ಒಂದು ನೆನಪು | ಮರಗಳ ಮಹಾತಾಯಿ ತಿಮ್ಮಕ್ಕ ನಾಡಿಗೆಷ್ಟು ಮುಖ್ಯ?

Date:

ಮರಗಳನ್ನು ಮಕ್ಕಳಂತೆ ಪೊರೆದ ಮಹಾತಾಯಿ ತಿಮ್ಮಕ್ಕನ ಕುರಿತು ಸಾಕಷ್ಟು ಬರೆಹಗಳು ಬಂದಿರಬಹುದು, ಪಠ್ಯವಾಗಿರಲೂಬಹುದು. ಆದರೂ ಆಕೆಯ ನಿಸ್ವಾರ್ಥ ಸೇವೆಯ ಮುಂದೆ ಅದೇನೂ ಅಲ್ಲ. ಹಾಗಾಗಿ ಆಕೆಯ ಕುರಿತು ಆಕಾಶವೇ ತುಂಬುವಷ್ಟು ಬರಬೇಕಿದೆ.

2007ರಲ್ಲಿ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಅವರು ಆಸ್ಪತ್ರೆ ಬಿಲ್ ಭರಿಸುವುದು ಕಷ್ಟವಿತ್ತು. ಕೊನೆಗೆ ವಿಧಿ ಇಲ್ಲದೆ, ಮಾಧ್ಯಮಗಳ ಮುಂದೆ ಬಂದರು, ಸರ್ಕಾರ ಸ್ಪಂದಿಸಿತು. ಸಂಘ-ಸಂಸ್ಥೆಗಳ ನೆರವೂ ದೊರೆಯಿತು. ಅದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಕೊನೆಗೆ, ಅವರಿಗೂ ಸರ್ಕಾರದ, ಜನರ ನೆರವು ಸಿಕ್ಕಿ ಗುಣಮುಖರಾದರು.

ಇಬ್ಬರೂ ನಾಡಿಗಾಗಿ, ಸೇವೆ ಸಲ್ಲಿಸಿದವರೇ. ಒಬ್ಬರದು ಕಲಾಸೇವೆಯಾದರೆ, ಇನ್ನೊಬ್ಬರ ಸೇವೆ ಶಬ್ದಗಳಲ್ಲಿ ಹಿಡಿದಿಡಲಾಗದಷ್ಟು, ಲೆಕ್ಕಕ್ಕೆ ಸಿಗದಷ್ಟು, ಊಹೆಗೂ ನಿಲುಕಲಾರದಷ್ಟು. ಇಬ್ಬರೂ ಮುಖ್ಯ. ಆದರೆ ಅವರಿಬ್ಬರ ನಡುವೆ ನಮ್ಮ ಆದ್ಯತೆ ಯಾವುದಾಗಬೇಕು ಎನ್ನುವುದರ ಕುರಿತು, ಆ ಸಂದರ್ಭದಲ್ಲಿ ‘ಅಗ್ನಿ’ ವಾರಪತ್ರಿಕೆಗೆ ಬರೆದ ಪುಟ್ಟ ಟಿಪ್ಪಣಿ ಇದು. ಮರಗಳ ಮಹಾತಾಯಿ ತಿಮ್ಮಕ್ಕ ಇಲ್ಲವಾದ ಈ ಕ್ಷಣದಲ್ಲಿ ನೆನಪಾಗಿ ಇಲ್ಲಿ ಹಂಚಿಕೊಂಡಿದ್ದೇನೆ.  

ನಿಸ್ವಾರ್ಥ ಸಾಧಕಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಲುಮರದ ತಿಮ್ಮಕ್ಕ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿದ್ದು, ಮಾಧ್ಯಮಗಳಲ್ಲಿ ವರದಿ ಬಂದಾಗ ಸರ್ಕಾರ ಎಚ್ಚೆತ್ತುಕೊಂಡು ಆರೈಕೆ ಮಾಡಿದ್ದು ಈಗ ಹಳೆ ಕತೆ.

ಸಾಲುಮರದ ತಿಮ್ಮಕ್ಕ ತಿನ್ನಲಿಕ್ಕಿಲ್ಲದಿದ್ದರೂ, ತಲೆ ಮೇಲೊಂದು ಸೋಗೆಯ ಸೂರಿಲ್ಲದಿದ್ದರೂ ದಾರಿಹೋಕರು ತಣ್ಣಗಿರಲಿ ಎಂದು ಹುಲಿಕಲ್ ರಸ್ತೆಯುದ್ದಕ್ಕೂ ಗಿಡಗಳನ್ನು ನೆಟ್ಟಳು. ಗಂಡ-ಹೆಂಡತಿಯರಿಬ್ಬರೂ ವರ್ಷ ಒಂಬತ್ತು ಕಾಲ ನೀರೂದು, ಸಾಕಿ ಸಲಹಿ ಬೆಳೆಸಿದರು. ದೊಡ್ಡದಾಗಿ ಬೆಳೆದು ನಿಂತಾಗ ನೋಡಿ ಕಣ್ತುಂಬಿಕೊಂಡರು.

ಅದಷ್ಟೇ ಅವರಿಗೆ ಬೇಕಾಗಿದ್ದು. ಅದನ್ನವರು ವ್ರತ, ಕರ್ತವ್ಯ, ಜವಾಬ್ದಾರಿ ಎಂದುಕೊಳ್ಳದೆ ಉಂಡುಟ್ಟು ಬಾಳುವೆ ಮಾಡಿದಂತೆ ಮಾಡಿಕೊಂಡು ಬಂದರು.

ಈ ಕಾರಣಕ್ಕೆ ಈಕೆಯನ್ನು ನಾವು ವನದೇವತೆ, ಮಹಾತಾಯಿ ಅಂದರೆ, ಅದೂ ಕಮ್ಮಿಯೇ…

ಇಂತಹ ತಿಮ್ಮಕ್ಕ ಯಾವುದಕ್ಕೂ ಆಸೆಪಡಲಿಲ್ಲ. ಆಮಿಷಕ್ಕೂ ಬಲಿಯಾಗಲಿಲ್ಲ. ಯಾರ ಮರ್ಜಿಗೂ ಒಳಗಾಗಲಿಲ್ಲ. ಬಿರುದು ಬಾವುಲಿಗಳಿಗೂ ಮನಸೋಲಲಿಲ್ಲ. ಜನ ಕರೆದು ಕೊಟ್ಟ ಕಾಸನ್ನು ಕೂಡ ಮರಗಳಿಗೆ, ತನ್ನ ಕನಸಿನ ಆಸ್ಪತ್ರೆಗೆ ಹಾಕಿದಳು.

ಇಂತಹ ತಾಯಿಗೆ ಆರೋಗ್ಯ ಕೈಕೊಟ್ಟರೆ, ಆ ತಕ್ಷಣಕ್ಕೆ ನೋಡಿಕೊಳ್ಳುವವರಿಲ್ಲ. ನೋಡಿಕೊಳ್ಳುವವರಿದ್ದರೂ ಅವರಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ಬೇಕಾದ ತಿಳಿವಳಿಕೆಯಿಲ್ಲ. ವಾಹನ ಸೌಕರ್ಯವಿಲ್ಲ, ಹಣವಿಲ್ಲ.

ಇತ್ತೀಚೆಗೆ ಸಿನಿಮಾ ನಟ ಕೆ.ಎಸ್. ಅಶ್ವಥ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ಬದುಕು ನೂಕುವುದೇ ದುಸ್ತರವಾಯಿತು. ಕೊನೆಗೆ ವಿಧಿಯೇ ಇಲ್ಲ ಎಂದು ಮಾಧ್ಯಮಗಳ ಮುಂದೆ ಬಂದು ನಿಂತು ಗೋಳಾಡಿದರು. ಸರ್ಕಾರ ಸ್ಪಂದಿಸಿತು. ಹಲವು ಸಂಘ ಸಂಸ್ಥೆಗಳು ಮುಂದೆ ಬಂದವು. ಇಂಟರ್‌ನೆಟ್, ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ನ್ಯೂಸ್ ಫ್ಲ್ಯಾಶ್ ಆಗಿ ವಿದೇಶಗಳಿಂದಲೂ ಹಣ ಹರಿದು ಬಂತು.

ಇದು ಚಾಮಯ್ಯ ಮೇಷ್ಟ್ರು ಅಶ್ವಥ್‌ಗೆ ಸಿಗಬೇಕಾಗಿದ್ದ ಸೌಲಭ್ಯ ಮತ್ತು ಗೌರವ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅಶ್ವಥ್‌ರಿಗೆ ನಟನೆ ಆಯ್ಕೆಯಾಗಿತ್ತು. ನಟಿಸಿದ ಚಿತ್ರಗಳಿಗೆ ಹೆಚ್ಚಲ್ಲದಿದ್ದರೂ, ಆ ಕಾಲಕ್ಕೆ ಸಿಗಬೇಕಾದ ಸಂಭಾವನೆ ಸಿಕ್ಕಿತ್ತು. ವಯಸ್ಸಿದ್ದಾಗ ಮಾಡಿದರು, ವಯಸ್ಸಾದಾಗ ಕಲಾಸೇವೆ ಎಂದರು.

ಆದರೆ, ವನದೇವತೆ ತಿಮ್ಮಕ್ಕ… ಉತ್ತಮ ಜಾತಿಯಲ್ಲಿ ಹುಟ್ಟಿದವಳಲ್ಲ, ಲೋಕಜ್ಞಾನ ಗೊತ್ತಿಲ್ಲ, ಅಕ್ಷರದ ಅರಿವಿಲ್ಲ, ವಿದ್ಯೆಯಂತೂ ಇಲ್ಲವೇ ಇಲ್ಲ. ಗಿಡ ನೆಡುವುದು ಆಕೆಯ ಆಯ್ಕೆಯಾಗಿದ್ದರೂ, ಅದಕ್ಕಾಗಿ ಕೂಲಿ, ಸಂಬಳ, ಸಂಭಾವನೆ ಪಡೆದವಳಲ್ಲ. ಆ ಗಿಡ, ಮರಗಳಿಂದ ಯಾವ ಲಾಭವನ್ನೂ ಬಯಸಿದವಳಲ್ಲ.

ಅಶ್ವಥ್‌ರಿಗಿಂತಲೂ ತಿಮ್ಮಕ್ಕ ಗ್ರೇಟ್. ನಿಜವಾದ ಸಾಧಕಿ. ನಿಸ್ವಾರ್ಥಿ. ಅಶ್ವಥ್‌ರಿಗೆ ಸಿಕ್ಕಿದ್ದು ಒಳ್ಳೆಯದೆ. ಆದರೆ, ಅವರಿಗಿಂತಲೂ ಹೆಚ್ಚಿನ ಸವಲತ್ತು, ಸೌಲಭ್ಯ ಮತ್ತು ಗೌರವ ತಿಮ್ಮಕ್ಕನಿಗೆ ಸಿಗಬೇಕಾದ್ದು ಈ ನಾಡಿನ ಕರ್ತವ್ಯ.

ಈ ಪುಟ್ಟ ಟಿಪ್ಪಣಿಗೆ ಪ್ರತಿಕ್ರಿಯಿಸಿದ ಡಾ. ರಾಮಮೂರ್ತಿಯವರು, ಸಾಲುಮರದ ತಿಮ್ಮಕ್ಕ ನಿಜಕ್ಕೂ ಮಹಾತಾಯಿ. ಈಕೆಯನ್ನು ‘ನಿಸ್ವಾರ್ಥ ಸಾಧಕಿ’ ಎಂದು ಬಣ್ಣಿಸಿ ನೀವು ಬರೆದಿರುವ ಲೇಖನ ಅತ್ಯಂತ ಔಚಿತ್ಯಪೂರ್ಣ, ಸಂದರ್ಭೋಚಿತ ಮತ್ತು ಶ್ಲಾಘನೀಯ.

ಸಾಲುಮರದ ತಿಮ್ಮಕ್ಕನ ಕುರಿತು ಚಿಣ್ಣರಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. OXFORD UNIVERSITY PRESS ನವರು ಪ್ರಕಟಿಸಿರುವ BROADWAY, COURSE BOOK 4 ಎಂಬ ಸೆಂಟ್ರಲ್ ಸಿಲಬಸ್‌ನ ಮಕ್ಕಳು ಭಾರತದಾದ್ಯಂತ ಓದುವಂಥ A MOTHER’S LOVE ಎಂದು ಒಂದು ಪಾಠವಿದೆ.

ಬೆಂಗಳೂರಿನ ಪಠ್ಯಪುಸ್ತಕ ನಿರ್ದೇಶನಾಲಯವು ಪ್ರಕಟಿಸುವ, ತಮಿಳು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡ 10ನೇ ತರಗತಿ ಮಕ್ಕಳಿಗೆ ಒಂದು ಪಾಠ ಸಾಲುಮರದ ತಿಮ್ಮಕ್ಕನ ಕುರಿತಾಗಿ ಇದೆ. ಆದರೆ ಕನ್ನಡದಲ್ಲಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಓದುವ ಮಕ್ಕಳಿಗೆ ಅಜ್ಜಿಯ ಕುರಿತಾಗಿ ಕೇವಲ ‘ಭರವಸೆ’ ಎಂಬ ಒಂದು ಪದ್ಯಪಾಠವಿದೆ. ಹೀಗೇಕೆ!? ಸಂಬಂಧಿಸಿದ ಪಠ್ಯಪುಸ್ತಕ ನಿರ್ದೇಶನಾಲಯವು ಇದನ್ನು ಗಮನಿಸುವುದೆ?

ಅಲ್ಲದೆ ಬಂಧು-ಬಳಗ ಇಲ್ಲದ ಸಾಲುಮರದ ಸಂಗಾತಿ ತಿಮ್ಮಕ್ಕನ ಕುರಿತು ಹೆಚ್ಚೆಚ್ಚು ಲೇಖನಗಳು ಬರುವುದು; ಅಜ್ಜಿ ಇಳಿವಯಸ್ಸಿನಲ್ಲಿ ವಂಚನೆಗೊಳಗಾಗದಂತೆ ನೆಮ್ಮದಿಯಿಂದ ಬಾಳುವೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಅಜ್ಜಿಯ ಆಸ್ಪತ್ರೆಯ ಕನಸು ನನಸಾಗುವಂತೆ ಮಾಡುವುದು ಈ ನಾಡಿನ ಎಲ್ಲರ ಕರ್ತವ್ಯ ಎಂದಿದ್ದರು.

ಸಾಲುಮರದ ತಿಮ್ಮಕ್ಕನವರು ಈಗ ನಮ್ಮ ನಡುವೆ ಇಲ್ಲದಿರಬಹುದು. ಆದರೆ ಅವರು ನೆಟ್ಟು ನೀರೂದು ಬೆಳೆಸಿದ ಮರಗಳು ಸಾವಿರಾರು ಜನರಿಗೆ ನೆರಳು ನೀಡುತ್ತಿವೆ. ಆ ಮರಗಳ ನೆರಳಲ್ಲಿ ನಿಂತಾಗೆಲ್ಲ ತಿಮ್ಮಕ್ಕನ ನೆನಪು ತರುತ್ತವೆ. ವಾತಾವರಣವನ್ನು ತಿಳಿಗೊಳಿಸಿ ಪರಿಸರ ಪ್ರಜ್ಞೆಯನ್ನು ಸಾರುತ್ತವೆ.

ಇಂತಹ ಮರಗಳನ್ನು ಮಕ್ಕಳಂತೆ ಪೊರೆದ ಮಹಾತಾಯಿ ತಿಮ್ಮಕ್ಕನ ಕುರಿತು ಸಾಕಷ್ಟು ಬರೆಹಗಳು ಬಂದಿರಬಹುದು, ಪಠ್ಯವಾಗಿರಲೂಬಹುದು. ಆದರೂ ಆಕೆಯ ನಿಸ್ವಾರ್ಥ ಸೇವೆಯ ಮುಂದೆ ಅದೇನೂ ಅಲ್ಲ. ಹಾಗಾಗಿ ಆಕೆಯ ಕುರಿತು ಆಕಾಶವೇ ತುಂಬುವಷ್ಟು ಬರಬೇಕಿದೆ. ಏಕೆಂದರೆ, ದಿವಂಗತ ಡಾ. ಎಂ.ಬಿ. ರಾಮಮೂರ್ತಿಯವರು ಹೇಳಿದಂತೆ, ಅದು ಮುಂದಿನ ತಲೆಮಾರಿನ ಮಕ್ಕಳನ್ನು ತಲುಪಲಿದೆ. ತಲುಪಿದ್ದರಲ್ಲಿ ಒಂದೇ ಒಂದು ಪರ್ಸೆಂಟ್ ಕೂಡ ತಿಮ್ಮಕ್ಕನಂತಾದರೆ, ಆ ಮುಂದಿನ ತಲೆಮಾರು ಸ್ವಚ್ಛ ಗಾಳಿ ಉಸಿರಾಡಲಿದೆ.  

ತಿಮ್ಮಕ್ಕ ಜನಮಾನಸದಲ್ಲಿ ಉಳಿಯುವ, ಬೆಳೆಯುವ ಬಗೆ ಇದಲ್ಲವೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...