ಹರಿಯಾಣದ ರೋಹಟಕ್‌ನ ಚೌಧರಿ ಬನ್ಸಿಲಾಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ನೇ ಸಾಲಿನ ಎಲೈಟ್ ಗ್ರೂಪ್‌ನ ಸಿ ಪಂದ್ಯದಲ್ಲಿ ಸರ್ವೀಸಸ್ ತಂಡದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
22 ವರ್ಷದ ಸ್ಪಿನ್ನರ್ ಅಮಿತ್ ಶುಕ್ಲಾ ಕೇವಲ ಒಂದೇ ಒಂದು ರನ್ ನೀಡದೆ ಐದು ವಿಕೆಟ್ ಕಬಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ತಮ್ಮ 80ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಸರ್ವೀಸಸ್ ಬೌಲರ್‌ಗಳಲ್ಲಿ ಇದೇ ಮೊದಲ ದಾಖಲೆಯಾಗಿದೆ.
ಪಂದ್ಯದ ಮೊದಲ ದಿನ ಸರ್ವೀಸಸ್ ತಂಡವು ಮೊದಲು ಬ್ಯಾಟ್ ಮಾಡಿ 205 ರನ್‌ಗಳಿಗೆ ಆಲೌಟ್ ಆಗಿತ್ತು. ರಾಹುಲ್ ರತೀ ಅವರು 59/4 ವಿಕೆಟ್ ಪಡೆಯುವ ಮೂಲಕ ಹರಿಯಾಣ ಬೌಲರ್‌ಗಳನ್ನು ಕಟ್ಟಿ ಹಾಕಿದರು. ಆದರೆ ಹರಿಯಾಣದ ಇನಿಂಗ್ಸ್ ಆರಂಭವಾದ ನಂತರ ಅಮಿತ್ ಶುಕ್ಲಾ ಅವರು ಎದುರಾಳಿ ತಂಡಕ್ಕೆ ಮಾರಕವಾದರು.
ಇದನ್ನು ಓದಿದ್ದೀರಾ? ಐಪಿಎಲ್ 2026 | ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆ, ರವೀಂದ್ರ ಜಡೇಜಾ ರಾಜಸ್ಥಾನಕ್ಕೆ ವಾಪಸ್
ಎರಡನೇ ಓವರ್‌ನ ಎರಡನೇ ಎಸೆತದಲ್ಲೇ ಯುವರಾಜ್ ಸಿಂಗ್ ಅವರನ್ನು ಎಲ್‌ಬಿ ಮೂಲಕ ಪೆವಿಲಿಯನ್‌ಗೆ ಕಳಿಸಿದರು. ಈ ಓವರ್ ಮೇಡನ್ ಆಗಿತ್ತು. ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಇನ್ನೊಂದು ವಿಕೆಟ್, ಆರು ಓವರ್‌ನ ಐದನೇ ಎಸೆತದಲ್ಲಿ ಮೂರನೇ ವಿಕೆಟ್. ಎಂಬತ್ತನೇ ಓವರ್‌ನಲ್ಲಿ ಧೀರು ಸಿಂಗ್ ಮತ್ತು ನಿಖಿಲ್ ಕಶ್ಯಪ್ ಅವರನ್ನು ಔಟ್ ಮಾಡಿದರು. ಮೊದಲ ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ಐದು ವಿಕೆಟ್ ಕಬಳಿಸಿದರು. ಹರಿಯಾಣ ತಂಡವು 20 ರನ್ ಗಳಿಗೆ
5 ವಿಕೆಟ್ ಕಳೆದುಕೊಂಡಿತ್ತು
ಮಂಗಳವಾರದ ಎರಡನೇ ದಿನದಂದು ಶುಕ್ಲಾ ಅವರು ತಮ್ಮ ದಾಳಿ ಮುಂದುವರಿಸಿ ಹರಿಯಾಣವನ್ನು 111 ರನ್‌ಗಳಿಗೆ ಆಲೌಟ್ ಮಾಡಿಸಿದರು. 20 ಓವರ್‌ಗಳಲ್ಲಿ 8 ಮೇಡನ್‌ಗಳೊಂದಿಗೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇದು ಸರ್ವೀಸಸ್‌ಗೆ 94 ರನ್‌ಗಳ ಮುನ್ನಡೆ ನೀಡಿದೆ. ಉಳಿದ ಎರಡು ವಿಕೆಟ್‌ಗಳನ್ನು ಪುಲ್ಕಿತ್ ನರಂಗ್ ಪಡೆದರು.
ಅಮಿತ್ ಶುಕ್ಲಾ ಪಂಜಾಬ್ ಅಂಡರ್-19 ಪರವೂ ಆಡಿದ್ದಾರೆ. ಕಳೆದ ರಣಜಿ ಋತುವಿನ ಮೊದಲ ಪಂದ್ಯದಲ್ಲೇ 65/7 ವಿಕೆಟ್ ಪಡೆದಿದ್ದರು. ಈ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ 8 ವಿಕೆಟ್ ಕಬಳಿಸಿದ್ದರು. ಒಟ್ಟು 8 ಪ್ರಥಮ ದರ್ಜೆ ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.





