ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024ರ ಆವೃತ್ತಿಗೂ ಮುನ್ನ ಅಚ್ಚರಿಯ ಘೋಷಣೆ ಮಾಡಿದೆ. ರೋಹಿತ್ ಶರ್ಮಾ ಅವರ ಬದಲಿಗೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ. ಈ ಮಹತ್ವದ ಬೆಳವಣಿಗೆಯು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ದಾಖಲೆಯ ಐದು ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು 10 ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿರುವ ರೋಹಿತ್ ಶರ್ಮಾ ಅವರ ನಾಯಕತ್ವದ ಜವಾಬ್ದಾರಿ ಅಂತ್ಯಗೊಂಡಿದೆ.
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿ ಫ್ರಾಂಚೈಸಿಯನ್ನು ಐಪಿಎಲ್ ಟ್ರೋಫಿಯತ್ತ ಮುನ್ನಡೆಸಿದ್ದ ಹಾರ್ದಿಕ್, ಕಳೆದ ತಿಂಗಳು ಅಚ್ಚರಿಯ ಬೆಳವಣಿಗೆಯಲ್ಲಿ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಇದೀಗ ಇಲ್ಲಿಯೂ ನಾಯಕನ ಪಟ್ಟ ಸಿಕ್ಕಿದೆ.
Captain Rohit Sharma will be missed in IPL 2024. pic.twitter.com/ljsFX3MIWW
— Mufaddal Vohra (@mufaddal_vohra) December 15, 2023
ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಅನ್ನು ನಾಯಕನಾಗಿ 10 ವರ್ಷಗಳ ರೋಹಿತ್ ಶರ್ಮಾ ಮುನ್ನಡೆಸಿದ್ದರು. ಅಲ್ಲದೆ ಇದರಲ್ಲಿ 5 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಎಂಎಸ್ ಧೋನಿ ಮತ್ತು ರೋಹಿತ್ ತಲಾ ಐದು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಹಿಟ್‌ಮ್ಯಾನ್ ಕೇವಲ 10 ಋತುಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಜವಾಬ್ದಾರಿಯನ್ನು 2013ರಲ್ಲಿ ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು.
Ro,
In 2013 you took over as captain of MI. You asked us to 𝐁𝐞𝐥𝐢𝐞𝐯𝐞. In victories & defeats, you asked us to 𝘚𝘮𝘪𝘭𝘦. 10 years & 6 trophies later, here we are. Our 𝐟𝐨𝐫𝐞𝐯𝐞𝐫 𝐜𝐚𝐩𝐭𝐚𝐢𝐧, your legacy will be etched in Blue & Gold. Thank you, 𝐂𝐚𝐩𝐭𝐚𝐢𝐧 𝐑𝐎💙 pic.twitter.com/KDIPCkIVop— Mumbai Indians (@mipaltan) December 15, 2023
ಹಾರ್ದಿಕ್ ಪಾಂಡ್ಯ ಎರಡು ಬಾರಿ ಮಾತ್ರ ಐಪಿಎಲ್ ನಾಯಕತ್ವ ವಹಿಸಿದ್ದಾರೆ. ಮೊದಲ ನಾಯಕತ್ವದಲ್ಲೇ ಗುಜರಾತ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಅವರು, ಎರಡನೇ ಬಾರಿ ಫೈನಲ್‌ವರೆಗೂ ಮುನ್ನಡೆಸಿದ್ದರು. ನಾಯಕತ್ವ ಬದಲಾವಣೆ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡ, ವಿಶೇಷ ವಿಡಿಯೋ ಮೂಲಕ ರೋಹಿತ್ ಶರ್ಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ.
To new beginnings. Good luck, #CaptainPandya 💙 pic.twitter.com/qRH9ABz1PY
— Mumbai Indians (@mipaltan) December 15, 2023
“ಇದು ಪರಂಪರೆಯ ನಿರ್ಮಾಣದ ಭಾಗವಾಗಿದೆ. ಭವಿಷ್ಯದ ಪಂದ್ಯಾವಳಿಗಳಿಗಳಿಗಾಗಿ ಸಿದ್ಧತೆ ನಡೆಸುವ ತತ್ವಕ್ಕೆ ಮುಂಬೈ ಇಂಡಿಯನ್ಸ್ ಬದ್ಧವಾಗಿದೆ. ಸಚಿನ್‌ನಿಂದ ಹರ್ಭಜನ್ ಸಿಂಗ್ ಮತ್ತು ರಿಕಿ ಪಾಂಟಿಂಗ್ ಅವರಿಂದ ರೋಹಿತ್‌ವರೆಗೆ ಮುಂಬೈ ತಂಡವು ಅಸಾಧಾರಣ ನಾಯಕರನ್ನು ಪಡೆದಿದೆ. ಇವರೆಲ್ಲಾ ತಕ್ಷಣದ ಯಶಸ್ಸಿಗೆ ಕೊಡುಗೆ ನೀಡುವುದರೊಂದಿಗೆ ಭವಿಷ್ಯಕ್ಕಾಗಿ ತಂಡವನ್ನು ಬಲಪಡಿಸುವತ್ತ ಗಮನಹರಿಸಿದ್ದಾರೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ” ಎಂದು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ನಾಯಕತ್ವ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.





