ಐಪಿಎಲ್ 2025 | ವಂಚಿಸಲು ಹೋಗಿ ಅಂಪೈರ್‌ ಕೈಗೆ ಸಿಕ್ಕಿಬಿದ್ದ ಸುನಿಲ್ ನರೈನ್, ಎನ್ರಿಕ್ ನೋಕಿಯಾ!

Date:

ಇಂಡಿಯನ್ ಪ್ರೀಮಿಯರ್ ಲೀಗ್​ನ 31ನೇ ಪಂದ್ಯದಲ್ಲಿ ನಿಯಮ ಮೀರಿದ ಬ್ಯಾಟ್​ಗಳನ್ನು ಬಳಸಲು ಮುಂದಾಗಿ ಕೆಕೆಆರ್‌ ತಂಡದ ಸುನಿಲ್ ನರೈನ್ ಹಾಗೂ ಅನ್ರಿಕ್ ನೋಕಿಯಾ ಸಿಕ್ಕಿ ಬಿದ್ದಿದ್ದಾರೆ. ಚಂಡೀಗಢದ ಮುಲ್ಲನ್​ಪುರ್​ನ ಎಂವೈಎಸ್​ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್​ಗಳಲ್ಲಿ 111 ರನ್​ಗಳಿಸಿ ಆಲೌಟ್ ಆಯಿತು.

ಈ ಗುರಿಯನ್ನು ಬೆನ್ನಟ್ಟಲು ಆರಂಭಿಕನಾಗಿ ಕಣಕ್ಕಿಳಿಯಲು ಮುಂದಾಗಿದ್ದ ಸುನಿಲ್ ನರೈನ್ ಅವರ ಬ್ಯಾಟ್ ಅನ್ನು ಅಂಪೈರ್ ಪರಿಶೀಲಿಸಿದ್ದಾರೆ. ಈ ಪರಿಶೀಲನೆ ವೇಳೆ ನರೈನ್ ಬಳಸಲು ಮುಂದಾಗಿದ್ದ ಬ್ಯಾಟ್ ಅಗಲದಿಂದ ಕೂಡಿರುವುದು ಕಂಡು ಬಂದಿದೆ. ಹೀಗಾಗಿ ಆ ಬ್ಯಾಟ್ ಅನ್ನು ಬಳಸಲು ಅಂಪೈರ್ ಅನುಮತಿ ನೀಡಿರಲಿಲ್ಲ.

ಇದಾದ ಬಳಿಕ ಕೆಕೆಆರ್ ಪರ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎನ್ರಿಕ್ ನೋಕಿಯಾ ಕೂಡ ನಿಗದಿಪಡಿಸಿದ್ದಕ್ಕಿಂತ ದಪ್ಪದ ಬ್ಯಾಟ್​ನೊಂದಿಗೆ ಆಗಮಿಸಿದ್ದರು. ಈ ಬಗ್ಗೆ ಸಂದೇಹಗೊಂಡ ಅಂಪೈರ್ ಗೇಜ್​ನೊಂದಿಗೆ ಬ್ಯಾಟ್ ಪರಿಶೀಲಿಸಿದರು. ಈ ವೇಳೆ ಬ್ಯಾಟ್​ನ ಹಿಂಭಾಗವು ನಿಗದಿತ ಮಿತಿಗಿಂತ ದೊಡ್ಡದಿರುವುದು ಕಂಡುಬಂದಿದೆ. ಹೀಗಾಗಿ ಬ್ಯಾಟ್ ಬದಲಿಸುವಂತೆ ಸೂಚಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ಬ್ಯಾಟ್‌ನ ಆಯಾಮಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಅದರ ಪ್ರಕಾರ ಬ್ಯಾಟ್‌ನ ಮಧ್ಯ ಭಾಗದ ಅಗಲ 2.64 ಇಂಚುಗಳಿಗಿಂತ ಹೆಚ್ಚಿರಬಾರದು. ಬ್ಯಾಟ್‌ನ ಬ್ಲೇಡ್ ಈ ಆಯಾಮಗಳನ್ನು ಮೀರಬಾರದು. ಅಗಲ: 4.25 ಇಂಚು/10.8 ಸೆಂಮೀ, ಆಳ: 2.64 ಇಂಚು/6.7 ಸೆಂಮೀ, ಅಂಚುಗಳು: 1.56 ಇಂಚು/4.0 ಸೆಂಮೀ ಇರಬೇಕು.ಇದಲ್ಲದೆ, ಯಾವುದೇ ಬ್ಯಾಟ್ ‘ಬ್ಯಾಟ್ ಗೇಜ್’ ಮೂಲಕವೇ ಹಾದುಹೋಗುವಂತಿರಬೇಕು. ಇಷ್ಟಿದ್ದರೆ ಯಾವುದೇ ಸಮಸ್ಯೆಯಿಲ್ಲ. ಇದರಲ್ಲಿ ಚೂರು ವ್ಯತ್ಯಾಸವಾದರೂ ಬ್ಯಾಟ್‌ಅನ್ನು ಬದಲಿಸಬೇಕಾಗುತ್ತದೆ.

ಈ ಸುದ್ದಿ ಓದಿದ್ದೀರಾ? IPL 2025: ಬ್ಯಾಟರ್‌ಗಳು ಅಳತೆ ಮೀರಿದ ಬ್ಯಾಟ್ ಬಳಸುತ್ತಿದ್ದಾರೆಯೇ? ಅಂಪೈರ್‌ಗಳು ಪರಿಶೀಲಿಸುವುದೇಕೆ?

ಇದನ್ನು ಆನ್‌ ಫೀಲ್ಡ್ ಅಂಪೈರ್​ಗಳು ಗೇಜ್ ಬಳಸಿ ಪರಿಶೀಲಿಸಲಿದ್ದಾರೆ. ಈ ಪರಿಶೀಲನೆಯಲ್ಲಿ ಅಂಪೈರ್ ಬಳಸುವ ಗೇಜ್​ ಮೂಲಕ ಬ್ಯಾಟ್ ಹಾದು ಹೋದರೆ ಮಾತ್ರ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ.

ಅಂದರೆ 4 ಸೆಂಟಿಮೀಟರ್​ ಇಂಚುಗಳಿಗಿಂತ ಹೆಚ್ಚಿನ ಅಗಲವಾದ ಬ್ಯಾಟ್ ಬಳಸಲು ಅವಕಾಶವಿಲ್ಲ. ಹೀಗಾಗಿ ಬ್ಯಾಟ್​ಗಳ ಅಗಲದ ಮೇಲೆ ಸಂದೇಹ ಮೂಡಿದರೆ ಅಂಪೈರ್ ಮೈದಾನದಲ್ಲೇ ಪರಿಶೀಲಿಸುತ್ತಿದ್ದಾರೆ.

ಐಪಿಎಲ್​​ನಲ್ಲಿ ಬ್ಯಾಟ್ ಪರಿಶೀಲನೆ ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ ಬ್ಯಾಟರ್​ಗಳ ಅಬ್ಬರ. ಕೆಲ ಬ್ಯಾಟ್ಸ್​ಮನ್​ಗಳು ಹೆಚ್ಚಿನ ಅಗಲದ ಬ್ಯಾಟ್ ಬಳಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಬಿಸಿಸಿಐ ಕಠಿಣ ನಿಯಮದೊಂದಿಗೆ ಬ್ಯಾಟ್ ಪರಿಶೀಲಿಸಲು ಮುಂದಾಗಿದ್ದಾರೆ.

ಅದರಂತೆ ಇದೀಗ ಪ್ರತಿ ಪಂದ್ಯಗಳಲ್ಲೂ ಬ್ಯಾಟ್ ಪರಿಶೀಲನೆ ನಡೆಯುತ್ತಿದೆ. ಇದರ ನಡುವೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ ನಿಗದಿತ ಮಿತಿಗಿಂತ ಹೆಚ್ಚಿನ ಅಗಲ ಮತ್ತು ದಪ್ಪದ ಬ್ಯಾಟ್ ಬಳಸಲು ಮುಂದಾಗಿರುವುದು ಕಂಡು ಬಂದಿದೆ.

https://x.com/Zsports/status/1912344728546472350?ref_src=twsrc%5Etfw%7Ctwcamp%5Etweetembed%7Ctwterm%5E1912344728546472350%7Ctwgr%5Ed0a57d3b45ffa0dfb83926a21f341a594469e084%7Ctwcon%5Es1&ref_url=https%3A%2F%2Ftv9kannada.com%2Fsports%2Fcricket-news%2Fipl-2025-sunil-narine-and-andre-russells-bat-doesnt-pass-umpires-check-1008022.html

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...