ಐಪಿಎಲ್ 2025 | ತಂಡದ ಗೆಲುವಿಗಾಗಿ ಶತಕ ಬಿಟ್ಟುಕೊಟ್ಟ ಶ್ರೇಯಸ್‌ ಅಯ್ಯರ್; ಗಮನ ಸೆಳೆದ ಕನ್ನಡಿಗ

Date:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ ನಡುವೆ ಐಪಿಎಲ್ 2025 ರ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿತು.

244 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 235 ರನ್‌ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಪಂಜಾಬ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 47 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು. ಶಶಾಂಕ್ ಸಿಂಗ್ ಕೂಡ 16 ಎಸೆತಗಳಲ್ಲಿ 44 ರನ್ ಗಳಿಸಿದರು. ಮತ್ತೊಂದೆಡೆ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 97 ರನ್‌ಗಳ ಇನ್ಸಿಂಗ್ಸ್ ಆಡಿದರು. ಕೊನೆಯ ಓವರ್‌ನಲ್ಲಿ ತಂಡದ ಹೆಚ್ಚು ರನ್‌ ಗಳಿಕೆಗಾಗಿ ಶಶಾಂಕ್‌ಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟ ಶ್ರೇಯಸ್‌ ಅಯ್ಯರ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಶ್ರೇಯಸ್ 97 ರನ್ ಗಳಿಸಿದ ಸಂದರ್ಭದಲ್ಲಿ ಚೊಚ್ಚಲ ಶತಕಕ್ಕಾಗಿ ಹಂಬಲಿಸಲಿಲ್ಲ.”ನನ್ನ 100 ರನ್ ಬಗ್ಗೆ ಯೋಚಿಸಬೇಡಿ,ನೀನು ಸಾಧ್ಯವಾದಷ್ಟು ಬೌಂಡರಿ, ಸಿಕ್ಸರ್‌ ಬಾರಿಸು’ ಎಂದು ಸ್ಟ್ರೈಕರ್‌ ಶಶಾಂಕ್ ಸಿಂಗ್ ಅವರನ್ನು ಹುರುದುಂಬಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಂಜಾಬ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ ಉತ್ತಮ ಆರಂಭ ಕಂಡಿತು. ಸಾಯಿ ಸುದರ್ಶನ್‌ ಮತ್ತು ನಾಯಕ ಶುಭಮನ್‌ ಗಿಲ್‌ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 61 ರನ್‌ ಗಳಿಸಿದರು. ಶುಭಮನ್‌ ಗಿಲ್‌ 14 ಎಸೆತಗಳಲ್ಲಿ 33 ರನ್‌ ಸಿಡಿಸಿ ಔಟ್ ಆದರು. ನಂತರ ಸಾಯಿ ಸುದರ್ಶನ್ ಜೊತೆ ಒಂದಾದ ಜೋಸ್ ಬಟ್ಲರ್‌ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಕಟ್ಟಿ ಹಾಕಲು ಪಂಜಾಬ್ ಬೌಲರ್‍‌ಗಳು ಪರದಾಟ ನಡೆಸಿದರು. ಈ ಜೋಡಿ 40 ಎಸೆತಗಳಲ್ಲಿ 84 ರನ್‌ ಕಲೆ ಹಾಕಿದರು.

ಸಾಯಿ ಸುದರ್ಶನ್ 41 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ ನೆರವಿನಿಂದ 74 ರನ್‌ ಗಳಿಗೆ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್‌ ವಿಕೆಟ್ ಕಳೆದುಕೊಂಡರು ಕುಗ್ಗದ ಗುಜರಾತ್ ಬ್ಯಾಟರ್ಸ್ ಪಂಜಾಬ್ ಬೌಲರ್ಸ್ ಬೆವರಿಳಿಸಿದರು. ಮೂರನೇ ವಿಕೆಟ್‌ಗೆ ಜೋಸ್ ಬಟ್ಲರ್ ಹಾಗೂ ಶೆರ್ಫೇನ್ ರುದರ್ಫೋರ್ಡ್ ಜೋಡಿ 33 ಎಸೆತಗಳಲ್ಲಿ 54 ರನ್‌ ಗಳ ಜೊತೆಯಾಟ ಆಡಿದರು, ಈ ಜೋಡಿ ಪಂಜಾಬ್ ತಂಡದಿಂದ ಗೆಲುವು ಕಸಿದುಕೊಳ್ಳುವ ನಿರೀಕ್ಷೆಯಲ್ಲಿತ್ತು. ಅಷ್ಟರಲ್ಲೇ ಬಟ್ಲರ್‌ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 54 ರನ್‌ ಗಳಿಸಿ ವಿಕೆಟ್ ಕಳೆದುಕೊಂಡರು.

ಮತ್ತೊಂದೆಡೆ ಕೊನೆ ಓವರ್‍‌ ವರೆಗೆ ಗುಜರಾತ್ ತಂಡಕ್ಕೆ ಗೆಲುವು ತಂದು ಕೊಡಲು ಶೆರ್ಫೇನ್ ರುದರ್ಫೋರ್ಡ್ ಹೋರಾಟ ನಡೆಸಿದರು. ಆದರೆ ಶೆರ್ಫೇನ್ ರುದರ್ಫೋರ್ಡ್ 28 ಎಸೆತಗಳಲ್ಲಿ 46 ರನ್ ಗಳಿಸಿ ತಮ್ಮ ಆಟ ನಿಲ್ಲಿಸಿದರು.

ಗಮನ ಸೆಳೆದ ಕನ್ನಡಿಗ ವೈಶಾಕ್‌

ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಬೌಲರ್‌ಗಳು ಹೆಚ್ಚು ರನ್ ಬಿಟ್ಟು ಕೊಟ್ಟರು. ಆದರೆ ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಕಣಕ್ಕೆ ಇಳಿದ ಕನ್ನಡಿಗ ವೈಶಾಖ್ ವಿಜಯಕುಮಾರ್ ಮಾತ್ರ ವಿಕೆಟ್ ಪಡೆಯದಿದ್ದರೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಗಳಿಸಿತ್ತಿದ್ದ ಗುಜರಾತ್ ಬ್ಯಾಟರ್ಸ್ ವೈಶಾಖ್ ವಿಜಯಕುಮಾರ್ ಬೌಲಿಂಗ್‌ನಲ್ಲಿ ಪರದಾಟ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಭವಿಷ್ಯದಲ್ಲಿ ಬಿಸಿಸಿಐಗೆ ಕಾದಿದೆ ದೊಡ್ಡ ಅಪಾಯ; ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಚ್ಚರಿಕೆ

ವೈಶಾಖ್ ವಿಜಯಕುಮಾರ್ ವೈಡ್ ಯಾರ್ಕರ್‌ಗಳೊಂದಿಗೆ ಗುಜರಾತ್‌ ತಂಡದ ರನ್‌ ಕಟ್ಟಿಹಾಕಿದರು. ಅವರ ಮೊದಲೆರಡು ಓವರ್‌ಗಳಲ್ಲಿ ಕೇವಲ ಐದು ರನ್‌ಗಳನ್ನು ನೀಡಿದರು. ಇದು ಪಂಜಾಬ್ ಕಿಂಗ್ಸ್ ತಂಡದ ಗೆಲುವನ್ನು ಜೀವಂತವಾಗಿರಿಸಿತು. ತಮ್ಮ ಮೂರನೇ ಓವರ್‌ನಲ್ಲಿ ಅಂದರೆ 19ನೇ ಓವರ್‍‌ನಲ್ಲಿ 18 ರನ್‌ಗಳನ್ನು ಬಿಟ್ಟುಕೊಟ್ಟ ವೈಶಾಖ್ ದುಬಾರಿ ಎನಿಸಿಕೊಂಡರು. ಆದರೆ ಅವರು ಶಿಸ್ತು ಬದ್ದಿನ ಬೌಲಿಂಗ್ ಮೂಲಕ ಪಂಜಾಬ್‌ ತಂಡದ ಮೊದಲ ಗೆಲುವಿಗೆ ಕಾಣಿಕೆ ನೀಡಿದರು. ಅವರು 3 ಓವರ್‍‌ಗಳಲ್ಲಿ 28 ರನ್ ಬಿಟ್ಟು ಕೊಡುವ ಮೂಲಕ ಗುಜರಾತ್ ಬ್ಯಾಟರ್‌ಗಳು ಮೇಲೆ ಪ್ರಾಬಲ್ಯ ಸಾಧಿಸಿದರು. ಈ ಮೂಲಕ ಅವರು ಪಂದ್ಯಕ್ಕೆ ತಿರುವು ಕೊಟ್ಟರು.

ಗುಜರಾತ್‌ಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 27 ರನ್‌ಗಳು ಬೇಕಾಗಿತ್ತು. ದುರದೃಷ್ಟವಶಾತ್, ಮೊದಲ ಎಸೆತದಲ್ಲೇ ರಾಹುಲ್ ಟೆವಾಟಿಯಾ ರನೌಟ್ ಆದರು. ಆದರೆ ರುದರ್ಫೋರ್ಡ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ಗೆಲುವಿನ ಭರವಸೆಯನ್ನು ಚಿಗುರಿಸಿದರು. ನಂತರದ ಎಸೆತದಲ್ಲಿ ಅರ್ಷದೀಪ್ ಸಿಂಗ್ ಅವರು ರುದರ್ಫೋರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಗುಜರಾತ್ ಗೆಲುವಿನ ಕನಸಿಗೆ ಅರ್ಷದೀಪ್ ಅಡ್ಡಿಯಾದರು. ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಭರ್ಜರಿ ಸಿಕ್ಸ್ ಬಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...