ಭಾನುವಾರ ತಡರಾತ್ರಿ ಕಿಂಗ್‌ಸ್ಟೌನ್‌ನ ಅರ್ನೋಸ್ ವೇಲ್ ಗ್ರೌಂಡ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ರೋಚಕ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ತಂಡವು ರೋಚಕ ಗೆಲುವು ದಾಖಲಿಸಿ, ಶಾಕ್ ನೀಡಿದೆ.
ಸೂಪರ್ 8ನ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ 21 ರನ್‌ಗಳಿಂದ ಗೆದ್ದು ಬೀಗಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ತಂಡಕ್ಕೆ ಮೊದಲ ಗೆಲುವಾಗಿದೆ.
ಅಲ್ಲದೆ, ಭಾರತದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್‌ನಲ್ಲಿ ಗೆಲುವು ಕಸಿದುಕೊಂಡಿದ್ದ ಆಸ್ಟ್ರೇಲಿಯಾ ತಂಡದ ವಿರುದ್ಧ ಇದೀಗ ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಗೆದ್ದು ಸೇಡು ತೀರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್‌ಗಳನ್ನು ಗಳಿಸಿ, ಸಾಧಾರಣ ಗುರಿ ನೀಡಿತ್ತು.
Afghanistan bury the demons of 2023 💥
A historic #T20WorldCup victory for Afghanistan 🤩
📝 #AFGvAUS: https://t.co/wXEyJ9HIRY pic.twitter.com/iIuoGTdyf6
— ICC (@ICC) June 23, 2024
149 ರನ್‌ಗಳ ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧ ಶತಕದ ಹೊರತಾಗಿಯೂ 19.2 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಗಿದ್ದರಿಂದ 21 ರನ್‌ಗಳ ಅಂತರದಿಂದ ಸೋತಿತು.
ಕರಾರುವಾಕ್ಕಾದ ಬೌಲಿಂಗ್ ದಾಳಿ ನಡೆಸಿದ ಉದಯೋನ್ಮುಖ ಅಫ್ಘಾನಿಸ್ತಾನವು 21 ರನ್‌ಗಳ ರೋಚಕ ಜಯ ದಾಖಲಿಸುವ ಮೂಲಕ, ಏಕದಿನ ವಿಶ್ವಕಪ್ ಚಾಂಪಿಯನ್ನರಿಗೆ ಆಘಾತ ನೀಡಿದೆ.
ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಲಿಲ್ಲ. ಟ್ರಾವಿಸ್ ಹೆಡ್, ನವೀನ್ ಉಲ್ ಹಕ್ ಎಸೆದ ಮೊದಲ ಓವರ್‌ನಲ್ಲಿ ಶೂನ್ಯಕ್ಕೆ ಔಟಾದರು.
That’s it! That’s the game for Afghanistan! 🇦🇫🔥
A historic moment St. Vincent, as upsets continue to stun the #T20WorldCup2024! 💪🏻
𝐒𝐔𝐏𝐄𝐑 𝟖 👉 #AFGvAUS | #T20WorldCupOnStar (available only in India) pic.twitter.com/cdV1FknZaf
— Star Sports (@StarSportsIndia) June 23, 2024
ಡೇವಿಡ್ ವಾರ್ನರ್ 3 ರನ್ ಮತ್ತು ಮಿಚೆಲ್ ಮಾರ್ಷ್ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡದ ರಕ್ಷಣೆ ಬಂದರು ಮತ್ತು ಅಫ್ಘಾನ್ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 59 ರನ್ ಗಳಿಸಿ ಆಸ್ಟ್ರೇಲಿಯಾ ತಂಡವನ್ನು ಮತ್ತೆ ಆಟಕ್ಕೆ ತಂದರು.

ಉಳಿದಂತೆ ಮಾರ್ಕಸ್ ಸ್ಟೋಯಿನಿಸ್ 11 ರನ್, ಟಿಮ್ ಡೇವಿಡ್ 2, ಮ್ಯಾಥ್ಯೂ ವೇಡ್ 5, ಪ್ಯಾಟ್ ಕಮ್ಮಿನ್ಸ್ 3, ಆಶ್ಟನ್ ಆಗರ್ 2, ಆಡಮ್ ಝಂಪಾ 9 ಮತ್ತು ಜೋಶ್ ಹೇಜಲ್‌ವುಡ್ 5 ರನ್ ಗಳಿಸಿದರು.
149 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅಧಶತಕದ ಹೊರತಾಗಿಯೂ 19.2 ಓವರ್‌ಗಳಲ್ಲಿ 127 ರನ್‌ಗಳಿಗೆ ಸರ್ವಪತನ ಕಂಡಿತು.
ಗುಲ್ಬದಿನ್ ನೈಬ್ 4 ಓವರ್‌ಗಳಲ್ಲಿ 20 ರನ್ ನೀಡಿ 4 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ಅಲ್ಲದೆ ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ತಂಡದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 15.5 ಓವರ್‌ಗಳಲ್ಲಿ 118 ರನ್‌ಗಳ ಜೊತೆಯಾಟ ನೀಡಿತ್ತು.
ರಹಮಾನುಲ್ಲಾ ಗುರ್ಬಾಜ್ 49 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 60 ರನ್ ಗಳಿಸಿದರೆ, ಇಬ್ರಾಹಿಂ ಝದ್ರಾನ್ 48 ಎಸೆತಗಳಲ್ಲಿ 6 ಬೌಂಡರಿ ಸಮೇತ 51 ರನ್ ಬಾರಿಸಿದರು. ಉಳಿದಂತೆ ಕರೀಂ ಜನತ್ 13 ರನ್, ಮೊಹಮ್ಮದ್ ನಬಿ 10 ರನ್ ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ 3 ವಿಕೆಟ್ ಪಡೆದರೆ, ಆಡಮ್ ಝಂಪಾ 2 ವಿಕೆಟ್ ಮತ್ತು ಮಾರ್ಕಸ್ ಸ್ಟೋಯಿನಿಸ್ 1 ವಿಕೆಟ್ ಪಡೆದರು.
ಇದೇ ವೇಳೆ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಟಿ20 ಪಂದ್ಯಗಳಲ್ಲಿ ಸತತ ಹ್ಯಾಟ್ರಿಕ್ ದಾಖಲಿಸಿದ ಮೊದಲ ಬೌಲರ್ ಎನಿಸಿಕೊಂಡರು.
This is what burying your 2023 ODI World Cup ghosts look like! 😁🇦🇫
After this upset, will #TeamIndia knock Australia out with a win over them tomorrow? 👀
Onto #𝐒𝐮𝐩𝐞𝐫𝐑𝐢𝐯𝐚𝐥𝐫𝐲 NOW 👉 #AUSvIND | TOMORROW, 6 PM | #T20WorldCupOnStar pic.twitter.com/JlX71P3yaX
— Star Sports (@StarSportsIndia) June 23, 2024





