ಹರಾರೆಯಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸುವ ಮೂಲಕ ಐತಿಹಾಸಿಕ ಇನಿಂಗ್ಸ್ ಕಟ್ಟಿದರು.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಸೋತರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತ, ವೈಭವ್ ಅವರ ಸ್ಫೋಟಕ ಆಟದ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ವೈಭವ್, ವಿಡಿಯೋ ಗೇಮ್ ಮಾದರಿಯಲ್ಲಿ ಬ್ಯಾಟ್ ಬೀಸಿದರು. ಅವರ ಇನಿಂಗ್ಸ್‌ನಲ್ಲಿ ಬರೋಬ್ಬರಿ 15 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್‌ಗಳು ದಾಖಲಾದವು.
ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ವೈಭವ್, ಫೈನಲ್ ಪಂದ್ಯದ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್‌ನ ಬೌಲರ್‌ಗಳಾದ ಸೆಬಾಸ್ಟಿಯನ್ ಮೋರ್ಗಾನ್, ಅಲೆಕ್ಸ್ ಗ್ರೀನ್ ಮತ್ತು ಮ್ಯಾನಿ ಲುಮ್ಸ್‌ಡೆನ್ ಅವರ ದಾಳಿಯನ್ನು ಪುಡಿಗಟ್ಟಿದ ಅವರು, ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.
ವೈಯಕ್ತಿಕ 175 ರನ್ ಗಳಿಸಿ ಆಡುತ್ತಿದ್ದಾಗ ಮ್ಯಾನಿ ಲುಮ್ಸ್‌ಡೆನ್ ಬೌಲಿಂಗ್‌ನಲ್ಲಿ ಲ್ಯಾಪ್ ಶಾಟ್ ಆಡಲು ಹೋಗಿ ವಿಕೆಟ್ ಕೀಪರ್ ಥಾಮಸ್ ರೇವ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ದ್ವಿಶತಕದ ಸನಿಹದಲ್ಲಿ ಎಡವಿದರೂ, ಅವರ ಇನ್ನಿಂಗ್ಸ್‌ಗೆ ಇಡೀ ಮೈದಾನವೇ ಎದ್ದು ನಿಂತು ಗೌರವ ಸೂಚಿಸಿತು . ಇಂಗ್ಲೆಂಡ್ ಆಟಗಾರರೂ ಕೂಡ ಹಸ್ತಲಾಘವ ನೀಡಿ ಅವರ ಆಟವನ್ನು ಶ್ಲಾಘಿಸಿದರು.
ವೈಭವ್ ಅವರಿಗೆ ಉತ್ತಮ ಸಾಥ್ ನೀಡಿದ ನಾಯಕ ಆಯುಷ್ ಮಹತ್ರೆ, 51 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಈ ಜೋಡಿಯು ಇಂಗ್ಲೆಂಡ್ ಬೌಲಿಂಗ್ ಪಡೆಯ ಆತ್ಮವಿಶ್ವಾಸವನ್ನು ಕುಗ್ಗಿಸುವಲ್ಲಿ ಯಶಸ್ವಿಯಾಯಿತು. ವೈಭವ್ ಔಟಾಗುವ ಹೊತ್ತಿಗೆ ಭಾರತ ತಂಡ 26 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 253 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಇದನ್ನು ಓದಿದ್ದೀರಾ? ವಿಶಾಖಪಟ್ಟಣದಲ್ಲಿ ಶಿವಂ ದುಬೆ ಅಬ್ಬರದ ಆಟ: ಭಾರತ ಸೋತರೂ ಒಲಿದ ಐತಿಹಾಸಿಕ ದಾಖಲೆ
ದಾಖಲೆಗಳ ‘ವೈಭವ್’
ವೈಭವ್ ಸೂರ್ಯವಂಶಿ ಅವರು ಇಂದಿನ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು
ಅತ್ಯಧಿಕ ಸಿಕ್ಸರ್: 19 ವರ್ಷದೊಳಗಿನವರ ಏಕದಿನ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ (15) ಸಿಡಿಸಿದ ದಾಖಲೆ. (ಈ ಹಿಂದೆ ಅವರೇ ಡಿಸೆಂಬರ್‌ನಲ್ಲಿ ಯುಎಇ ವಿರುದ್ಧ 14 ಸಿಕ್ಸರ್ ಬಾರಿಸಿದ್ದರು).
ವೇಗದ 150 ರನ್: ಕೇವಲ 71 ಎಸೆತಗಳಲ್ಲಿ 150 ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಈ ಸಾಧನೆಗೈದ ಬ್ಯಾಟರ್ ಎನಿಸಿಕೊಂಡರು. (ಈ ಹಿಂದೆ ಬೆನ್ ಮೇಯರ್ಸ್ 98 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು).
ಫೈನಲ್‌ನಲ್ಲಿ ಶತಕ: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ ಭಾರತದ ಆಯ್ದ ಆಟಗಾರರ ಪಟ್ಟಿಗೆ (ಉನ್ಮುಕ್ತ್ ಚಂದ್, ಮನ್ಜೋತ್ ಕಾಲ್ರಾ ನಂತರ) ಸೇರ್ಪಡೆ.
ಟೂರ್ನಿಯಲ್ಲಿ 20 ಕ್ಕೂ ಸಿಕ್ಸರ್: ಪ್ರಸ್ತುತ ವಿಶ್ವಕಪ್ ಆವೃತ್ತಿಯಲ್ಲಿ 20ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ.
ಅಂತಾರಾಷ್ಟ್ರೀಯ ಅಂಡರ್ 19ನಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತೀ ಹೆಚ್ಚು ಸಿಕ್ಸರ್





