ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾಳೆ ಚುನಾವಣೆ ನಡೆಯಲಿದ್ದು, ಮಾಜಿ ಕ್ರಿಕೆಟಿಗ ಬಿ ಕೆ ವೆಂಕಟೇಶ್ ಪ್ರಸಾದ್ ಹಾಗೂ ಪ್ರಜಾವಾಣಿ ಸಮೂಹದ ಕೆ ಎನ್ ಶಾಂತಕುಮಾರ್ ನಡುವೆ ಭಾರೀ ಸ್ಪರ್ಧೆ ನಡೆಯಲಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ಆರಂಭವಾಗಲಿದೆ. ಅಲ್ಲದೇ ನಾಳೆಯೇ ಕೆಎಸ್‌ಸಿಎ ಹೊಸ ಆಡಳಿತ ನಿರ್ಧಾರವಾಗಲಿದ್ದು, ಪ್ರಸಾದ್-ಬ್ರಿಜೇಶ್ ಬಣಗಳ ನಡುವೆ ಕಠಿಣ ಪೈಪೋಟಿ ಎದುರಾಗಲಿದೆ.
ಇದನ್ನು ಓದಿದ್ದೀರಾ? ಇಮ್ರಾನ್ ಖಾನ್ | ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾತ್ರಿಯೇ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 24 ಹುದ್ದೆಗಳಿಗೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಮಹತ್ವದ ಹುದ್ದೆಗಳಿಗೆ ನೇರ ಸ್ಪರ್ಧೆ ಇದೆ.
ಚುನಾವಣೆಗೂ ಮುನ್ನ ಎರಡೂ ಬಣಗಳ ನಡುವೆ ತೀವ್ರ ಪ್ರಚಾರ ಸಭೆಗಳು, ಸದಸ್ಯರನ್ನು ಭೇಟಿಯಾಗುವ ಕಾರ್ಯಕ್ರಮಗಳು ನಡೆದಿದ್ದು, ಈ ಬಾರಿ ಮತದಾನದ ಶೇಕಡಾವಾರು ದಾಖಲೆ ಮಟ್ಟ ದಾಟುವ ನಿರೀಕ್ಷೆ ಇದೆ.
ಇನ್ನೂರು ರೂಪಾಯಿ ಹಿಂಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ (KSCA) ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್.ಶಾಂತಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಕೆಲ ದಿನಗಳ ಹಿಂದೆ ಹೈಕೋರ್ಟ್ ಪುರಸ್ಕರಿಸಿತ್ತು.
ಕೆಎಸ್‌ಸಿಎ ಚುನಾವಣೆಯಲ್ಲಿ ಕೆ.ಎನ್.ಶಾಂತಕುಮಾರ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿ ಕೋರ್ಟ್ ಆದೇಶ ನೀಡಿದೆ. ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ರದ್ದುಗೊಳಿಸಿ, ಈಗಾಲೇ ನೀಡಿರುವ ವೇಳಾಪಟ್ಟಿಯಂತೆ ಡಿ.7 ರಂದೇ ಚುನಾವಣೆಗೆ ನಡೆಸಲು ನ್ಯಾ.ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿತ್ತು.





