ಟಿ20 ವಿಶ್ವಕಪ್ | ಪಾಕ್ ಬಹಿಷ್ಕಾರಕ್ಕೆ ಬಾಂಗ್ಲಾ ಬ್ರೇಕ್; ಪಿಸಿಬಿ ಮಣಿದಿದ್ದು ಯಾರ ಒತ್ತಡಕ್ಕೆ?

Date:

ಅಂತಿಮವಾಗಿ ಕ್ರಿಕೆಟ್ ಜಗತ್ತಿನಲ್ಲಿ “ದುಡ್ಡಿದ್ದವನೇ ದೊಡ್ಡಪ್ಪ” ಎಂಬ ಸಂದೇಶವನ್ನು ರವಾನಿಸಿದೆ. ಐಸಿಸಿ ಎಂಬುದು ಕೇವಲ ಹೆಸರಿಗೆ ಮಾತ್ರ ಇರುವ ಸಂಸ್ಥೆ, ಅದರ ಸೂತ್ರಧಾರಿ ಬಿಸಿಸಿಐ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದಂತಹ ರಾಷ್ಟ್ರಗಳು ತಮ್ಮ ಹಕ್ಕುಗಳಿಗಾಗಿ ಎಷ್ಟೇ ಬಲವಾಗಿ ವಾದಿಸಿದರೂ, ಆರ್ಥಿಕ ಶಕ್ತಿಯ ಮುಂದೆ ಅದೆಲ್ಲವೂ ನಿಷ್ಪ್ರಯೋಜಕ ಎಂಬ ಕಟು ಸತ್ಯ ಅನಾವರಣಗೊಂಡಿದೆ

ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯ ಹೊಸ್ತಿಲಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಮರ ತಾರಕಕ್ಕೇರಿತ್ತು. ಭಾರತದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂತ್ರಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. ತನ್ನದೇ ಒಕ್ಕೂಟದ ರಾಷ್ಟ್ರಗಳಿಂದ ಬೆಂಬಲ ನಿರೀಕ್ಷಿಸಿದ್ದ ಪಾಕಿಸ್ತಾನಕ್ಕೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಬರೆದ ಪತ್ರವೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

​ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪಾಕಿಸ್ತಾನಕ್ಕೆ ಬರೆದಿದೆ ಎನ್ನಲಾದ ಪತ್ರದ ಪ್ರತಿಯು ಲಭ್ಯವಾಗಿದ್ದು, ಅದರಲ್ಲಿರುವ ಅಂಶಗಳು ಪಾಕಿಸ್ತಾನದ ಪಾಲಿಗೆ ವಾಸ್ತವದ ಕನ್ನಡಿ ಹಿಡಿದಿವೆ. “ಭಾವನೆಗಳಿಗಿಂತ ಮಂಡಳಿಯ ಆರ್ಥಿಕ ಉಳಿವು ಮುಖ್ಯ” ಎಂದು ಬಾಂಗ್ಲಾ ಮಂಡಳಿ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದೆ. ಭಾರತದ ವಿರುದ್ಧ ಆಡದಿದ್ದರೆ ಆಗುವ ಆರ್ಥಿಕ ನಷ್ಟವನ್ನು ಭರಿಸುವ ಶಕ್ತಿ ಯಾರಿಗೂ ಇಲ್ಲ ಎಂಬುದನ್ನು ಬಾಂಗ್ಲಾ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ಪತ್ರದ ಮುಖ್ಯಾಂಶಗಳ ಪ್ರಕಾರ, “ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೇ ಈ ಟೂರ್ನಿಯ ಆರ್ಥಿಕ ಜೀವಾಳ. ಒಂದು ವೇಳೆ ಪಾಕಿಸ್ತಾನವು ಹಠಕ್ಕೆ ಬಿದ್ದು ಈ ಪಂದ್ಯವನ್ನು ಬಹಿಷ್ಕರಿಸಿದರೆ, ಪ್ರಸಾರ ಹಕ್ಕುಗಳಿಂದ ಬರುವ ಆದಾಯದಲ್ಲಿ ಭಾರಿ ಕಡಿತವಾಗಲಿದೆ. ಐಸಿಸಿ ಆದಾಯವನ್ನೇ ನಂಬಿಕೊಂಡಿರುವ ನಮ್ಮಂತಹ (ಬಾಂಗ್ಲಾದೇಶ, ಶ್ರೀಲಂಕಾ) ಮಂಡಳಿಗಳಿಗೆ ಇದು ಕಠಿಣ ಕ್ರಮವಾಗಲಿದೆ. ಹೀಗಾಗಿ, ದಯವಿಟ್ಟು ಹಠ ಬಿಡಿ ಮತ್ತು ಭಾರತದ ವಿರುದ್ಧ ಆಡಲು ಒಪ್ಪಿಕೊಳ್ಳಿ” ಎಂದು ಬಾಂಗ್ಲಾ ಆಗ್ರಹಿಸಿದೆ.

​ಇನ್ನೊಂದೆಡೆ, ಪಾಕಿಸ್ತಾನವು ಭಾರತದ ವಿರುದ್ಧ ಆಡಲು ಅಥವಾ ಹೈಬ್ರಿಡ್ ಮಾದರಿಗೆ ಒಪ್ಪಲು ಐಸಿಸಿ ಮುಂದೆ ಮೂರು ಕಠಿಣ ಷರತ್ತುಗಳನ್ನು ಇಟ್ಟಿತ್ತು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಮೂರೂ ಷರತ್ತುಗಳನ್ನು ಕಸದ ಬುಟ್ಟಿಗೆ ಹಾಕಿದೆ. “ಷರತ್ತುಗಳನ್ನು ಹಾಕಿ ಆಟ ಆಡಲು ಇದು ದ್ವಿಪಕ್ಷೀಯ ಸರಣಿಯಲ್ಲ, ಇದು ಐಸಿಸಿ ಟೂರ್ನಿ” ಎಂದು ಐಸಿಸಿ ಎಚ್ಚರಿಕೆ ನೀಡಿದೆ.

​ಐಸಿಸಿ ತಿರಸ್ಕರಿಸಿದ ಪಾಕಿಸ್ತಾನದ ಪ್ರಮುಖ ಬೇಡಿಕೆಗಳೆಂದರೆ ಭವಿಷ್ಯದಲ್ಲಿ ಭಾರತವೂ ಪಾಕಿಸ್ತಾನಕ್ಕೆ ಬರಲೇಬೇಕು ಎಂಬ ಲಿಖಿತ ಭರವಸೆ ನೀಡುವುದು, ಹೈಬ್ರಿಡ್ ಮಾದರಿಯಿಂದಾಗುವ ನಷ್ಟವನ್ನು ಐಸಿಸಿಯೇ ಭರಿಸುವುದು, ಟೂರ್ನಿಯ ಫೈನಲ್ ಪಂದ್ಯವನ್ನು ಯಾವುದೇ ಕಾರಣಕ್ಕೂ ಬದಲಿಸದಿರುವುದು. ಈ ಎಲ್ಲ ಬೇಡಿಕೆಗಳನ್ನು ಐಸಿಸಿ “ಅಪ್ರಾಯೋಗಿಕ” ಎಂದು ತಳ್ಳಿಹಾಕಿದೆ.

ಇದನ್ನು ಓದಿದ್ದೀರಾ? ಚುಟುಕು ಕ್ರಿಕೆಟ್‌ ಮಹಾಸಮರ: ಇಂದಿನಿಂದ ಟಿ20 ವಿಶ್ವಕಪ್‌ ಹಬ್ಬ

​ಈ ಇಡೀ ಬೆಳವಣಿಗೆಯ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಂದಿರುವ “ಹಣದ ಬಲ” ಸ್ಪಷ್ಟವಾಗಿ ಗೋಚರಿಸುತ್ತಿದೆ. ವಿಶ್ವ ಕ್ರಿಕೆಟ್‌ನ ಆದಾಯದ ಸಿಂಹಪಾಲು ಭಾರತದಿಂದಲೇ ಬರುತ್ತಿರುವುದರಿಂದ, ಐಸಿಸಿ ಕೂಡ ಬಿಸಿಸಿಐ ನಿರ್ಧಾರಗಳಿಗೆ ತಲೆಬಾಗುವುದು ಅನಿವಾರ್ಯವಾಗಿದೆ. ಐಸಿಸಿ ಸ್ವತಂತ್ರ ಸಂಸ್ಥೆಯಾಗಿದ್ದರೂ, ಅದರ ನಿರ್ಧಾರಗಳು ಪರೋಕ್ಷವಾಗಿ ಭಾರತದ ಹಿತಾಸಕ್ತಿಯನ್ನೇ ಕಾಪಾಡುತ್ತಿವೆ ಎಂಬ ಆರೋಪಕ್ಕೆ ಈ ಘಟನೆ ಪುಷ್ಠಿ ನೀಡಿದೆ.

​ಬಿಸಿಸಿಐನ ಪ್ರತಿಯೊಂದು ನಡೆಯ ಹಿಂದೆಯೂ ಭಾರತದ ಆಡಳಿತಾರೂಢ ಬಿಜೆಪಿ ಸರ್ಕಾರದ ರಾಜಕೀಯ ನಿಲುವುಗಳಿವೆ ಎಂಬುದು ಜಗಜ್ಜಾಹೀರು. ಗಡಿಯಾಚೆಗಿನ ಭಯೋತ್ಪಾದನೆ ಕಾರಣದಿಂದ ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧ ಬೇಡ ಎಂಬುದು ಸರ್ಕಾರದ ನೀತಿ. ಹೀಗಾಗಿ, ಕ್ರಿಕೆಟ್ ಮೈದಾನದಲ್ಲೂ ರಾಜಕೀಯದ ಆಟ ಜೋರಾಗಿಯೇ ನಡೆಯುತ್ತಿದೆ. ಕ್ರೀಡೆ ಮತ್ತು ರಾಜಕೀಯ ಬೇರೆ ಬೇರೆ ಎಂಬ ತತ್ವ ಇಲ್ಲಿ ಸಂಪೂರ್ಣವಾಗಿ ಗೌಣವಾಗಿದೆ.

​ಬಾಂಗ್ಲಾದೇಶದ ಪತ್ರದ ಒತ್ತಡ ಮತ್ತು ಐಸಿಸಿಯ ಕಠಿಣ ನಿಲುವಿನಿಂದಾಗಿ ಪಾಕಿಸ್ತಾನ ಈಗ ಇಕ್ಕಟ್ಟಿಗೆ ಸಿಲುಕಿದೆ. “ಮುಂದೆ ಹೋದರೆ ಹಳ್ಳ, ಹಿಂದೆ ಬಂದರೆ ಕೊಳ್ಳ” ಎಂಬ ಸ್ಥಿತಿ ಪಿಸಿಬಿಯದ್ದು. ಭಾರತದ ವಿರುದ್ಧ ಆಡದಿದ್ದರೆ ಟೂರ್ನಿಯಿಂದಲೇ ಹೊರಬೀಳಬೇಕಾಗುತ್ತದೆ, ಜೊತೆಗೆ ಐಸಿಸಿ ಅನುದಾನವೂ ಸ್ಥಗಿತಗೊಳ್ಳುತ್ತದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡಲಿದೆ. ​ಹೀಗಾಗಿ, ಪಾಕಿಸ್ತಾನವು ತನ್ನ ಬಿಗಿಪಟ್ಟು ಸಡಿಲಿಸಲು ನಿರ್ಧರಿಸಿದೆ. ಮಂಡಳಿಯ ಆರ್ಥಿಕ ಹಿತಾಸಕ್ತಿ ಮತ್ತು ನೆರೆಹೊರೆಯ ರಾಷ್ಟ್ರಗಳ (ಬಾಂಗ್ಲಾ, ಶ್ರೀಲಂಕಾ) ಒತ್ತಡಕ್ಕೆ ಮಣಿದು, ಭಾರತದ ವಿರುದ್ಧದ ಪಂದ್ಯವನ್ನಾಡಲು ಪಿಸಿಬಿ ಒಪ್ಪಿಗೆ ಸೂಚಿಸುವ ಸಾಧ್ಯತೆಗಳೇ ಹೆಚ್ಚಿವೆ. ಅವಮಾನವಾದರೂ ಸರಿ, ಮಂಡಳಿ ಉಳಿದರೆ ಸಾಕು ಎಂಬ ತೀರ್ಮಾನಕ್ಕೆ ಪಾಕ್ ಬಂದಂತಿದೆ.

​ಈ ಬೆಳವಣಿಗೆಯು ಅಂತಿಮವಾಗಿ ಕ್ರಿಕೆಟ್ ಜಗತ್ತಿನಲ್ಲಿ “ದುಡ್ಡಿದ್ದವನೇ ದೊಡ್ಡಪ್ಪ” ಎಂಬ ಸಂದೇಶವನ್ನು ರವಾನಿಸಿದೆ. ಐಸಿಸಿ ಎಂಬುದು ಕೇವಲ ಹೆಸರಿಗೆ ಮಾತ್ರ ಇರುವ ಸಂಸ್ಥೆ, ಅದರ ಸೂತ್ರಧಾರಿ ಬಿಸಿಸಿಐ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದಂತಹ ರಾಷ್ಟ್ರಗಳು ತಮ್ಮ ಹಕ್ಕುಗಳಿಗಾಗಿ ಎಷ್ಟೇ ಬಲವಾಗಿ ವಾದಿಸಿದರೂ, ಆರ್ಥಿಕ ಶಕ್ತಿಯ ಮುಂದೆ ಅದೆಲ್ಲವೂ ನಿಷ್ಪ್ರಯೋಜಕ ಎಂಬ ಕಟು ಸತ್ಯ ಅನಾವರಣಗೊಂಡಿದೆ.

​ಟಿ20 ವಿಶ್ವಕಪ್‌ನಂತಹ ಮಹತ್ವದ ವೇದಿಕೆಯಲ್ಲಿ ನಡೆಯುತ್ತಿರುವ ಈ ನಾಟಕೀಯ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಂತೂ ಸುಳ್ಳಲ್ಲ. ಆದರೆ, ಅಂತಿಮವಾಗಿ ಕ್ರಿಕೆಟ್ ಆಟ ಮುಂದುವರಿಯಲಿದೆ, ಭಾರತ-ಪಾಕ್ ಪಂದ್ಯ ನಡೆಯಲಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ​ಒಟ್ಟಿನಲ್ಲಿ, ಬಾಂಗ್ಲಾದೇಶದ ಆ ಒಂದು ಪತ್ರ ಪಾಕಿಸ್ತಾನದ ಹಠವನ್ನು ಮುರಿಯುವಲ್ಲಿ ಬ್ರಹ್ಮಾಸ್ತ್ರವಾಗಿ ಕೆಲಸ ಮಾಡಿದೆ. ಬಿಸಿಸಿಐನ ಹಣಕಾಸಿನ ದರ್ಬಾರ್ ಮತ್ತು ಐಸಿಸಿಯ ಅಸಹಾಯಕತೆಯ ನಡುವೆ, ಪಾಕಿಸ್ತಾನವು ಅನಿವಾರ್ಯವಾಗಿ ಶರಣಾಗತಿ ಒಪ್ಪಿಕೊಂಡಿದ್ದು, ಹೈಡ್ರಾಮಾಕ್ಕೆ ತೆರೆ ಬಿದ್ದಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...