ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ ಇಂದು ಆರಂಭಗೊಂಡಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ್ತಿ ಶಫಾಲಿ ವರ್ಮಾ, ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಮೇಲುಗೈ ಸಾಧಿಸಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಈ ಪಂದ್ಯದಲ್ಲಿ ಶಫಾಲಿ ಬಿರುಸಿನ ಶತಕ ಬಾರಿಸುವ ಮೂಲಕ 40 ವರ್ಷಗಳ ಹಿಂದಿನ ಟೆಸ್ಟ್ ದಾಖಲೆಯೊಂದನ್ನು ಮುರಿದಿದ್ದರು.
2⃣0⃣5⃣ runs
1⃣9⃣7⃣ deliveries
2⃣3⃣ fours
8⃣ sixesWHAT. A. KNOCK 👏👏
Well played @TheShafaliVerma!
Follow the match ▶️ https://t.co/4EU1Kp6YTG#TeamIndia | #INDvSA | @IDFCFIRSTBank pic.twitter.com/UTreiCRie6
— BCCI Women (@BCCIWomen) June 28, 2024
ಶಫಾಲಿ 113 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ಈ 40 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ವರ್ಮಾ ಮುರಿದಿದ್ದಾರೆ.
ಬಲಗೈ ಬ್ಯಾಟರ್ ಆಗಿರುವ ಶಫಾಲಿ ವರ್ಮಾ, ತನ್ನ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಮೂಲಕ ಭಾರತ ಪರ ದ್ವಿಶತಕ ಬಾರಿಸಿದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಭಾರತ ಪರ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ 214 ರನ್ ಬಾರಿಸಿದ್ದರು.
ಅತ್ಯಂತ ವೇಗದ ದ್ವಿಶತಕ
ಮಹಿಳೆಯರ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ ದ್ವಿಶತಕ ದಾಖಲಿಸುವ ಮೂಲಕ ಶಫಾಲಿ ವರ್ಮಾ ದಾಖಲೆ ಬರೆದಿದ್ದಾರೆ.
6,6,1 to reach the fastest double century in women’s Test cricket. 🤯pic.twitter.com/JBn3c7NFgm
— Mufaddal Vohra (@mufaddal_vohra) June 28, 2024
ಶಫಾಲಿ ಕೇವಲ 196 ಎಸೆತಗಳಲ್ಲಿ 200 ರನ್‌ಗಳ ಗಡಿಯನ್ನು ತಲುಪಿದರು. ಆ ಮೂಲಕ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್ಸ್ ಅವರನ್ನು ಹಿಂದಿಕ್ಕಿದರು. ಅನ್ನಾಬೆಲ್ ಅವರು 248 ಎಸೆತಗಳಲ್ಲಿ ಈ ಸಾಧನೆಗೈದಿದ್ದರು. ಅವರ ಹೆಸರಿನಲ್ಲಿದ್ದ ದ್ವಿಶತಕದ ಸಾಧನೆಯನ್ನು ಶಫಾಲಿ ಮುರಿದಿದ್ದಾರೆ.
292 ರನ್‌ಗಳ ಜೊತೆಯಾಟ ನಡೆಸಿದ ಮಂಧಾನ-ಶಫಾಲಿ ಜೋಡಿ
ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಶತಕದ ಆಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಈ ಜೋಡಿಯು ಮೊದಲ ವಿಕೆಟ್‌ಗೆ 292 ರನ್‌ಗಳ ಜೊತೆಯಾಟ ನಡೆಸಿದರು. ಇದು ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗಿನ ಬೃಹತ್ ಆರಂಭಿಕ ಜೋಡಿಯ ಜೊತೆಯಾಟವಾಗಿದೆ.
🚨 Milestone Alert 🚨
2⃣9⃣2⃣
This is now the highest opening partnership ever in women’s Tests 🙌
Smriti Mandhana & Shafali Verma 🫡🫡
Follow the match ▶️ https://t.co/4EU1Kp7wJe#TeamIndia | #INDvSA | @IDFCFIRSTBank | @mandhana_smriti | @TheShafaliVerma pic.twitter.com/XmXbU9V3M6
— BCCI Women (@BCCIWomen) June 28, 2024
197 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಸ್ಮೃತಿ ಮಂಧಾನ, 161 ಎಸೆತಗಳನ್ನು ಎದುರಿಸಿ 149 ರನ್(27 ಬೌಂಡರಿ ಹಾಗೂ 1 ಸಿಕ್ಸರ್) ಗಳಿಸಿದ್ದಾಗ ಟಕರ್ ಎಸೆತದಲ್ಲಿ ಡರ್ಕ್‌ಸನ್‌ಗೆ ಕ್ಯಾಚಿತ್ತು ಔಟಾದರು. ಆ ಮೂಲಕ 150ರ ಗಡಿ ದಾಟಲು 1 ರನ್‌ನಿಂದ ವಂಚಿತರಾದರು.
ಒಟ್ಟು 197 ಎಸೆತಗಳನ್ನು ಎದುರಿಸಿದ ಶಫಾಲಿ ವರ್ಮಾ, 23 ಬೌಂಡರಿ ಹಾಗೂ 8 ಸಿಕ್ಸರ್‌ನ ನೆರವಿನಿಂದ 205 ರನ್ ಗಳಿಸಿ ಮುಂದುವರಿಯುತ್ತಿದ್ದಾಗ ರನೌಟ್ ಆದರು. ಸದ್ಯ ಟೀಮ್ ಇಂಡಿಯಾವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 494 ರನ್ ದಾಖಲಿಸಿ, ಮೊದಲ ದಿನವೇ ಮೇಲುಗೈ ಸಾಧಿಸಿದೆ.





