ಜೂನ್ 2ರಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೇತೃತ್ವದ ಮೊದಲ ಬ್ಯಾಚ್ ಇಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ.
2024ರ ಐಪಿಎಲ್‌ನಿಂದ ಹೊರಬಿದ್ದ ಆರು ಫ್ರಾಂಚೈಸಿಯ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಹೊರಟಿದ್ದಾರೆ. ಇನ್ನುಳಿದ ಆಟಗಾರರು ಮೇ 27ರಂದು 2ನೇ ಬ್ಯಾಚ್‌ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
A GROUP PICTURE OF TEAM INDIA BEFORE LEAVING FOR THE USA. 🇮🇳 pic.twitter.com/gPcCXMTKDL
— Mufaddal Vohra (@mufaddal_vohra) May 25, 2024
ಶನಿವಾರ ಯುಎಸ್‌ಗೆ ತೆರಳುತ್ತಿರುವ ಮೊದಲ ಬ್ಯಾಚ್‌ನಲ್ಲಿ ಕಪ್ತಾನ ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯ ಕುಮಾರ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್ ಹೊರಟಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಕೂಡ ಹೊರಡಲಿದ್ದಾರೆ ಎಂದು ಸುದ್ದಿ ಹರಿದಿತ್ತಾದರೂ, ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿಲ್ಲ.
Maybe Virat is traveling with his family so he was not seen with the team#viratkohli #t20worldcup pic.twitter.com/H59RlzCXTx
— 𝙒𝙧𝙤𝙜𝙣🥂 (@wrognxvirat) May 25, 2024
ಉಳಿದ ಆಟಗಾರರಾದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್ ಮತ್ತು ಮೀಸಲು ಆಟಗಾರರಾದ ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಮೇ 27 ರಂದು 2ನೇ ಬ್ಯಾಚ್‌ನೊಂದಿಗೆ ಹೊರಡಲಿದ್ದಾರೆ.
ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಲಂಡನ್‌ನಲ್ಲಿರುವುದಾಗಿ ತಿಳಿದುಬಂದಿದ್ದು, ಅಲ್ಲಿಂದಲೇ ಬಂದು ತಂಡದೊಂದಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.
The wait is over.
We are back!
Let’s show your support for #TeamIndia 🇮🇳 pic.twitter.com/yc69JiclP8
— BCCI (@BCCI) May 25, 2024
ಮೇ 27-28 ರಂದು 2ನೇ ಬ್ಯಾಚ್ ಪ್ರಯಾಣ
ಐಪಿಎಲ್ 2024ರ ಅಂತಿಮ ಪಂದ್ಯ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಈ ಎರಡೂ ತಂಡಗಳಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ರಿಂಕು ಸಿಂಗ್. ಆದರೆ, ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಗಿಲ್ಲ. ಬದಲಿಗೆ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2024 ರ ಫೈನಲ್ ನಂತರ, ಅವರು ವಿಶ್ವಕಪ್‌ಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
Rishabh Pant when the media asked ‘jeet ke aana’. 🥹🇮🇳 pic.twitter.com/h22v9GBEzQ
— Mufaddal Vohra (@mufaddal_vohra) May 25, 2024
‘ಗೆದ್ದು ಬನ್ನಿ’ ಎಂದು ಹಾರೈಸಿದ ಅಭಿಮಾನಿಗಳು
ಟಿ20 ವಿಶ್ವಕಪ್ ಟೂರ್ನಿಗಾಗಿ ಹೊರಟಿದ್ದ ಭಾರತ ತಂಡಕ್ಕೆ ಸಾವಿರಾರು ಅಭಿಮಾನಿಗಳು ಮುಂಬೈ ವಿಮಾನ ನಿಲ್ದಾಣದ ಮುಂಭಾಗ, ಕೆಲ ಅಭಿಮಾನಿಗಳು ಏರ್ಪೋರ್ಟ್ ಆವರಣದಲ್ಲಿ ನಿಂತು ಶುಭಕೋರಿದ್ದಾರೆ. ಈ ವೇಳೆ ರಿಷಭ್ ಪಂತ್ ಸೇರಿದಂತೆ ಕೆಲವು ಆಟಗಾರರು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು.
ಅಮೆರಿಕ-ವೆಸ್ಟ್‌ಇಂಡೀಸ್ ಆತಿಥ್ಯ
ಜೂನ್ 1 ರಿಂದ(ಭಾರತದಲ್ಲಿ ಜೂನ್ 2) ಜೂನ್ 29ರ ವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್ ಆತಿಥ್ಯ ವಹಿಸಿಕೊಂಡಿದೆ.
ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ, ಸೂಪರ್-12 ಹಂತವನ್ನು ಸೂಪರ್-8ಕ್ಕೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
Rishabh Pant gave his autograph to a fan who came to see off the Indian team. 🇮🇳 pic.twitter.com/TgATZG49E3
— Mufaddal Vohra (@mufaddal_vohra) May 25, 2024
ಜೂನ್ 1 ರಿಂದ 18ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19ರಿಂದ 24ರವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್.
🚨India’s squad for ICC Men’s T20 World Cup 2024 announced 🚨
Let’s get ready to cheer for #TeamIndia #T20WorldCup pic.twitter.com/jIxsYeJkYW
— BCCI (@BCCI) April 30, 2024





