ವಿಮೆನ್ ಪ್ರೀಮಿಯರ್‌ ಲೀಗ್‌ | 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

Date:

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಆಕರ್ಷಕ ಅರ್ಧಶತಕದ ಫಲವಾಗಿ ಮುಂಬೈ ಇಂಡಿಯನ್ಸ್‌ ತಂಡ ಮುಂಬೈನ ಬ್ರಬೊರ್ನ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿತು. ಡೆಲ್ಲಿ 8 ರನ್‌ಗಳಿಂದ ಸೋಲು ಅನುಭವಿಸಿ ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತು.

44 ಎಸೆತಗಳಲ್ಲಿ 66 ರನ್‌ ಪೇರಿಸಿದ ಹರ್ಮನ್‌ಪ್ರೀತ್‌ ಕೌರ್‌ ಫೈನಲ್‌ ಪಂದ್ಯಕ್ಕಾಗಿಯೇ ತಮ್ಮ ಆಟವನ್ನು ಮೀಸಲಿಟ್ಟರು. ಮುಂಬೈ ಪಂದ್ಯ ಗೆಲ್ಲುವಲ್ಲಿ ಅವರ ಕೊಡುಗೆ ನಿರ್ಣಾಯಕವಾಯಿತು. ತಂಡದ ಉಳಿದ ಬ್ಯಾಟರ್‌ಗಳು ವಿಫಲರಾದಾಗ 149 ರನ್ ಗುರಿ ನೀಡುವಲ್ಲಿ ಹರ್ಮನ್ ಬ್ಯಾಟಿಂಗ್ ನೆರವಿಗೆ ಬಂತು.

149 ರನ್ ಸಾಧಾರಣ ಗುರಿ ಎಂಬತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿಯರು ಅನಪೇಕ್ಷಿತ ಒತ್ತಡ ಹೇರಿಕೊಂಡರು. ಹಾಗಾಗಿ, 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸೋಲೊಪ್ಪಿಕೊಂಡತು. ತಂಡದ ಪರ ಮಾರಿಜಾನ್ ಕಾಪ್ ಮತ್ತು ಯುವ ಆಟಗಾರ್ತಿ ಕನ್ನಡತಿ ನಿಕಿ ಪ್ರಸಾದ್ ಅವರ ಸಾಹಸ ಫಲ ನೀಡಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೂ ಮುನ್ನ ಮುಂಬೈ ಪರಿಣಾಮಕಾರಿ ಆಟಗಾರ್ತಿ ನಾಟ್‌ ಸಿವರ್‌ ಬ್ರಂಟ್‌ ಅವರನ್ನು ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್‌ ಆಫ್ ಕಟ್ಟರ್ ಮೂಲಕ ಔಟ್ ಮಾಡಿದರು. ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ಶಬ್ನಿಮ್ ಇಸ್ಮಾಯಿಲ್ ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಡೆಲ್ಲಿ ಆರಂಭಿಕ ಯಶಸ್ಸು ಪಡೆಯಿತು. ಆದರೆ ತಂಡದ ಖುಷಿ ಹೆಚ್ಚು ಕಾಲ ನಿಲ್ಲಲಿಲ್ಲ.

ಈ ಸುದ್ದಿ ಓದಿದ್ದೀರಾ? ಜನಪ್ರಿಯವಾಗುತ್ತಿರುವ ವಿಮೆನ್ ಪ್ರೀಮಿಯರ್‌ ಲೀಗ್‌: ದೇಶದ ಉದ್ದಕ್ಕೂ ಮಹಿಳಾ ಕ್ರಿಕೆಟ್ ಪಸರಿಸಲಿ!

ಸಾಕಷ್ಟು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿರುವ ಅನುಭವವನ್ನೆಲ್ಲ ಮುಂಬೈ ನಾಯಲಿ ಹರ್ಮನ್‌ಪ್ರೀತ್ ಈ ಪಂದ್ಯದಲ್ಲಿ ಧಾರೆ ಎರೆದರು. ಪ್ರಶಸ್ತಿ ಗೆಲ್ಲಲೇಬೇಕೆಂದು ಪಣ ತೊಟ್ಟಂತಿದ್ದ ಅವರು ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲದೇ, ತಮ್ಮ ತಂಡದಲ್ಲಿದ್ದ ಬೌಲಿಂಗ್ ಅಸ್ತ್ರಗಳನ್ನು ಅತ್ಯಂತ ಪರಿಣಾಮಕಾರಿ ಬಳಸಿ ಎದುರಾಳಿ ತಂಡ ಗುರಿ ತಲುಪದಂತೆ ನೋಡಿಕೊಂಡರು.

6 ಕೋಟಿ ರೂಪಾಯಿ ಬಹುಮಾನ

ಮಹಿಳಾ ಪ್ರೀಮಿಯರ್ ಲೀಗ್‌ ಚಾಂಪಿಯನ್ ಮುಂಬೈ ತಂಡದ ಆಟಗಾರರು ಪದಕಗಳೊಂದಿಗೆ 6 ಕೋಟಿ ರೂ ಬಹುಮಾನದ ಚೆಕ್ ಪಡೆದರು. ನಾಯಕಿ ಹರ್ಮನ್‌ ಆಕರ್ಷಕ ಟ್ರೋಫಿ ಸ್ವೀಕರಿಸಿದರು. ಇದರ ಜೊತೆಗೆ, ಲಿಮಿಟೆಡ್‌ ಎಡಿಷನ್ ಕೈಗಡಿಯಾರವನ್ನು ತಂಡದ ಎಲ್ಲ ಸದಸ್ಯರಿಗೂ ನೀಡಲಾಯಿತು.

ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರು ಮೆಡಲ್‌ಗಳೊಂದಿಗೆ 3 ಕೋಟಿ ರೂಪಾಯಿ ಬಹುಮಾನದ ಚೆಕ್ ಮತ್ತು ಶೀಲ್ಡ್ ಸ್ವೀಕರಿಸಿದರು. ಇದರೊಂದಿಗೆ ಆಟಗಾರ್ತಿಯರಿಗೆ ಲಿಮಿಟೆಡ್‌ ಎಡಿಷನ್ ಕೈ ಗಡಿಯಾರವನ್ನು ಉಡುಗೊರೆಯಾಗಿ ಪಡೆದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...