ಏಕದಿನ ವಿಶ್ವಕಪ್ 2023 | ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಜಯ; ಸೋಲಿನಲ್ಲೂ ಮಿಂಚಿದ ಪಾಕ್‌

Date:

ಐಸಿಸಿ ವಿಶ್ವಕಪ್‌ ಟೂರ್ನಿಯ 26ನೇ ಪಂದ್ಯದ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದು ವಿಕೆಟ್‌ ಅಂತರದಿಂದ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 271 ರನ್‌ಗಳ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 47.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಭರ್ಜರಿ ಆಟವಾಡಿದ ಏಡನ್ ಮಾರ್ಕ್ರಮ್ 41ನೇ ಓವರ್‌ನಲ್ಲಿ (250/7) ಉಸ್ಮಾ ಮಿರ್‌ ಬೌಲಿಂಗ್‌ನಲ್ಲಿ ಔಟಾದ ನಂತರ ಪಂದ್ಯದ ಗತಿ ಬದಲಾಯಿತು. ನಂತರದ ಓವರ್‌ಗಳಲ್ಲಿ ಶಾಹೀನ್ ಶಾ ಆಫ್ರಿದಿ 45/3 ಹಾಗೂ ಹಾರಿಸ್ ರೌಫ್ 62/2  ಮಿಂಚಿದರಾದರು 47ನೇ ಓವರ್‌ನಲ್ಲಿ ಕೇಶವ ಮಹಾರಾಜ್ ಬೌಂಡರಿ ಹೊಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಜಯವನ್ನು ತನ್ನದಾಗಿಸಿಕೊಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೆಮಿಫೈನಲ್‌ ಅರ್ಹತೆಗಾಗಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಸತತ ನಾಲ್ಕನೇ ಸೋಲಿನೊಂದಿಗೆ ಟೂರ್ನಿಯಿಂದ ಬಹುತೇಕ ನಿರ್ಗಮಿಸಿದೆ.

ಉತ್ತಮ ಆಟವಾಡಿದ ಮಧ್ಯಮ ಕ್ರಮಾಂಕದ ಆಟಗಾರ ಏಡನ್ ಮಾರ್ಕ್ರಮ್ 93 ಚೆಂಡುಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ 91 ರನ್‌ ಬಾರಿಸಿ ಗೆಲುವಿನ ರೂವಾರಿಯಾದರು.

ಆರಂಭಿಕರಾದ ಕ್ವಿಂಟನ್ ಡಿ ಕಾಕ್ (24) ಹಾಗೂ ನಾಯಕ ಟೆಂಬಾ ಬವುಮಾ ಔಟಾದ ನಂತರ ಏಡನ್ ಮಾರ್ಕ್ರಮ್‌ಗೆ ಡೇವಿಡ್ ಮಿಲ್ಲರ್ (29),ಮಾರ್ಕೊ ಜಾನ್ಸೆನ್ (20), ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ (21) ಉತ್ತಮ ಜೊತೆಯಾಟ ನೀಡಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಉತ್ತಮ ರನ್‌ ಸರಾಸರಿಯೊಂದಿಗೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಆರಂಭಿಕ ಆಘಾತಕ್ಕೆ ಒಳಗಾಯಿತು. ಇಮಾಮ್ ಉಲ್ ಹಕ್ (12) ಮತ್ತು ಅಬ್ದುಲ್ಲಾ ಶಫೀಕ್ (9) ಅವರು ಮಾರ್ಕೋ ಜಾನ್ಸನ್ ಬೌಲಿಂಗ್‌ನಲ್ಲಿ ಬೇಗನೇ ಔಟಾದರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಅಜಮ್ (50 ರನ್) ತಂಡಕ್ಕೆ ಆಸರೆಯಾಗಿ ಅರ್ಧಶತಕ ಗಳಿಸಿದರು. ಮಹತ್ವದ 50 ರನ್ ಸಿಡಿಸಿದ ಬಾಬರ್, ರಿಜ್ವಾನ್(31) ಜೊತೆಗೂಡಿ 3ನೇ ವಿಕೆಟ್​ಗೆ 48 ರನ್ ಪೇರಿಸಿದರು. ಇದಲ್ಲದೆ, 4ನೇ ವಿಕೆಟ್​ಗೆ ಇಫ್ತಿಕಾರ್ ಅಹ್ಮದ್(21) ಜೊತೆಗೂಡಿ 43 ರನ್ ಕಲೆ ಹಾಕುವಲ್ಲಿ ಯಶಸ್ವಿಯಾದರು.

ಈ ಸುದ್ದಿ ಓದಿದ್ದೀರಾ? ವಿಶ್ವಕಪ್ 2023 | ಶ್ರೀಲಂಕಾ ದಾಳಿಗೆ ಚಾಂಪಿಯನ್ ಇಂಗ್ಲೆಂಡ್ ಧೂಳೀಪಟ; ಲಂಕನ್ನರಿಗೆ ಭಾರಿ ಗೆಲುವು

ರಿಜ್ವಾನ್ ಹಾಗೂ ಇಫ್ತಿಕಾರ್ ಔಟಾಗಿ 141ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಅದ್ಭುತ ಜೊತೆಯಾಟವಾಡಿ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯದಂತೆ ಪಾರು ಮಾಡಿದರು.

ಇವರಿಬ್ಬರ ಜೋಡಿ 6ನೇ ವಿಕೆಟ್​ಗೆ 71 ಎಸೆತಗಳಲ್ಲಿ 84 ರನ್ ಬಾರಿಸಿತು. ಈ ವೇಳೆ ಶಕೀಲ್(52) ಅರ್ಧಶತಕ ಸಿಡಿಸಿದರೆ, ಶಾದಾಬ್ 43 ರನ್ ಸಿಡಿಸಿ ಔಟಾದರು. ಉಳಿದಂತೆ ಮೊಹಮ್ಮದ್ ನವಾಜ್ ಕೊನೆಯಲ್ಲಿ ಅಬ್ಬರಿಸಲು ಯತ್ನಿಸಿದರಾದರೂ 24 ರನ್ ಗಳಿಗೆ ಆಟ ಮುಗಿಸಿದರು. ಅಂತಿಮವಾಗಿ ಪಾಕ್ ತಂಡ 46.4 ಓವರ್​​​ಗಳಲ್ಲಿ 270 ರನ್​ಗಳಿಗೆ ಸರ್ವಪತನ ಕಂಡಿತು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ತಬ್ರೈಜ್ ಶಂಸಿ 60/4, ಜಾನ್ಸನ್ 43/3, ಜೆರಾಲ್ಡ್ ಕೊಯೆಟ್ಜಿ 42/2 ವಿಕೆಟ್ ಕಬಳಿಸಿದರು.

 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...