ʼಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ

Date:

ಇಂದು ತೆಂಬಾ ಬವುಮಾ ಎಂಬ ಹೆಸರು ಕೇವಲ ಒಬ್ಬ ಕ್ರಿಕೆಟ್ ಆಟಗಾರನ ಹೆಸರಾಗಿ ಉಳಿದಿಲ್ಲ; ಅದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಬಂದ ಹೊಸ ಬದಲಾವಣೆ, ಹೊಸ ಆತ್ಮವಿಶ್ವಾಸ ಮತ್ತು ದೃಢತೆಯ ಪ್ರತೀಕವಾಗಿ ಕಾಣುತ್ತಿದೆ. ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಪದೇಪದೇ ಕೈಚೆಲ್ಲುತ್ತಿದ್ದ ದಕ್ಷಿಣ ಆಫ್ರಿಕಾ, ತೆಂಬಾ ನಾಯಕತ್ವದಲ್ಲಿ ತನ್ನ ಹಳೆಯ ‘ಚೋಕರ್ಸ್’ ಹಣೆಪಟ್ಟಿಯನ್ನು ಕಳಚಿ ಲಾರ್ಡ್‌ನಲ್ಲಿ ಇತಿಹಾಸ ಬರೆದಿತ್ತು.

ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ಅಂತ್ಯವಾದ ನಂತರ ದೇಶದ ಕ್ರೀಡೆಯಲ್ಲಿ ಸಮಾನತೆ ತರಲು ಸರ್ಕಾರವು “ಮೀಸಲಾತಿ ಪದ್ಧತಿ” ಜಾರಿಗೊಳಿಸಿತು. ಈ ನೀತಿಯಂತೆ ಪ್ರತಿ ಪಂದ್ಯದಲ್ಲಿ ಕನಿಷ್ಠ ಆರು ಜನ ಬಣ್ಣದ ಕಪ್ಪು ಬಣ್ಣದ ಆಟಗಾರರು ಆಡಲೇಬೇಕಿತ್ತು. ಉದ್ದೇಶ ಒಳ್ಳೆಯದೇ ಆಗಿದ್ದರೂ, ಆಡಳಿತದಲ್ಲಿದ್ದ ಬಿಳಿಯರು ಈ ನೀತಿಯ ಬಗ್ಗೆ ಬೇಕಂತಲೇ ವಿವಾದ ಉಂಟು ಮಾಡಿದರು. ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ ಅವರು ಪ್ರಥಮ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ, ಅವರನ್ನು ಮೀಸಲಾತಿ ಆಟಗಾರ ಎಂದೇ ಕೆಲವರು ಹಂಗಿಸುತ್ತಿದ್ದರು. ಮಾಧ್ಯಮಗಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲೂ ಒಂದು ವರ್ಗದ ಜನರಿಂದ ಈ ಟೀಕೆ ಪದೇ ಪದೇ ಕೇಳಿಬರುತ್ತಿತ್ತು. ಪ್ರತಿ ಬಾರಿ ರನ್ ಗಳಿಸದಿದ್ದರೂ ಅಥವಾ ಸಣ್ಣ ತಪ್ಪು ಮಾಡಿದರೂ “ಮಿಸಲಾತಿಯಿಂದ ಬಂದವನು”ಎಂದು ಅಣಕಿಸುತ್ತಿದ್ದರು. ಆದರೂ ತೆಂಬಾ ಇವೆಲ್ಲ ಅವಮಾನಗಳನ್ನು ತಾಳ್ಮೆಯಿಂದ ಎದುರಿಸಿ, ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದಿಂದಲೇ ಉತ್ತರ ನೀಡುತ್ತಾ ಬಂದರು.

ತೆಂಬಾ ಬವುಮಾ ಅವರ ಜೀವನ ಪಯಣವೇ ಸ್ವತಃ ದೇಶದ ಪರಿವರ್ತನೆಯ ಪ್ರತಿಬಿಂಬ. ವರ್ಣಭೇದ ನೀತಿ ಕೊನೆಗೊಂಡ 4 ವರ್ಷಗಳ ಮೊದಲು ಜನಿಸಿದ ಬವುಮಾ, ಕಪ್ಪು ಬಣ್ಣದ ಆಟಗಾರನಾಗಿ ಕ್ರಿಕೆಟ್‌ ವ್ಯವಸ್ಥೆಯಲ್ಲಿದ್ದ ಅಡಚಣೆಗಳನ್ನು ಧೈರ್ಯದಿಂದ ಎದುರಿಸಿ ಮುಂದೆ ಬಂದವರು. ಲಾಂಗಾ ಟೌನ್‌ಶಿಪ್‌ನ ಗಲ್ಲಿ ಕ್ರಿಕೆಟ್‌ನಿಂದ ರಾಷ್ಟ್ರೀಯ ತಂಡದ ನಾಯಕತ್ವದವರೆಗೆ ಏರಿದ ಈ ಹಾದಿ ಕೇವಲ ಕ್ರೀಡಾ ಸಾಧನೆಯಲ್ಲ—ಸಾಮಾಜಿಕ ಬದಲಾವಣೆಯ ಸಂಕೇತವೂ ಆಗಿದೆ. ಬವುಮಾ ಅವರ ಕಥೆ ಹೊಸ ದಕ್ಷಿಣ ಆಫ್ರಿಕಾದ ಸಮಾನತೆ, ಆತ್ಮವಿಶ್ವಾಸ ಮತ್ತು ಹೊಸ ಅವಕಾಶಗಳ ಪ್ರತಿಕೃತಿಯಾಗಿ ನಿಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತೆಂಬಾ ಬವುಮಾ ಅವರು 1990ರ ಮೇ 17ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದ ಹತ್ತಿರದ ಲಾಂಗಾ ಎಂಬ ಕಪ್ಪು ಜನರು ವಾಸಿಸುವ ಪ್ರದೇಶದಲ್ಲಿ ಜನಿಸಿದರು. ದಕ್ಷಿಣ ಆಫ್ರಿಕಾ ವರ್ಣಭೇದ ನೀತಿ 1994ರಲ್ಲಿ ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಕೊನೆಗೊಂಡಿತ್ತು. ಆದರೆ ಸಮಾಜದಲ್ಲಿ ಜನರ ಮನಸ್ಸು-ನಡವಳಿಕೆಯಲ್ಲಿ ಆ ಜಾತಿ ತಾರತಮ್ಯ ಇನ್ನೂ ಆಳವಾಗಿ ಬೇರೂರಿ ನಿಂತಿತ್ತು, ಅದು ಸುಲಭವಾಗಿ ಮಾಯವಾಗಿರಲಿಲ್ಲ. ತೆಂಬಾ ಅವರು ಕಪ್ಪು ಬಣ್ಣದವರ ಸಮುದಾಯದ ಕುಟುಂಬದಲ್ಲಿ ಹುಟ್ಟಿದ್ದರಿಂದ ಅವರ ಬಾಲ್ಯ ಬಹಳಷ್ಟು ಬಡತನದ ನಡುವೆಯೇ ಕಳೆಯಿತು. ಆರ್ಥಿಕ ಸಮಸ್ಯೆ, ಉತ್ತಮ ಶಿಕ್ಷಣ-ಆರೋಗ್ಯ ಸೌಲಭ್ಯಗಳ ಕೊರತೆ, ಸಮಾಜದಲ್ಲಿ ತಾರತಮ್ಯ – ಇವೆಲ್ಲವೂ ಅವರ ಸಣ್ಣ ವಯಸ್ಸಿನ ಜೀವನದ ಭಾಗವಾಗಿದ್ದವು.

Temba bavuma 1

ತೆಂಬಾ ಬವುಮಾ ಅವರದು ಸಾಮಾನ್ಯ ಕಾರ್ಮಿಕ ಕುಟುಂಬ. ತಂದೆ ದಿನಗೂಲಿ ನೌಕರರು, ತಾಯಿ ಗೃಹಿಣಿ. ಮನೆಯಲ್ಲಿ ಐಷಾರಾಮ ಎಂಬುದೇ ಇರಲಿಲ್ಲ. ಆದರೆ ಕ್ರಿಕೆಟ್‌ ಮೇಲಿನ ಪ್ರೀತಿ ಅಪಾರವಾಗಿತ್ತು. ಸಣ್ಣ ವಯಸ್ಸಿನಿಂದಲೇ ಕೇಪ್‌ಟೌನ್‌ನ ರಸ್ತೆಗಳಲ್ಲೂ, ಮಣ್ಣಿನ ಮೈದಾನಗಳಲ್ಲೂ ಪ್ಲಾಸ್ಟಿಕ್ ಚೆಂಡಿನೊಂದಿಗೆ ಆಟವಾಡುತ್ತಿದ್ದ ತೆಂಬಾ, ಆ ಆಟವನ್ನೇ ತನ್ನ ಭವಿಷ್ಯವನ್ನಾಗಿ ಮಾಡಿಕೊಂಡರು. ಆರ್ಥಿಕ ಸಂಕಷ್ಟ, ಸೌಲಭ್ಯಗಳ ಕೊರತೆ ಎದುರಿಸುತ್ತಲೇ ತಾಳ್ಮೆಯಿಂದ ತರಬೇತಿ ಪಡೆದು, ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಏರಿದ ತೆಂಬಾ ಬವುಮಾ ಅವರ ಯಶಸ್ಸು, ಕಠಿಣ ಪರಿಶ್ರಮ ಮತ್ತು ಛಲಕ್ಕೆ ಸಾಕ್ಷಿಯಾಗಿದೆ.

ಬಾಲ್ಯದಲ್ಲಿ ತೆಂಬಾ ಬವುಮಾ ಅವರಿಗೆ ಗುಣಮಟ್ಟದ ಕ್ರಿಕೆಟ್ ಕಿಟ್‌ಗಳೂ ಸಿಗುತ್ತಿರಲಿಲ್ಲ, ವೃತ್ತಿಪರ ಕೋಚಿಂಗ್‌ನ ಕನಸೂ ದೂರವಾಗಿತ್ತು. ಆದರೆ ಅವರ ಅಪೂರ್ವ ಪ್ರತಿಭೆಯನ್ನು ಮೊದಲು ಗುರುತಿಸಿದ ಸ್ಥಳೀಯ ಕೋಚ್‌ಗಳು ಅವರಿಗೆ ಪ್ರೋತ್ಸಾಹ ನೀಡಿದರು. ನಂತರ ಕೇಪ್ ಟೌನ್‌ನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶ ದೊರೆತದ್ದು ತೆಂಬಾ ಅವರ ಜೀವನಕ್ಕೆ ನಿರ್ಣಾಯಕ ತಿರುವು ನೀಡಿತು. ಉತ್ತಮ ಮೈದಾನ, ಗುಣಮಟ್ಟದ ಸೌಲಭ್ಯಗಳು ಮತ್ತು ವೃತ್ತಿಪರ ತರಬೇತಿ ಇಲ್ಲಿ ದಕ್ಕಿದ್ದರಿಂದ ಅವರ ಕ್ರಿಕೆಟ್ ಪಯಣ ದೃಢವಾದ ಆಧಾರ ಪಡೆಯಿತು. ಈ ಅವಕಾಶವೇ ಅವರನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಬಾಲ್ಯದಲ್ಲಿ ತೆಂಬಾ ಅವರಿಗೆ ಗುಣಮಟ್ಟದ ಕ್ರಿಕೆಟ್‌ ಕಿಟ್‌ಗಳೂ ಸಿಗಲಿಲ್ಲ, ಪ್ರಾಮಾಣಿಕ ತರಬೇತಿಯೂ ಲಭ್ಯವಾಗಲಿಲ್ಲ. ಸೇಂಟ್ ಜೋಸೆಫ್ ಶಾಲೆಯಲ್ಲಿ ಒಳ್ಳೆಯ ಕ್ರಿಕೆಟ್ ಮೈದಾನ-ಸೌಲಭ್ಯಗಳಿದ್ದವು. ಆದರೆ ಕಪ್ಪು ಚರ್ಮದ ವಿದ್ಯಾರ್ಥಿಯಾಗಿದ್ದ ತೆಂಬಾ ಅವರನ್ನು ಎಲ್ಲರೂ ಸಂಪೂರ್ಣ ಸ್ವೀಕಾರ ಮಾಡಲಿಲ್ಲ. ಕೆಲವರು ಬಣ್ಣವನ್ನು ಗೇಲಿ ಮಾಡಿ, ಅವಮಾನಿಸುತ್ತಿದ್ದರು. ಆ ನೋವುಗಳು ಅವರಿಗೆ ತುಂಬ ಕಷ್ಟ ನೀಡಿದವು. ಆದರೂ ತೆಂಬಾ ಆ ಎಲ್ಲ ದುಃಖವನ್ನು ಹೃದಯದೊಳಗೆ ಹೂತುಹಾಕಿ, ಕೇವಲ ಕ್ರಿಕೆಟ್ ಮೇಲೆಯೇ ಗಮನ ನೀಡಿ, ತಮ್ಮ ಆಟವನ್ನು ಇನ್ನಷ್ಟು ಬಲಪಡಿಸಿಕೊಂಡರು. ಉತ್ತಮ ಮೂಲಸೌಕರ್ಯ, ಶಿಸ್ತುಬದ್ಧ ತರಬೇತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ದೊರಕಿದ ಪರಿಣಾಮ, ತೆಂಬಾ ತಮ್ಮ ಪ್ರತಿಭೆಯನ್ನು ಇನ್ನಷ್ಟು ಮೆರುಗುಗೊಳಿಸಿ, ವೃತ್ತಿಪರ ಕ್ರಿಕೆಟ್‌ ಕನಸಿನತ್ತ ಆತ್ಮವಿಶ್ವಾಸದಿಂದ ಸಾಗಲು ಪ್ರಾರಂಭಿಸಿದರು.

ನಿಂದನೆಗೆ ಪ್ರತಿಭೆಯಿಂದಲೇ ಉತ್ತರ

2008ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್ ತೆಂಬಾ ಬವುಮಾ ಅವರ ಕ್ರಿಕೆಟ್ ಜೀವನಕ್ಕೆ ಮೈಲಿಗಲ್ಲಾಯಿತು. ಕೇವಲ 17 ವರ್ಷದ ಬಾಲಕನಾಗಿದ್ದ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕನಾಗಿ ಆಯ್ಕೆಯಾದರು. ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಬವುಮಾ, ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು. ಆಟದಲ್ಲಿ  ಸ್ಥಿರತೆ, ತಾಳ್ಮೆ ಮತ್ತು ತಾಂತ್ರಿಕ ನೈಪುಣ್ಯದಿಂದ ಎಲ್ಲರ ಗಮನ ಸೆಳೆದರು. ಈ ಪಂದ್ಯಾವಳಿಯ ಮೂಲಕ ತೆಂಬಾ ಬವುಮಾ ಎಂಬ ಹೆಸರು ಕ್ರಿಕೆಟ್ ಲೋಕದಾದ್ಯಂತ ಪ್ರಖ್ಯಾತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ಮತ್ತು ತಜ್ಞರು ಅವರ ನಾಯಕತ್ವ ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡರು. ಇದೇ ಸಾಧನೆ ಬವುಮಾ ಅವರನ್ನು ಭವಿಷ್ಯದಲ್ಲಿ ಹಿರಿಯರ ತಂಡದ ನಾಯಕನನ್ನಾಗಿ ನೇಮಿಸುವ ಮೊದಲ ಹೆಜ್ಜೆಯಾಯಿತು.

Temba bavuma 10

ಮೊದಲ ಪಂದ್ಯದಲ್ಲೇ ಶತಕ

2014ರಲ್ಲಿ 24ರ ಹರೆಯದ ತೆಂಬಾ ಬವುಮಾ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಆಯ್ಕೆಯಾದಾಗ ದೇಶವೇ ಅವರತ್ತ ನಿರೀಕ್ಷೆಯಿಂದ ನೋಡಿತು. ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು 148 ರನ್ ಬಾರಿಸಿ ದಾಖಲೆ ನಿರ್ಮಿಸಿದರು. ಆದರೆ ಆ ಯಶಸ್ಸು ಹಾಗೆಯೇ ಮುಂದುವರಿಯಲಿಲ್ಲ. ಮುಂದಿನ ವರ್ಷಗಳಲ್ಲಿ ಫಾರ್ಮ್ ಕುಸಿಯುತ್ತಾ ಬಂದಂತೆ ತಂಡದಿಂದ ಹೊರಗುಳಿಯಬೇಕಾಯಿತು. ಇದೇ ವೇಳೆ ಅವರಿಗೆ ಕೋಟಾ ಆಟಗಾರನೆಂಬ ನಿಂದನೆ ಪುನಃ ಮರುಕಳಿಸುತ್ತಿತ್ತು. ಅವರ ಪ್ರತಿಭೆಗಿಂತ ಆ ಅವಮಾನ ದೊಡ್ಡದಾಗಿ ಕಾಣುವ ಮಟ್ಟಕ್ಕೆ ಶ್ವೇತ ವರ್ಣೀಯರು ಅವರಿಗೆ ಹಿನ್ನಡೆ ದೊರಕಿಸಲು ಸದಾ ಪ್ರಯತ್ನಿಸುತ್ತಿದ್ದರು. ಆದರೂ ಬವುಮ ಇದಕ್ಕೆಲ್ಲ ಅಂಜದೆ, ಶಾಂತಚಿತ್ತತೆಯಿಂದ ತಮ್ಮ ಗುರಿಯನ್ನು ಆಟದತ್ತ ಮುಂದುವರಿಸಿದರು. 2019ರಲ್ಲಿ ತಂಡಕ್ಕೆ ಮರಳಿ ಬಂದ ತೆಂಬಾ, ತಮ್ಮ ಬ್ಯಾಟಿಂಗ್‌ನಿಂದ ಎಲ್ಲ ಟೀಕೆಗಳಿಗೆ ಉತ್ತರ ನೀಡಿದರು. ಮುಂದೆ ನಾಯಕತ್ವವನ್ನು ವಹಿಸಿಕೊಂಡರು.

2019ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಕಳಪೆ ಪ್ರದರ್ಶನದ ನಂತರ ದೇಶದಲ್ಲಿ ಕಪ್ಪು ಆಟಗಾರರ ನಾಯಕತ್ವದ ಬಗ್ಗೆ ತೀವ್ರ ಚರ್ಚೆ-ಶುರುವಾಯಿತು. ಈ ಸಂದರ್ಭದಲ್ಲಿ ತೆಂಬಾ ಬವುಮಾ ಇವೆನ್ನೆಲ್ಲವನ್ನು ದಿಟ್ಟವಾಗಿ ಎದುರಿಸಿದರು.“ನಾನು ಕಪ್ಪು ಆಟಗಾರನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ನಾನು ಕ್ರಿಕೆಟ್ ಆಡುವುದು ಕೇವಲ ಕ್ರಿಕೆಟ್‌ಗಾಗಿ ಹಾಗೂ ದಕ್ಷಿಣ ಆಫ್ರಿಕಾ ದೇಶಕ್ಕಾಗಿ ಮಾತ್ರ. ಬಣ್ಣ ಅಥವಾ ಜಾತಿಗಾಗಿ ನಾನು ಆಡುವುದಿಲ್ಲ” ಎಂದು ದೃಢವಾಗಿ ಉತ್ತರ ನೀಡಿದ್ದರು.

2021ರ ಜನವರಿಯಲ್ಲಿ ತೆಂಬಾ ಬವುಮಾ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಬಣ್ಣದ ಟೆಸ್ಟ್ ನಾಯಕರಾಗಿ ಆಯ್ಕೆಯಾದ ಕ್ಷಣ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿತ್ತು. ನಾಯಕನಾಗಿದ್ದ ಡೀನ್ ಎಲ್ಗರ್ ಗಾಯದ ಕಾರಣ ಹೊರಬಿದ್ದ ನಂತರ ತಾತ್ಕಾಲಿಕವಾಗಿ ನಾಯಕತ್ವ ವಹಿಸಿಕೊಂಡ ಬವುಮಾ, ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ತಂಡವನ್ನು ಗೆಲ್ಲಿಸಿ ತಮ್ಮ ನಾಯಕತ್ವ ಸಾಮರ್ಥ್ಯವನ್ನು ದೃಢಪಡಿಸಿದರು. ಈ ಸಾಧನೆ, ತಂಡದೊಳಗಿನ ಬದಲಾವಣೆ ಮತ್ತು ಪ್ರತಿನಿಧಿತ್ವದ ಚರ್ಚೆಗಳಿಗೆ ಹೊಸ ವಿಶ್ವಾಸ ತುಂಬಿದಂತಾಯಿತು. ಆ ನಂತರವೂ ನಾಯಕತ್ವದಲ್ಲಿ ಏರಿಳಿತಗಳು ಉಂಟಾದವು. 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಏಕದಿನ ತಂಡ ಸೆಮಿಫೈನಲ್ ತಲುಪಿದರೂ ಟೆಸ್ಟ್ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿಲ್ಲ. ಆದರೂ ತೆಂಬಾ ಅವರ ಶಾಂತ ಸ್ವಭಾವ, ಆಟಗಾರರೊಂದಿಗಿನ ಸ್ನೇಹದ ಗುಣ, ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯ ಅವರನ್ನು ಒಬ್ಬ ಉತ್ತಮ ನಾಯಕನನ್ನಾಗಿ ಮಾಡಿದೆ. ಅಲ್ಲದೆ ದಕ್ಷಿಣ ಆಫ್ರಿಕಾದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.

Temba bavuma 3

ಮೊದಲ ಬಾರಿಗೆ ಟೆಸ್ಟ್‌ ಚಾಂಪಿಯನ್‌ಷಿಪ್

ವಿಶ್ವಕಪ್‌ಗಳಂತಹ ದೊಡ್ಡ ಟೂರ್ನಿಗಳಲ್ಲಿ ಫೈನಲ್‌ಗೆ ಬಂದು ‘ಚೋಕರ್ಸ್’ ಎಂಬ ಹಣೆಪಟ್ಟಿಯೊಂದಿಗೆ ಹಿಂಜರಿಯುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, ಮೊದಲ ಬಾರಿಗೆ ತೆಂಬಾ ಬವುಮಾ ಸಾರಥ್ಯದಲ್ಲಿ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿತು. ಲಾರ್ಡ್‌ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ, ಮೊದಲ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪ್ರಸ್ತುತ ಭಾರತ ಪ್ರವಾಸದ ಮೊದಲ ಟೆಸ್ಟ್‌ನಲ್ಲೂ ದಕ್ಷಿಣ ಆಫ್ರಿಕಾ ತನ್ನ ಹೊಸ ಆತ್ಮವಿಶ್ವಾಸವನ್ನು ಮುಂದುವರಿಸಿದೆ. ನವೆಂಬರ್ 14ರಂದು ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 30 ರನ್‌ಗಳ ಅಂತರಲ್ಲಿ ಗೆಲುವು ಸಾಧಿಸಿದ್ದು, ಭಾರತದ ನೆಲದಲ್ಲಿ ಬವುಮಾ ನಾಯಕತ್ವಕ್ಕೆ ಒಳ್ಳೆಯ ಆರಂಭ ನೀಡಿದೆ. ಈ ಗೆಲುವು ಕೇವಲ ಒಂದು ಜಯವಲ್ಲ. ತಂಡದೊಳಗೆ ಹುಟ್ಟಿರುವ ಹೊಸ ಭರವಸೆ, ಒಗ್ಗಟ್ಟು ಮತ್ತು ಕಷ್ಟದ ಸಂದರ್ಭದಲ್ಲಿ ಹೋರಾಡುವ ಮನಸ್ಸನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಇವೆಲ್ಲವನ್ನು ಮುನ್ನಡೆಸಿರುವುದು ತೆಂಬಾ ಬವುಮಾ.

ತೆಂಬಾ ಕ್ರಿಕೆಟ್ ಸಾಧನೆ

ತೆಂಬಾ ಬವುಮಾ ಅವರ ಕ್ರಿಕೆಟ್‌ ಪ್ರಯಾಣ ಅಂಕಿ–ಅಂಶಗಳನ್ನಷ್ಟೇ ಹೇಳುವ ಕಥೆಯಲ್ಲ; ಅದು ಧೈರ್ಯ, ಪರಿಶ್ರಮ ಮತ್ತು ಬದಲಾವಣೆಯ ಸಂಕೇತ. ಇಲ್ಲಿಯ ತನಕ ಅವರು ಮೂರು ಮಾದರಿಗಳಲ್ಲೂ 35.7 ಸರಾಸರಿಯಲ್ಲಿ ಒಟ್ಟಾರೆ ಸುಮಾರು 8,500 ರನ್‌ಗಳನ್ನು ಬಾರಿಸಿದ್ದಾರೆ. ಟೆಸ್ಟ್ ನಲ್ಲಿ  65 ಪಂದ್ಯಗಳಿಂದ ಸುಮಾರು 3,766 ರನ್‌ಗಳು(38.5 ಸರಾಸರಿ). ಇದರಲ್ಲಿ 4 ಶತಕ ಮತ್ತು 26 ಅರ್ಧ ಶತಕಗಳು ಸೇರಿವೆ.

ಏಕದಿನದಲ್ಲಿ 53 ಪಂದ್ಯಗಳಿಂದ ಸುಮಾರು 1941 ರನ್‌ಗಳು(35.8 ಸರಾಸರಿ),  ಇದರಲ್ಲಿ 5 ಶತಕಗಳು ಮತ್ತು 8 ಅರ್ಧ ಶತಕಗಳು ಒಳಗೊಂಡಿವೆ. 36  ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಒಂದ ಅರ್ಧ ಶತಕದೊಂದಿಗೆ 670 ರನ್‌ ಪೇರಿಸಿದ್ದಾರೆ. ಒಟ್ಟಿನಲ್ಲಿ, ಬವುಮಾ ಅವರ ಸಾಧನೆ ಕೇವಲ ರನ್‌ಗಳಲ್ಲಿ ಮಾತ್ರವಲ್ಲ; ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ಬಣ್ಣದ ಆಟಗಾರರಿಗೆ ಆತ್ಮವಿಶ್ವಾಸ ತುಂಬಿದ ಆದರ್ಶ ವ್ಯಕ್ತಿಯನ್ನಾಗಿ ತೊಡಗಿಕೊಂಡಿರುವುದೇ ಅವರ ದೊಡ್ಡ ಯಶಸ್ಸು.

ತೆಂಬಾ ಬವುಮಾ ಅವರ ಜೀವನ ನಮಗೆ ಕಲಿಸುವ ಪಾಠ ಏನಂದರೆ, ಎಷ್ಟೆ ಅಡೆತಡೆ ಬಂದರೂ ಧೈರ್ಯ, ಶ್ರಮ ಮತ್ತು ನಂಬಿಕೆ ಇದ್ದರೆ ಯಾವುದೇ ಗುರಿ ದೂರವಲ್ಲ. ಕಪ್ಪು ಬಣ್ಣದ ಆಟಗಾರರಿಗೆ ದಾರಿದೀಪವಾಗಿರುವ ಅವರ ಸಾಧನೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...