ಟಿ20 ವಿಶ್ವಕಪ್: ಇಂಗ್ಲೆಂಡ್ ಆಟಗಾರರಿಗೆ ಸ್ಪಿನ್ ಆಡುವುದಕ್ಕೇ ಬರುವುದಿಲ್ಲ ಎಂದ ಶೋಯಬ್ ಅಕ್ತರ್

Date:

ಟೀಂ ಇಂಡಿಯಾ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ನಂತರ ಪಾಕಿಸ್ತಾನದ ಮಾಜಿ ವೇಗಿ ಶೋಯಬ್‌ ಅಕ್ತರ್ ಭಾರತ ತಂಡವನ್ನು ಶ್ಲಾಘಿಸಿದ್ದಾರೆ.

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಅಕ್ತರ್, ಭಾರತದ ಸ್ಪಿನ್ನರ್‌ಗಳ ವಿರುದ್ಧ ಆಡುವುದು ಅಷ್ಟು ಸುಲಭವಲ್ಲ. ಅಷ್ಟಕ್ಕೂ ಇಂಗ್ಲೆಂಡ್ ಆಟಗಾರರಿಗೆ ಸ್ಪಿನ್ ಆಡುವುದಕ್ಕೇ ಬರುವುದಿಲ್ಲ. ಆದರೆ, ಭಾರತೀಯ ಆಟಗಾರರು ಎದುರಾಳಿ ತಂಡದ ಸ್ಪಿನ್‌ ಅನ್ನು ಎದುರಿಸಲು ಸಮರ್ಥರಿದ್ದಾರೆ. ರೋಹಿತ್‌ ಶರ್ಮಾ ಕೂಡ ಸಮರ್ಥರು. ಇವರು ಅದಿಲ್ ರಶೀದ್‌ ಬೌಲಿಂಗ್‌ನಲ್ಲಿ ಲೀಲಾಜಾಲವಾಗಿ ಆಡುತ್ತಾರೆ. ಗಯಾನದ ಪಿಚ್‌ ವೇಗಿಗಳಿಗೆ ಉಪಯುಕ್ತವಲ್ಲ. ಹೆಚ್ಚು ಬೌನ್ಸ್ ಆಗುತ್ತಿತ್ತು. ತುಂಬ ತೇವವಿದ್ದ ಕಾರಣ ವೇಗಿಗಳಿಗೆ ಕಷ್ಟವಾಗುತ್ತಿತ್ತು ಎಂದಿದ್ದಾರೆ.

ನೀವು ಮೊದಲು ಬ್ಯಾಟ್‌ ಮಾಡಿ 150 ರನ್‌ ಸ್ಕೋರ್‌ ಮಾಡಿದ್ದರೆ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಪಿಚ್‌ ಕೆಲವೊಂದು ಬಾರಿ ಹೊಂದಾಣಿಕೆಯಾಗಬಹುದು. ಆದರೆ ಬೌಲಿಂಗ್‌ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಅಚಲವಾಗಿದ್ದರು ಎಂದು ಶೋಯಬ್‌ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭಾರತ ಈ ಬಾರಿ ಟಿ20 ವಿಶ್ವಕಪ್‌ ಎತ್ತಿಹಿಡಿಯಲು ಅರ್ಹವಾಗಿದೆ. ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು. ಅವರು ಸೋತರೂ ಗೆಲ್ಲುವುದಕ್ಕೆ ಅರ್ಹವಾಗಿದ್ದರು” ಎಂದು ಶೋಯಬ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿರಿಯ ಕ್ರಿಕೆಟಿಗ ಜಿ ಆರ್ ವಿಶ್ವನಾಥ್‌ಗೆ ಗೌರವ ಡಾಕ್ಟರೇಟ್

“ರೋಹಿತ್ ಶರ್ಮಾ ಒಬ್ಬ ಅತ್ಯುತ್ತಮ ಆಟಗಾರ. ಈತನ ಕ್ರಿಕೆಟ್ ವೃತ್ತಿ ಉತ್ತಮವಾಗಿ ಅಂತ್ಯವಾಗಲಿದೆ. ಆದರೆ ಕಳೆದ ವರ್ಷ ಕೊನೇ ಕ್ಷಣದಲ್ಲಿ ಏಕದಿನ ವಿಶ್ವಕಪ್‌ ಎತ್ತಿ ಹಿಡಿಯಲು ಸಾಧ್ಯವಾಗಿದ್ದರೆ ಎರಡು ಕಪ್‌ ಎತ್ತಿ ಹಿಡಿದ ಶ್ರೇಯ ಅವರದಾಗುತ್ತಿತ್ತು” ಎಂದು ಅಕ್ತರ್‌ ತಿಳಿಸಿದರು.

ಜೂನ್‌ 27 ರಂದು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ತಂಡವನ್ನು 68 ರನ್‌ಗಳ ಭಾರಿ ಅಂತರದಿಂದ ಸೋಲಿಸಿತ್ತು. ಟೀಂ ಇಂಡಿಯಾ ನೀಡಿದ 171 ರನ್‌ಗಳ ಸವಾಲನ್ನು ಬೆನ್ನಟ್ಟಿದ ಆಂಗ್ಲರು 103 ರನ್‌ಗಳಿಗೆ ಆಲೌಟ್ ಆದರು. ಸ್ಪಿನ್ನರ್‌ಗಳಾದ ಅಕ್ಸರ್‌ ಪಟೇಲ್‌ ಹಾಗೂ ಕುಲ್‌ದೀಪ್‌ ಯಾದವ್‌ ತಲಾ 3 ಮೂರು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಜೂನ್‌ 29 ರಂದು ಶನಿವಾರ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...