1 ಎಸೆತದಲ್ಲಿ 18 ರನ್‌ ಬಿಟ್ಟುಕೊಟ್ಟು ವಿಶ್ವ ದಾಖಲೆ ಬರೆದ ತಮಿಳುನಾಡು ಬೌಲರ್‌!

Date:

ಟಿ20 ಕ್ರಿಕೆಟ್‌ ಯಾವಾಗಲೂ ಬೌಲರ್‌ಗಳಿಗೆ ದುಸ್ವಪ್ನ, ಬ್ಯಾಟರ್‌ಗಳಿಗೆ ಹಬ್ಬ. ಚುಟುಕು ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಲು ಅಂತಿಮ ಎಸೆತದವರೆಗೂ ಕಾಯಬೇಕು ಎಂಬುದು ಬಹಳಷ್ಟು ಬಾರಿ ನಿರೂಪಿತವಾಗಿದೆ. ಇದೀಗ, ತಮಿಳುನಾಡಿನಲ್ಲಿ ನಡೆದ ಟಿ20 ಪಂದ್ಯವೊಂದು ʻದುಬಾರಿ ಕೊನೆಯ ಎಸೆತʼದಲ್ಲಿ ʻವಿಶ್ವ ದಾಖಲೆʼ ಬರೆದಿದೆ. ಬೌಲರ್‌ ಓರ್ವ ಒಂದೇ ಎಸೆತದಲ್ಲಿ ಬರೋಬ್ಬರಿ 18 ರನ್‌ ಬಿಟ್ಟುಕೊಡುವ ಮೂಲಕ ಅಪರೂಪದ ʻಅನಗತ್ಯ ದಾಖಲೆʼ ಬರೆದಿದ್ಧಾನೆ.

ಎದುರಾಳಿ ತಂಡಕ್ಕೆ ವಿಶ್ವ ದಾಖಲೆಯ ರನ್‌ ಬಿಟ್ಟುಕೊಟ್ಟ ಬೌಲರ್‌ ಹೆಸರು ಅಭಿಷೇಕ್‌ ತನ್ವಾರ್.‌ ವೇದಿಕೆಯಾಗಿದ್ದು ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌).

ಟಿಎನ್‌ಪಿಎಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ ಪಂದ್ಯ ಇದೀಗ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಚೆಪಾಕ್ ಸೂಪರ್ ಗಿಲ್ಲಿಸ್, 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 191 ರನ್‌ ಗಳಿಸಿತ್ತು. ಸೇಲಂ ಸ್ಪಾರ್ಟನ್ಸ್  ಪರವಾಗಿ ಅಂತಿಮ ಓವರ್‌ ಎಸೆಯಲು ಬಂದ ತಂಡದ ನಾಯಕ ಅಭಿಷೇಕ್‌ ತನ್ವಾರ್, ಮೊದಲ 5 ಎಸೆತಗಳಲ್ಲಿ 8 ರನ್‌ ಬಿಟ್ಟುಕೊಟ್ಟಿದ್ದರು. ಆದರೆ ನಂತರದ ಒಂದು ಎಸೆತದಲ್ಲಿ ಅವರು ಬರೋಬ್ಬರಿ 18 ರನ್‌ ಬಿಟ್ಟುಕೊಡುವ ಮೂಲಕ ಮುಜುಗರ ಅನುಭವಿಸಿದರು.

ಅಂತಿಮ ಎಸೆತದಲ್ಲಿ ಅಭಿಷೇಕ್‌ ಕ್ರಮವಾಗಿ, 1(ನೋಬಾಲ್‌), 7(ನೋಬಾಲ್‌), 3(ನೋಬಾಲ್‌), 1(ವೈಡ್), ಹಾಗೂ ಕೊನೆಯದಾಗಿ ಸಿಕ್ಸರ್‌ ಹೊಡೆಸಿಕೊಳ್ಳುವುದರೊಂದಿಗೆ ಒಟ್ಟು 26 ರನ್‌ ಬಿಟ್ಟುಕೊಟ್ಟು ಓವರ್‌ ಮುಗಿಸಿದರು. ಪಂದ್ಯದಲ್ಲಿ ಒಟ್ಟು 4 ಓವರ್‌ ಎಸೆದ ಅಭಿಷೇಕ್‌ 44 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು.

ಈ ಸುದ್ದಿ ಓದಿದ್ದೀರಾ?: ದ್ವಿಪಕ್ಷೀಯ ಸರಣಿಗಳಲ್ಲಷ್ಟೇ ಭಾರತದ ಅಬ್ಬರ; ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ!

52 ರನ್‌ಗಳ ಅಂತರದಿಂದ ಗೆದ್ದ ಚೆಪಾಕ್‌

ಚೆಪಾಕ್ ಸೂಪರ್ ಗಿಲ್ಲಿಸ್ ಒಡ್ಡಿದ್ದ 218 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟುವ ವೇಳೆ ಸೇಲಂ ಸ್ಪಾರ್ಟನ್ಸ್‌, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟದಲ್ಲಿ 169 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 52 ರನ್‌ಗಳ ಅಂತರದಲ್ಲಿ ಚೆಪಾಕ್‌ ತಂಡಕ್ಕೆ ಶರಣಾಯಿತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...