ಐಪಿಎಲ್‌ನಲ್ಲಿ ತನ್ನನ್ನು ಉಳಿಸಿಕೊಳ್ಳದ ಆರ್‌ಸಿಬಿ: ಭಾವುಕ ಪೋಸ್ಟ್ ಹಾಕಿದ ವೇಗಿ ಮೊಹಮ್ಮದ್ ಸಿರಾಜ್

Date:

ಕಳೆದ ಏಳು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ) ಭಾಗವಾಗಿದ್ದ ಮೊಹಮ್ಮದ್ ಸಿರಾಜ್, ಅವರನ್ನು ಈ ಬಾರಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಖರೀದಿಸಲು ನಿರಾಸಕ್ತಿ ವಹಿಸಿತ್ತು.

ಆರ್‌ಸಿಬಿ ತನ್ನ ವೇಗಿಯನ್ನು ಉಳಿಸಿಕೊಳ್ಳಲು ನಿರಾಸಕ್ತಿ ವಹಿಸಿದ ಬೆನ್ನಲ್ಲೇ, 2025​ರ ಗುಜರಾತ್ ಟೈಟನ್ಸ್​ ಖರೀದಿ ಮಾಡಿತ್ತು. ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿಸಿದೆ.

ಈ ಬೆನ್ನಲ್ಲೇ ಆರ್​ಸಿಬಿ ಜೊತೆಗಿನ ದಿನಗಳನ್ನು ನೆನೆದು ತೆಲಂಗಾಣದ ಡಿಸಿಪಿ, ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದು, ಆರ್‌ಸಿಬಿ ಜೊತೆಗೆ ಕಳೆದಿದ್ದ ಕ್ಷಣಗಳನ್ನು ಹಾಗೂ ಅನುಭವವನ್ನು ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರ್‌ಸಿಬಿ ಜೊತೆಗೆ ಕಳೆದ ವಿಶೇಷ ಕ್ಷಣಗಳ ಕುರಿತ ವೀಡಿಯೊವನ್ನು ಸಹಿತ, ಜೊತೆಗೆ ಸುದೀರ್ಘವಾದ ಫೋಸ್ಟ್‌ವೊಂದನ್ನು ಬರೆದುಕೊಂಡಿದ್ದಾರೆ.

“ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜೆರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಂಬಿದ ತುಂಬಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜೆರ್ಸಿ, ಆರ್​ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಇಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ” ಎಂದು ವೇಗಿ ತಿಳಿಸಿದ್ದಾರೆ.

1002498526

ಮುಂದುವರಿದು, “ಆರ್​ಸಿಬಿ ಪರ ನಾನು ಮಾಡಿದ ಮೊದಲ ಬಾಲ್​​ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಪ್ರಯಾಣದಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. ಆರ್‌ಸಿಬಿ ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು” ಎಂದು ಮೊಹಮ್ಮದ್ ಸಿರಾಜ್ ಬರೆದಿದ್ದಾರೆ.

ಸಿರಾಜ್ ವೀಡಿಯೊ ಪೋಸ್ಟ್‌ನಲ್ಲಿ ‘ನಾ ಹಮಾರಾ, ನಾ ತುಮ್ಹಾರಾ ಹುವಾ, ಇಷ್ಕಾ ಕಾ ಯೇ ಸಿತಮ್ ನ ಗನ್ವಾರಾ ಹುವಾ’ ಹಾಡನ್ನು ಬಳಸಿದ್ದಾರೆ.

ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಟೈಟನ್ಸ್ ತಂಡದ ರಶೀದ್ ಖಾನ್, ‘ಈಗ ನೀವು ನಮ್ಮವರು’ ಎಂದು ಕಾಲೆಳೆದಿದ್ದಾರೆ.

ಮೊಹಮ್ಮದ್ ಸಿರಾಜ್ ಪೋಸ್ಟ್ ಗೆ ಕಮೆಂಟ್ ಹಾಕಿರುವ ಹಲವಾರು ಆರ್‌ಸಿಬಿ ಅಭಿಮಾನಿಗಳು, ಆರ್‌ಸಿಬಿ ಈವರೆಗೆ ಕಪ್ ಗೆಲ್ಲದಿರಬಹುದು. ಆದರೆ, ಇತರೆಲ್ಲ ಫ್ರಾಂಚೈಸಿಗಳಿಗಿಂತ ಆರ್‌ಸಿಬಿ ಸದಾ ವಿಭಿನ್ನ. ಆರ್‌ಸಿಬಿ ಅಂದರೇನೆ ಅದೊಂದು ಭಾವನಾತ್ಮಕ ಸಂಬಂಧ.‌ ನೀವು ಇನ್ನಷ್ಟು ಸಾಧನೆ ಮಾಡಿ. ಮತ್ತೆ ಆರ್‌ಸಿಬಿ ತಂಡಕ್ಕೆ ಸೇರುವ ದಿನಗಳು ಬರಲಿ. ಆಲ್ ದ ಬೆಸ್ಟ್ ” ಎಂದು ಶುಭ ಹಾರೈಸಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...