ಭಾರತದ ಚೆಸ್ ತಾರೆ ಆರ್ ವೈಶಾಲಿ ಅವರು ಉಜ್ಬೇಕಿಸ್ತಾನ್‌ನ ಸಮರಕಂದ್‌ನಲ್ಲಿ ನಡೆದ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ, 2026ರ FIDE ಮಹಿಳಾ FIDE ಟೂರ್ನಮೆಂಟ್‌ಗೆ ಅರ್ಹತೆ ಗಳಿಸಿದ ಮೂರನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ.
ಜೂನ್‌ನಲ್ಲಿ ಜಾರ್ಜಿಯಾದಲ್ಲಿ ನಡೆದ FIDE ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ದಿವ್ಯ ಹಾಗೂ ಕೊನೆರು ಹಂಪಿ ಇಬ್ಬರೂ ಸ್ಥಾನ ಪಡೆದಿದ್ದರು. ಅಂತಿಮ ಪಂದ್ಯದಲ್ಲಿ ದಿವ್ಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ವೈಶಾಲಿ, ಟೂರ್ನಮೆಂಟ್‌ನ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಚೀನಾದ ತಾನ್ ಝಾಂಗಿಯವರ ವಿರುದ್ಧ ಡ್ರಾ ಸಾಧಿಸಿ ಒಟ್ಟು ಎಂಟು ಅಂಕಗಳೊಂದಿಗೆ ಟೂರ್ನಮೆಂಟ್ ಮುಕ್ತಾಯಗೊಳಿಸಿದರು. ರಷ್ಯಾದ ಕತೆರಿನಾ ಲಾಗ್ನೊ ಕೂಡ ಎಂಟು ಅಂಕಗಳನ್ನು ಗಳಿಸಿದ್ದರೂ, ಉತ್ತಮ ಟೈಬ್ರೇಕ್ ಸ್ಕೋರ್‌ನಿಂದಾಗಿ ವೈಶಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ಈ ಮೂಲಕ ಅವರು ದಿವ್ಯ ದೇಶ್‌ಮುಖ್ ಮತ್ತು ಕೊನೆರು ಹಂಪಿ ನಂತರ, FIDE ಮಹಿಳಾ ಅಭ್ಯರ್ಥಿ ಟೂರ್ನಿಗೆ ಅರ್ಹತೆ ಪಡೆದ ಮೂರನೇ ಭಾರತೀಯ ಕ್ರೀಡಾಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಟೂರ್ನಮೆಂಟ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದವರು ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ನೇರ ಅರ್ಹತೆ ಗಳಿಸುತ್ತಾರೆ. ಈ ಟೂರ್ನಮೆಂಟ್, ಹಾಲಿ ಚೀನಾದ ವಿಶ್ವ ಚಾಂಪಿಯನ್ ಜು ವೆಂಜುನ್ ಅವರೊಂದಿಗೆ ಸೆಣಸಲು ನಿರ್ಣಾಯಕವಾಗಿದೆ.
ವೈಶಾಲಿಯ ಈ ಸಾಧನೆ ಭಾರತೀಯ ಚೆಸ್‌ಗೆ ಮತ್ತೊಂದು ಗರಿ ಮೂಡಿಸಿದೆ. ಭಾರತದ ಮೂವರು ಮಹಿಳಾ ಆಟಗಾರ್ತಿಯರು ಒಂದೇ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಗಳಿಸಿರುವುದು ದೇಶದ ಚೆಸ್ ಕ್ಷೇತ್ರದ ಸಾಧನಯನ್ನು ತೋರ್ಪಡಿಸುತ್ತದೆ.





