2 Grand Slam ಗೆದ್ದಿದ್ದ ಕನ್ನಡಿಗ ರೋಹನ್ ಬೋಪಣ್ಣ ಟೆನಿಸ್‌ಗೆ ವಿದಾಯ

Date:

ಭಾರತದ ಎರಡು ಬಾರಿಯ ಟೆನಿಸ್ Grand Slam ವಿಜೇತ ಕನ್ನಡಿಗ ರೋಹನ್ ಬೋಪಣ್ಣ ಶನಿವಾರ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 2017ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಗ್ಯಾಬ್ರಿಯೆಲಾ ಡಾಬ್ರೋವ್ಸ್ಕಿ ಜೊತೆಗೂಡಿ ಚೊಚ್ಚಲ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದ ಬೋಪಣ್ಣ, 2024ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮ್ಯಾಥ್ಯೂ ಎಬ್ಡೆನ್ ಜೊತೆ ಇತಿಹಾಸ ನಿರ್ಮಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಬೋಪಣ್ಣ, “ನನ್ನ ಜೀವನಕ್ಕೆ ಅರ್ಥ ನೀಡಿದ ಈ ಆಟಕ್ಕೆ ವಿದಾಯ ಹೇಳುವುದು ಸುಲಭವಲ್ಲ. ಇಪ್ಪತ್ತು ವರ್ಷಗಳ ಅಮೋಘ ಪ್ರವಾಸದ ಬಳಿಕ ಈಗ ಅಧಿಕೃತವಾಗಿ ರಾಕೆಟ್‌ ಅನ್ನು ಬಿಟ್ಟು ಹೋಗುವ ಸಮಯ ಬಂದಿದೆ.

ಕೊಡಗಿನಲ್ಲಿ ಹುಟ್ಟಿ ಬೆಳೆದ ಬೋಪಣ್ಣ ಅವರು ಭಾರತದ ಟೆನಿಸ್‌ನ ಪ್ರತಿಷ್ಠಿತ ಮುಖವಾಗಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಗೌರವವನ್ನು ಎತ್ತಿದರು. “ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವ. ಈಗ ನಾನು ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ. ಅವರ ಆರಂಭ ಎಷ್ಟು ಚಿಕ್ಕದಾದರೂ, ಅವರ ಕನಸುಗಳು ದೊಡ್ಡದಾಗಬಹುದು ಎಂಬುದನ್ನು ತೋರಿಸಲು ಇಷ್ಟಪಡುವೆ. ಕೊಡಗಿನಿಂದ ಆರಂಭಿಸಿ ವಿಶ್ವದ ವೇದಿಕೆಯಲ್ಲಿ ಆಡಿದ ಅನುಭವ ನಿಜಕ್ಕೂ ಮರೆಯಲಾಗದ್ದು’ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ವಿಶ್ಲೇಷಣೆ | ಜನಪ್ರಿಯ ಆಟಕ್ಕೆ ಮೆರಗು ತಂದವರು; ಭಾರತೀಯ ಮಹಿಳೆಯರ ಕ್ರಿಕೆಟ್‌ ಯಶೋಗಾಥೆ

“ಸ್ಪರ್ಧೆಯಿಂದ ದೂರ ಸರಿಯುತ್ತಿದ್ದರೂ, ಟೆನಿಸ್‌ ಜೊತೆಗಿನ ನನ್ನ ಕಥೆ ಮುಗಿದಿಲ್ಲ. ಈ ಆಟ ನನಗೆ ಎಲ್ಲವನ್ನೂ ನೀಡಿತು, ಈಗ ನಾನು ಹಿಂತಿರುಗಿ ಸಣ್ಣ ಪಟ್ಟಣಗಳ ಯುವ ಕನಸುಗಾರರಿಗೆ ಸಹಾಯ ಮಾಡಲು ಬಯಸುತ್ತೇನೆ. ಜೀವನದಲ್ಲಿ ಆರಂಭ ಎಷ್ಟು ಸಣ್ಣದಾದರೂ, ನಂಬಿಕೆ ಮತ್ತು ಶ್ರಮದಿಂದ ದೊಡ್ಡ ಸಾಧನೆ ಸಾಧ್ಯ. ಟೆನಿಸ್‌ ಮೇಲಿನ ಅವರ ಪ್ರೀತಿ ಯಾವತ್ತೂ ಕಡಿಮೆಯಾಗುವುದಿಲ್ಲ, ಇದು ವಿದಾಯವಲ್ಲ, ಕೃತಜ್ಞತೆ ಹೇಳುವ ಕ್ಷಣ. ನನ್ನನ್ನು ರೂಪಿಸಿದ, ಮಾರ್ಗದರ್ಶಿಸಿದ, ಬೆಂಬಲಿಸಿದ ಮತ್ತು ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ಈ ಕಥೆಯ ಭಾಗ, ನನ್ನ ಭಾಗ,” ಎಂದು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬರೆದುಕೊಂಡಿದ್ದಾರೆ.

ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಜೊತೆ ಆಡಿದ್ದೇ ಬೋಪಣ್ಣ ಅವರ ಕೊನೆಯ ಪಂದ್ಯ. ಕನ್ನಡಿಗರ ಹೆಮ್ಮೆಯಾಗಿ ಹೊರಹೊಮ್ಮಿದ ಬೋಪಣ್ಣ, ಟೆನಿಸ್ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

https://twitter.com/rohanbopanna/status/1984534394745524521/photo/2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಜುಗೆ ಧೋನಿ ಕೀಪಿಂಗ್ ಗ್ಲೌಸ್ ಹಸ್ತಾಂತರ; ಮುಂದೆ ನಾಯಕತ್ವವೂ? ಸಿಎಸ್‌ಕೆ ಯೋಜನೆ ಬಗ್ಗೆ ಕುಂಬ್ಳೆ ವಿಶ್ಲೇಷಣೆ

ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ರುವಾರಿ ಎಂದೇ ಮಿಂಚುತ್ತಿರುವ ಸಂಜು ಸ್ಯಾಮ್ಸನ್,...

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

BREAKING NEWS | ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ದಿನಾಂಕ ಘೋಷಣೆ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಯ...