ಸೌಜನ್ಯ ಪ್ರಕರಣ | ಬೆಳ್ತಂಗಡಿಯಲ್ಲಿ 346 ಅಸಹಜ, ನಿಗೂಢ ಸಾವಾಗಿರುವ ಮಾಹಿತಿಯಿದೆ: ಚೇತನ್ ಅಹಿಂಸಾ

Date:

ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವು ಮರುತನಿಖೆಯಾಗಬೇಕು ಎಂದು ಆಗ್ರಹಿಸಿರುವ ನಟ ಚೇತನ್ ಅಹಿಂಸಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈವರೆಗೆ 346 ಅಸಹಜ, ನಿಗೂಢ ಸಾವಾಗಿರುವ ಬಗ್ಗೆ ನಮಗೆ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಯೂಟ್ಯೂಬರ್ ಸಮೀರ್ ಧೂತ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವರವಾದ ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಅಪ್‌ಲೋಡ್ ಮಾಡಿದ್ದಾರೆ. ಇದಾದ ಬಳಿಕ ಇನ್ನೂ ಬಗೆಹರಿಯದೆ ಉಳಿದಿರುವ ಸೌಜನ್ಯ ಪ್ರಕರಣವು ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿಗರು ಈ ವಿಚಾರದಲ್ಲಿ ಕೋಮು ದ್ವೇಷ ಹುಟ್ಟಿಸುವ ಯತ್ನ ಮಾಡಿದರೂ ಕೂಡಾ ಹಲವು ಮಂದಿ ಸಮೀರ್‌ ಪರವಾಗಿ ನಿಂತು ಸೌಜನ್ಯಳಿಗೆ ನ್ಯಾಯ ದೊರಕಿಸಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಡುವೆ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ಆಗ್ರಹಿಸಿದ್ದಾರೆ. ಸೌಜನ್ಯಳಿಗೆ ನ್ಯಾಯ ಒದಗಿಸಬೇಕು, ಈ ಪ್ರಕರಣದೊಂದಿಗೆ ನಂಟು ಹೊಂದಿರುವ ಎಲ್ಲಾ ಪ್ರಕರಣಗಳ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

“11 ದಿನಗಳ ಹಿಂದೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ತನಿಖಾ ಪತ್ರಿಕೋದ್ಯಮದ ವಿಡಿಯೋ ಬಂದಿದೆ. ಇದಾದ ಬಳಿಕ ಕರ್ನಾಟಕದಾದ್ಯಂತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು, ಹೋರಾಟಗಳು, ನ್ಯಾಯದ ಪರವಾಗಿ ಕೂಗು ಕೇಳಿಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ” ಎಂದು ಶ್ಲಾಘಿಸಿದ್ದಾರೆ.

“ಸೌಜನ್ಯ ಅವರ ತಾಯಿಯ ಜೊತೆ ಮಾತನಾಡುವ ಅವಕಾಶ ನನಗೆ ಲಭಿಸಿತು. ಅವರು ಚೇತನ್ ನನಗೆ ನ್ಯಾಯ ಒದಗಿಸಿಕೊಡಪ್ಪ ಎಂದು ಕೇಳಿದರು. ನಾನು ಖಂಡಿತ ಅಮ್ಮ, ನಾನು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದೇನೆ. ಇಂದು ನಾವು ಅನೇಕರ ಹೋರಾಟದ ಜೊತೆ ನಮ್ಮ ಹೋರಾಟವನ್ನು ಸೇರಿಸಿ ಈ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ನ್ಯಾಯಾಂಗ ಅಥವಾ ಎಸ್‌ಐಟಿ – ಯಾವುದಾದರೂ ತನಿಖೆಯಾಗಬೇಕು. ನಮಗೆ ನ್ಯಾಯಬೇಕು” ಎಂದು ನಟ ಆಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ: ಸಮಾನ ಮನಸ್ಕರ ಸಮಾಲೋಚನಾ ಸಭೆಗೆ ಪೊಲೀಸರಿಂದ ಅಡ್ಡಗಾಲು!

“ಈ ತನಿಖಾ ಪತ್ರಿಕೋದ್ಯಮದ ವಿಡಿಯೋ ಹೇಳುವ ಪ್ರಕಾರ ಸೌಜನ್ಯ ಪ್ರಕರಣದ ಜೊತೆ ಅನೇಕ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಬೆಳ್ತಂಗಡಿಯಲ್ಲಿ 346 ಅಸಹಜ, ನಿಗೂಢ ಸಾವುಗಳು ಸಂಭವಿಸಿದೆ. ಈ ಎಲ್ಲಾ ಪ್ರಕರಣದಲ್ಲಿಯೂ ನ್ಯಾಯ ಬೇಕು, ಇವೆಲ್ಲವುದಕ್ಕೂ ಸಂಬಂಧಪಟ್ಟಂತೆ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.

“ಯಾರ ಮೇಲೆ ಆರೋಪ ಬಂದಿದೆಯೋ, ಯಾರು ತಪ್ಪಿತಸ್ಥರು ಆಗಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೋ ಅವರು ದೊಡ್ಡ ಮಟ್ಟದ ಪ್ರಭಾವ ಹೊಂದಿರುವವರು. ಅವರಲ್ಲಿ ಹಣ, ತೋಲು, ರಾಜಕೀಯ, ಧರ್ಮ, ಜಾತಿ ಬಲವನ್ನು ಹೊಂದಿದ್ದಾರೆ. ಅದರ ವಿರುದ್ಧ ಹೋರಾಡುವುದೆಂದರೆ ಬಹಳ ಕಷ್ಟ. ಆದರೆ ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿಯಿಂದ ಈ ಹೋರಾಟ ಸಾಧ್ಯವಿದೆ. ಬದಲಾವಣೆ ಬಂದಿರುವುದು ಮೇಲಿಂದ ಅಲ್ಲ, ತಳಮಟ್ಟದ ಹೋರಾಟದಿಂದ ಎಂಬುದು ನೆನಪಿಟ್ಟುಕೊಳ್ಳಿ. ಆ ಹೋರಾಟವನ್ನು ಮುಂದುವರೆಸೋಣ” ಎಂದು ಚೇತನ್ ಅಹಿಂಸಾ ಕರೆ ನೀಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...