ಆ್ಯಶಸ್​ ಟೆಸ್ಟ್ |‌ ಇಂಗ್ಲೆಂಡ್‌ ನೆಲದಲ್ಲಿ ಉಸ್ಮಾನ್‌ ಖ್ವಾಜಾ ಚೊಚ್ಚಲ ಶತಕ

Date:

ಪ್ರತಿಷ್ಠಿತ ಆ್ಯಶಸ್​  ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಎಡಗೈ ಬ್ಯಾಟರ್‌ ಉಸ್ಮಾನ್‌ ಖ್ವಾಜಾ ಚೊಚ್ಚಲ ಶತಕ ದಾಖಲಿಸಿದ್ದಾರೆ.

ನಾಲ್ಕು ರನ್‌ಗಳಿಂದ ಶನಿವಾರ ಬ್ಯಾಟಿಂಗ್‌ ಆರಂಭಿಸಿದ್ದ ಖ್ವಾಜಾ, 199 ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ, ವೃತ್ತಿ ಜೀವನದ 15ನೇ ಟೆಸ್ಟ್‌ ಶತಕವನ್ನು ಪೂರ್ತಿಗೊಳಿಸಿದರು. ಆಂಗ್ಲನ್ನರ ನೆಲದಲ್ಲಿ ಉಸ್ಮಾನ್‌ ಪಾಲಿಗಿದು ಚೊಚ್ಚಲ ಶತಕವಾಗಿದೆ. ಈ ಸಾಧನೆ ಬಳಿಕ ಖ್ವಾಜಾ, ಬ್ಯಾಟನ್ನು ʻಮೇಲಕ್ಕೆ ಎಸೆದುʼ ಸಂಭ್ರಮಿಸಿದರು.

ಆಸಿಸ್‌ ದಿಟ್ಟ ಹೋರಾಟ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೇ ಪ್ರವಾಸಿ ಆಸಿಸ್‌ ದಿಟ್ಟ ಪ್ರತಿ ಹೋರಾಟ ನಡೆಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗಳಿಸಿದ್ದ 393 ರನ್‌ಗಳಿಗೆ ಪ್ರತ್ಯುತ್ತವರಾಗಿ ಆಸ್ಟ್ರೇಲಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ನಷ್ಟದಲ್ಲಿ 311 ರನ್​ ಗಳಿಸಿದ್ದು, ಇನ್ನೂ 82 ರನ್​ಗಳ ಹಿನ್ನಡೆಯಲ್ಲಿದೆ.

126 ರನ್‌ಗಳಿಸಿರುವ ಉಸ್ಮಾನ್‌ ಖ್ವಾಜಾ ಮತ್ತು ಅರ್ಧ ಶತಕ ದಾಖಲಿಸಿರುವ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಭಾನುವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

15ನೇ ಬಾರಿ ವಾರ್ನರ್‌ ವಿಕೆಟ್‌ ಪಡೆದ ಬ್ರಾಡ್‌

ಇಂಗ್ಲೆಂಡ್‌ನ ಹಿರಿಯ ವೇಗಿ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸುವ ʻಪರಂಪರೆʼಯನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌, ಆ್ಯಶಸ್ ಸರಣಿಯಲ್ಲೂ ಮುಂದುವರಿಸಿದ್ದಾರೆ.

9 ರನ್‌ಗಳಿಸಿದ್ದ ವೇಳೆ, ಬ್ರಾಡ್‌ ಬೌಲಿಂಗ್‌ನಲ್ಲಿ ವೈಡ್‌ ಲೈನ್‌ನಲ್ಲಿ ಸಾಗುತ್ತಿದ್ದ  ಚೆಂಡನ್ನು ಕೆಣಕಲು ಯತ್ನಿಸಿದ ವಾರ್ನರ್‌, ಇನ್‌ಸೈಡ್‌ ಎಡ್ಜದ್‌ ಆಗುವ ಮೂಲಕ ವಿಕೆಟ್‌ ಒಪ್ಪಿಸಿ ನಿರಾಸೆಯಿಂದಲೇ ಪೆವಿಲಿಯನ್‌ಗೆ ಮರಳಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ರಾಡ್‌, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ವಿಕೆಟ್‌ ಪಡೆಯುತ್ತಿರುವುದು ಇದು 15ನೇ ಬಾರಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...