಳೂರಿನ ಬಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಕ್ರಿಕೆಟಿಗನ ಮಾಜಿ ಪ್ರಿಯತಮೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಕಾರಿಯಪ್ಪ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಕಾರಿಯಪ್ಪ ಕೂಡ ಒಂದೂವರೆ ವರ್ಷದ ಹಿಂದೆ ತಮ್ಮ ನಡುವಿನ ಪ್ರೇಮವನ್ನು ಯುವತಿ ಮುರಿದುಕೊಂಡಿದ್ದಾರೆ ಎಂದು ಕಾರಿಯಪ್ಪ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2018ರಲ್ಲಿ ಮದುವೆಯಾಗಿದ್ದು, 2020ರಲ್ಲಿ ವಿವಾಹ ವಿಚ್ಚೇದನವಾಗಿದೆ. ಒಂದೂವರೆ ವರ್ಷದ ಹಿಂದೆ ಕಾರಿಯಪ್ಪವನರ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಒಪ್ಪಿಕೊಂಡು ದೈಹಿಕ ಸಂಪರ್ಕ ಬೆಳಸಿ ನಂತರ ಗರ್ಭಪಾತವಾಯಿತು. ಈ ಸಂಬಂಧ ದೂರು ದಾಖಲಾಗಿತ್ತು. ನಂತರ ಆರೋಪಿಯ ಮನವಿಯ ಮೇರೆಗೆ ದೂರನ್ನು ಹಿಂಪಡೆಯಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಇದಾದ ಬಳಿಕ ಮದುವೆಯಾಗೋಣ ಎಂದು ಹೇಳಿ ಕಾರಿಯಪ್ಪ ನನ್ನ ಬಳಿ 2 ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾರೆ. ನಂತರ ಆರೋಪಿ ಪೋಷಕರು ಮದುವೆಗೆ ವಿರೋಧಿಸುತ್ತಾರೆ. ಇದಾದ ಬಳಿಕ ಕಾರಿಯಪ್ಪ ಸಹ ಮದುವೆಯಾಗಲ್ಲ, ನಾನು ಹಣ ಪಡೆದುಕೊಂಡಿಲ್ಲ ಎಂದು ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.
ಕೆ ಸಿ ಕಾರಿಯಪ್ಪ ಅವರು ಪ್ರತಿ ದೂರು ದಾಖಲಿಸಿದ್ದು, ನಿನ್ನ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಮತ್ತು ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆ ಎಂದು ಯುವತಿ ಬೆದರಿಕೆ ಹಾಕಿದ್ದಾರೆ. ಮಾನಸಿಕ ಹಿಂಸೆ ನೀಡುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ, ಕುಟುಂಬ ಸದಸ್ಯರಿಗೂ ಬೆದರಿಕೆ ಹಾಕಿದ್ದಾಳೆಂದು ಕಾರಿಯಪ್ಪ ಹೇಳಿದ್ದಾರೆ.
ಕರ್ನಾಟಕ ರಣಜಿ ತಂಡದ ಆಟಗಾರರಾಗಿರುವ ಕೆಸಿ ಕಾರಿಯಪ್ಪ ಅವರು, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ.





