ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿದೆ. ಇದರೊಂದಿಗೆ, ಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್ ತಂಡಕ್ಕೆ 170 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್‌ಗಿಳಿದ ದಕ್ಷಿಣ ಆಫ್ರಿಕಾ ತಂಡವು ಸತತವಾಗಿ ವಿಕೆಟ್ ಕಳೆದುಕೊಂಡ ಹೊತ್ತಿನಲ್ಲಿ, ಮಾರ್ಕೊ ಜಾನ್ಸೆನ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜಾನ್ಸೆನ್, ಕೇವಲ 30 ಎಸೆತಗಳಲ್ಲಿ ಭರ್ಜರಿ 55 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ವಿಂಡೀಸ್ ಮಣಿಸಿ ಸೆಮಿ ತಲುಪಿದ ಭಾರತದ ರೋಚಕ ಆಟ
ನ್ಯೂಜಿಲೆಂಡ್ ಪರ ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ ಹಾಗೂ ಮೆಕ್‌ಕಾಂಜಿ ತಲಾ 2 ವಿಕೆಟ್ ಪಡೆದರು.
ಫೈನಲ್‌ಗೆ ಲಗ್ಗೆಯಿಡಲು ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 170 ರನ್ ಬೆನ್ನಟ್ಟಬೇಕಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.





