ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್)ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಮಾಡುತ್ತಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದರೂ, ‘ಪವರ್ ಪ್ಲೇ’ಯಲ್ಲಿ 125 ರನ್ ಚಚ್ಚುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು, T20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
SRH SCORED 125/0 IN THE POWERPLAY. 🤯
– The highest ever powerplay total in T20 cricket history. pic.twitter.com/fZLjG6qk95
— Mufaddal Vohra (@mufaddal_vohra) April 20, 2024
ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವಿಶ್ವದಾಖಲೆ ಬರೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ನ ಬೌಲರ್ಗಳನ್ನು ಮೊದಲ ಓವರ್ನ ಎರಡನೇ ಎಸೆತದಿಂದಲೇ ಕಾಡಲಾರಂಭಿಸಿದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ, ಕೇವಲ 16 ಎಸೆತಗಳಲ್ಲೇ 50 ರನ್ ಪೂರೈಸಿಕೊಂಡರು. ಆ ಬಳಿಕ ಆರು ಓವರ್ ಮುಗಿದಾಗ 125 ರನ್ ಒಟ್ಟುಗೂಡಿಸುವ ಮೂಲಕ, ಟಿ20 ಕ್ರಿಕೆಟ್ನಲ್ಲಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ಯಾವುದೇ ವಿಕೆಟ್ ನಷ್ಟವಿಲ್ಲದೆಯೇ ಸನ್ರೈಸರ್ಸ್ ಹೈದರಾಬಾದ್ ಈ ಸಾಧನೆ ಮಾಡಿದೆ.
Travis Head doing Travis Head things already 🔥
What a start this for @SunRisers 🧡
Watch the match LIVE on @JioCinema and @StarSportsIndia 💻📱#TATAIPL | #DCvSRH pic.twitter.com/THLOchmfT2
— IndianPremierLeague (@IPL) April 20, 2024
ಆರ್ಸಿಬಿ ವಿರುದ್ಧ ನಡೆದಿದ್ದ T20 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ಪವರ್ ಪ್ಲೇಯಲ್ಲಿ 105 ರನ್ ಗಳಿಸಿದ್ದದ್ದು ಈ ಹಿಂದಿನ ದಾಖಲೆಯಾಗಿತ್ತು.
MADNESS FROM THE SUNRISERS 😲#IPL2024 | #DCvsSRH pic.twitter.com/jMEp1C9apO
— ESPNcricinfo (@ESPNcricinfo) April 20, 2024
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಟ್ರಾವಿಸ್ ಹೆಡ್
ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಟ್ರಾವಿಸ್ ಹೆಡ್, ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು.
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ದಾಖಲಿಸಿರುವ ಎಸ್ಆರ್ಹೆಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ವಿರುದ್ಧ ಏಪ್ರಿಲ್ 15ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು, 20 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 287 ರನ್ಗಳನ್ನು ಕಲೆ ಹಾಕಿತ್ತು. ಇದು 17 ವರ್ಷದ ಐಪಿಎಲ್ನ ಇತಿಹಾಸದಲ್ಲೇ ತಂಡ ಬೃಹತ್ ಮೊತ್ತವಾಗಿದೆ. ಇದೇ ಸೀಸನ್ನಲ್ಲಿ ಮುಂಬೈ ವಿರುದ್ಧ ದಾಖಲಿಸಿದ್ದ 277 ರನ್ಗಳ ದಾಖಲೆಯನ್ನು ಸ್ವತಃ ಹೈದರಾಬಾದ್ ತಂಡವೇ ಮುರಿದು ಹಾಕಿತ್ತು.





