ಜನಾಂಗೀಯ ದ್ವೇಷ, ರಾಹುಲ್‌ ಕ್ರಿಕೆಟ್‌ ಆಟದ ಬಗ್ಗೆ ಮಾತನಾಡಿದ ರಿಷಿ ಸುನಕ್

Date:

ಇಂಗ್ಲೆಂಡ್‌ನ ಪ್ರಧಾನಿ ರಿಷಿ ಸುನಕ್ ನಿನ್ನೆ (ಜುಲೈ 2) ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಆ್ಯಷಸ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಲಂಡನ್‌ನ ಲಾರ್ಡ್ಸ್‌ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ತಮಗಾದ ಜನಾಂಗೀಯ ದ್ವೇಷ ಹಾಗೂ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಬಗೆಗಿನ ಕ್ರಿಕೆಟ್‌ ಆಟದ ಬಗ್ಗೆ ಮಾತನಾಡಿದರು.

ಎಲ್ಲ ಹಂತದ ಕ್ರಿಕೆಟ್ ನಲ್ಲಿ ಜನಾಂಗೀಯ ದ್ವೇಷ, ಲಿಂಗ ಭೇದ, ಪ್ರತ್ಯೇಕತಾವಾದ, ವರ್ಗಾಧಾರಿತ ಪಕ್ಷಪಾತ ಆಳವಾಗಿ ಬೇರೂರಿದೆ ಎಂಬ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಷಿ ಸುನಕ್‌, “ಕ್ರಿಕೆಟಿನಲ್ಲಿ ನನಗೆ ಈ ಅನುಭವ ಆಗಿಲ್ಲ. ಆದರೆ ಜೀವನದ ಆರಂಭಿಕ ದಿನಗಳಲ್ಲಿ ನನಗೆ ಜನಾಂಗೀಯ ದ್ವೇಷದ ಅನುಭವ ಆಗಿದೆ. ನನ್ನ ಕೆಲಸದಲ್ಲಿ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷವೂ ಟೀಕೆಗಳನ್ನು ಎದುರಿಸುತ್ತೇನೆ. ಆದರೆ ಜನಾಂಗೀಯ ದ್ವೇಷವು ನಿಮ್ಮನ್ನು ಗಾಯವೇ ಇಲ್ಲದಂತೆ ಒಳಗೊಳಗೆ ಚುಚ್ಚುತ್ತದೆ, ನೋಯಿಸುತ್ತದೆ. ಆದರೆ ಈಗ ನನ್ನ ಮಕ್ಕಳಿಗೂ ಈ ಅನುಭವವಾಗುತ್ತಿದೆ ಎಂದು ಅನ್ನಿಸುವುದಿಲ್ಲ” ಎಂದಿದ್ದಾರೆ.

ಕ್ರಿಕೆಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಿಕೆಟ್ ಆಟಗಾರರಲ್ಲಿ ನನಗೆ ರಾಹುಲ್ ಡ್ರಾವಿಡ್ ಅಚ್ಚು ಮೆಚ್ಚು. ಅವರ ತಂತ್ರಗಾರಿಕೆ, ವರ್ತನೆ, ವ್ಯಕ್ತಿತ್ವ ನನಗೆ ಇಷ್ಟ. 2008 ರಲ್ಲಿ ಭಾರತಕ್ಕೆ ಬಂದದ್ದನ್ನು ನೆನಪಿಸಿಕೊಂಡ ರಿಷಿ ಸುನಕ್, ಆಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ತೆರಳಿದ್ದೆ” ಎಂದು ರಿಷಿ ಸುನಕ್ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಆ್ಯಷಸ್‌ ಸರಣಿ | ಬೆನ್‌ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ

“2008 ರಲ್ಲಿ ಭಯೋತ್ಪಾದಕ ದಾಳಿ ನಡೆದಾಗ ನಾನು ಭಾರತದಲ್ಲಿದ್ದೆ. ಗೆಳೆಯನ ಮದುವೆಗೆ ಅಂತ ನಾನು ಭಾರತಕ್ಕೆ ಹೋಗಿದ್ದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಸಹ ಭಾರತದ ಪ್ರವಾಸದಲ್ಲಿತ್ತು. ಚೆನ್ನೈನಲ್ಲಿ ಟೆಸ್ಟ್‌ ಪಂದ್ಯ ಆಡುತ್ತಿತ್ತು. ಆ ಪಂದ್ಯವನ್ನು ನೋಡಲು ನಾನು ಹೋಗಿದ್ದೆ. ಆ ಪಂದ್ಯದಲ್ಲಿ ರನ್ ಬೆನ್ನಟ್ಟುವಾಗ ಸಚಿನ್ ತೆಂಡೂಲ್ಕರ್ ಅವರು ಆಡಿದ ಉತ್ತಮವಾದ ಆಟವನ್ನು ನೋಡಿದೆ. ಆದರೆ ಅಂದಿನ ಪಂದ್ಯದಲ್ಲಿ ನಮ್ಮ ತಂಡ ಸೋತಿತ್ತು. ಭಾರತ ತಂಡ ಗೆಲುವು ಸಾಧಿಸಿತ್ತು” ಎಂದು ರಿಷಿ ಸುನಕ್‌ ಹೇಳಿದರು.

“ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಮೊದಲು ಕ್ರಿಕೆಟ್ ಆಟದ ಬಗ್ಗೆ ತುಂಬಾನೇ ಒಲವನ್ನು ಹೊಂದಿದ್ದೆ. ನಾನು ಒಬ್ಬ ಕ್ರೀಡಾ ಅಭಿಮಾನಿಯಾಗಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಯಿತು” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...