2027ರ ವಿಶ್ವಕಪ್‌ವರೆಗೂ ರೋಹಿತ್, ಕೊಹ್ಲಿ ಆಡುತ್ತಾರಾ?: ಮುಖ್ಯ ವಿಚಾರ ಬಿಚ್ಚಿಟ್ಟ ಕೋಚ್ ಗೌತಮ್ ಗಂಭೀರ್

Date:

ನೂತನವಾಗಿ ನೇಮಕವಾಗಿರುವ ಟೀಂ ಇಂಡಿಯಾ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಅವರು ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಭವಿಷ್ಯದ ಊಹಾಪೋಹಗಳ ಬಗ್ಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ ಇಬ್ಬರು ಆಟಗಾರರು ಟಿ20 ವಿಶ್ವಕಪ್ ಅಥವಾ ಏಕದಿನ ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಏನು ನೀಡಬೇಕೊ ಎಂಬುದನ್ನು ತೋರ್ಪಡಿಸಿದ್ದಾರೆ. ಒಂದು ವಿಷಯವನ್ನು ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. ಇಬ್ಬರು ಆಟಗಾರರಲ್ಲಿ ಸಾಕಷ್ಟು ಕ್ರಿಕೆಟ್ ಸಾಮರ್ಥ್ಯ ಉಳಿದಿದೆ. ಇನ್ನು ಮುಖ್ಯವಾಗಿ ಚಾಂಪಿಯನ್ಸ್‌ ಟ್ರೋಫಿ ಬರುತ್ತಿದೆ ಹಾಗೂ ಆಸ್ಟ್ರೇಲಿಯದ ಪ್ರಮುಖವಾದ ಪ್ರವಾಸವಿದೆ. ಅವರಿಂದ ಪ್ರೇರಿಪಿಸಲ್ಪಡುವುದು ಸಾಕಷ್ಟಿದೆ. ಆಶಾದಾಯಕವಾಗಿ ಹೇಳುವುದಾದರೆ, ಇಬ್ಬರು ಆಟಗಾರರು ಫಿಟ್‌ನೆಟ್‌ ಕಾಯ್ದುಕೊಳ್ಳಲು ಸಾಧ್ಯವಾದರೆ, 2027ರ ವಿಶ್ವಕಪ್‌ವರೆಗೆ ಅವರು ಇರುತ್ತಾರೆ” ಎಂದು ಹೇಳಿದರು.

“ಇದು ತುಂಬ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂಬುದನ್ನು ನಾನು ಹೇಳಲಾರೆ. ಅಂತಿಮವಾಗಿ ಇದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ಅವರು ನಿರ್ಧರಿಸಬೇಕು. ವಿರಾಟ್‌ ಹಾಗೂ ರೋಹಿತ್‌ ಏನು ಕೊಡುಗೆ ನೀಡುತ್ತಾರೆ ಎಂಬುದನ್ನು ನೋಡುವುದಾದರೆ, ಅವರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ವಿಶ್ವ ದರ್ಜೆಯ ಆಟಗಾರರು. ಯಾವುದೇ ತಂಡ ಕೂಡ ಇಂತಹ ಆಟಗಾರರನ್ನು ಸಾಧ್ಯವಾದಷ್ಟು ಕಾಲ ತನ್ನಲ್ಲಿ ಇಟ್ಟುಕೊಳ್ಳುತ್ತದೆ” ಎಂದು ಗೌತಮ್‌ ಗಂಭೀರ್‌ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

“ಜಸ್‌ಪ್ರೀತ್‌ ಬುಮ್ರಾ ರೀತಿಯ ಕೆಲವೊಬ್ಬರ ಕಾರ್ಯನಿರ್ವಹಣೆಗೆ ಬಂದರೆ ಅವರು ಮುಖ್ಯವಾಗುತ್ತಾರೆ. ರೋಹಿತ್‌, ವಿರಾಟ್ ಟಿ20ಗಳಲ್ಲಿ ಆಡುತ್ತಿಲ್ಲ. ಹಾಗಾಗಿ ಅವರ ಮುಂದಿನ ಬಹುತೇಕ ಪ್ರಮುಖ ಪಂದ್ಯಗಳಲ್ಲಿ ಅವರ ಲಭ್ಯತೆಯಿದೆ. ಬ್ಯಾಟರ್‌ಗಳಾಗಿ ಒಳ್ಳೆಯ ಫಾರ್ಮ್‌ನಲ್ಲಿ ಉತ್ತಮ ಆಟವನ್ನು ಆಡಿದರೆ ಎಲ್ಲ ಆವೃತ್ತಿಗಳಲ್ಲೂ ಉತ್ತಮವಾಗಿ ಆಡುತ್ತಾರೆ. ಕೇವಲ ಬುಮ್ರಾ ಮಾತ್ರವಲ್ಲ ಬಹುತೇಕ ಬೌಲರ್‌ಗಳು ಕಾರ್ಯನಿರ್ವಹಣೆ ಮುಖ್ಯವಾದುದು” ಎಂದು ಹೇಳಿದ್ದಾರೆ.

ಭಾರತ ಟಿ20 ವಿಶ್ವಕಪ್‌ ಗೆದ್ದ ನಂತರ ರೋಹಿತ್‌, ಕೊಹ್ಲಿ ಟಿ20 ಆವೃತ್ತಿಗೆ ವಿದಾಯ ಹೇಳಿದ್ದಾರೆ. ಈಗ ಇಬ್ಬರು ಆಟಗಾರರು ಏಕದಿನ ಹಾಗೂ ಟೆಸ್ಟ್‌ನಲ್ಲಿ ಮುಂದುವರಿಯಲಿದ್ದಾರೆ.

37 ವರ್ಷದ ರೋಹಿತ್ 2027ರ ವಿಶ್ವಕಪ್‌ ವೇಳೆಗೆ 41 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿಗೆ ಆ ವೇಳೆಗಾಗಲೆ 38 ವರ್ಷ ದಾಟಿರುತ್ತದೆ.

ಮುಂದಿನ ವರ್ಷದವರೆಗೂ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ರೋಹಿತ್‌ ಅವರನ್ನೆ ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಟಿ20 ಆವೃತ್ತಿಗೆ ಸೂರ್ಯಕುಮಾರ್ ಯಾದವ್‌ ಅವರನ್ನು ನೇಮಿಸಲಾಗಿದೆ.

ಸಹಾಯಕ ಕೋಚ್‌ಗಳಾಗಿ ಅಭಿಷೇಕ್ ನಾಯರ್ ಹಾಗೂ ಟೆನ್‌ ಡೋಸ್‌ಚಾಟೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾ ಸರಣಿಗೆ ಟಿ ದಿಲೀಪ್‌ ಹಾಗೂ ಸಾಯಿರಾಜ್‌ ಬಹುತುಲೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ಇರಲಿದ್ದಾರೆ ಎಂದು ಗಂಭೀರ್‌ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...