- ವಿಶ್ವಮಹಿಳಾ ಬಾಕ್ಸಿಂಗ್ಸ್ ಚಾಂಪಿಯನ್‌ಶಿಪ್ ಭಾರತಕ್ಕೆ ಮೊದಲ ಚಿನ್ನ
- 48ಕೆ.ಜಿ.ವಿಭಾಗದಲ್ಲಿ ಚಿನ್ನಗೆದ್ದ ಕಾಮನ್‌ವೆಲ್ತ್ ಚಾಂಪಿಯನ್ ನೀತು ಗಂಗಾಸ್
ಮಹಿಳೆಯ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತದ ನೀತು ಗಂಗಾಸ್ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ನವದೆಹಲಿಯ ಕೆ.ಡಿ.ಜಾಧವ್ ಕ್ರಿಡಾಂಗಣದಲ್ಲಿ ಇಂದು ನಡೆದ 48ಕೆ.ಜಿ.ವಿಭಾಗದವರ ಹಣಾಹಣಿಯಲ್ಲಿ ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು 5-0 ಅಂತರದಿಂದ ಸೋಲಿಸಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್,ಆಗಿದ್ದ ನೀತು ಈಗ ʼಐಬಿಎʼ ಮಹಿಳಾ ಬಾಕ್ಸಿಂಗ್ ವಿಶ್ವದಲ್ಲಿ ಪದಕ ಗೆಲ್ಲುವ ಮೂಲಕ ಗೆಲ್ಲುವ ಮೂಲಕ ನೂತನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನೀತು ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಒಳಗೊಂಡಂತೆ ಹಲವರು ಪ್ರಶಂಸಿದ್ದಾರೆ.





