ಬೆಂಗಳೂರು | ಆರ್ಡರ್ ಮಾಡಿದ ಗ್ರಾಹಕರ ಮನೆಗೆ ಜೀವಂತ ಹಾವು ಕಳುಹಿಸಿದ ಅಮೆಜಾನ್

Date:

ಅಮೆಜಾನ್‌ನಲ್ಲಿ ‘ಎಕ್ಸ್‌ ಬಾಕ್ಸ್‌ ಕಂಟ್ರೋಲರ್’ ಆರ್ಡರ್‌ ಮಾಡಿದವರಿಗೆ ಅಮೆಜಾನ್ ಕಂಪನಿ ಉಚಿತವಾಗಿ ಜೀವಂತ ಹಾವು ಪಾರ್ಸೆಲ್ ಕಳಿಸಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.

ಹೌದು, ತಾವು ಆರ್ಡರ್ ಮಾಡಿದ ಪಾರ್ಸೆಲ್‌ನಲ್ಲಿ ಎಕ್ಸ್‌ ಬಾಕ್ಸ್‌ ಕಂಟ್ರೋಲರ್ ಜತೆಗೆ ಜೀವಂತ ಹಾವು ಇರುವುದನ್ನು ತನ್ವಿ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ತನ್ವಿ ಅವರು ಅಮೆಜಾನ್‌ನಲ್ಲಿ ಎಕ್ಸ್ಬಾಕ್ಸ್ಕಂಟ್ರೋಲರ್ ಬುಕ್ ಮಾಡಿದ್ದಾರೆ. ಪಾರ್ಸಲ್ ಮನೆಗೆ ಬಂದ ಬಳಿಕ ಅದನ್ನು ತೆರೆಯಲು ಮುಂದಾಗಿದ್ದಾರೆ. ಈ ವೇಳೆ, ಬಾಕ್ಸ್‌ನಿಂದ ಶಬ್ದ ಬರುತ್ತಿತ್ತು. ಮುಂದಾಗಿ ಬಾಕ್ಸ್‌ ತೆರೆದು ನೋಡಿದಾಗ ಎಕ್ಸ್ಬಾಕ್ಸ್ಕಂಟ್ರೋಲರ್ ಜತೆಗೆ ಅದರೊಳಗೆ ಜೀವಂತ ಹಾವು ಇರುವುದು ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ಯಾಕೇಜಿಂಗ್ ಟೇಪ್ನಲ್ಲಿ ಸಿಲುಕಿಕೊಂಡಿದ್ದ ಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ, ಟೇಪ್‌ಗೆ ಸಿಲುಕಿಕೊಂಡಿರುವ ಹಾವನ್ನು ಬಕೆಟ್‌ನಲ್ಲಿ ಇಟ್ಟು ವಿಡಿಯೋ ಮಾಡಿದ್ದಾರೆ.

ಇದನ್ನು ಕಂಡು ದಂಗಾದ ಅವರು ತಮ್ಮ ಅನುಭವವನ್ನು ಸೋಶಿಯಲ್ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಘಟನೆಯ ಬಳಿಕ ಅಮೇಜಾನ್ ಕಂಪೆನಿ ಗ್ರಾಹಕರಿಗೆ ಎಕ್ಸ್ಬಾಕ್ಸ್ಕಂಟ್ರೋಲರ್ಗೆ ನೀಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಭೀಕರ ಹಲ್ಲೆಯ ಪರಿಣಾಮ, ರೇಣುಕಾಸ್ವಾಮಿ ಸಾವು ; ಮರಣೋತ್ತರ ಪರೀಕ್ಷಾ ವರದಿ

ವಿಡಿಯೊವನ್ನು ಎಕ್ಸ್‌/ಟ್ವಿಟರ್ನಲ್ಲಿ ಹಂಚಿಕೊಂಡಿರುವ ತನ್ವಿ ಎಂಬವರು, “ಅಮೆಜಾನ್ನಲ್ಲಿ ಎಕ್ಸ್ಬಾಕ್ಸ್ಕಂಟ್ರೋಲರ್ಗಾಗಿ ಆರ್ಡರ್ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆಎಂದು ಬರೆದುಕೊಂಡಿದ್ದಾರೆ. ತನ್ವಿ ಅವರ ಖಾತೆಯಲ್ಲಿ ಬೆಂಗಳೂರಿನವರು ಎಂಬ ಮಾಹಿತಿ ಇದೆ.

ವಿಡಿಯೊ ಹಂಚಿಕೊಂಡಿರುವ ಪ್ರಕಾಶ್ಎಂಬವರು, ‘ಸರ್ಜಾಪುರ ರಸ್ತೆಯಲ್ಲಿರುವ ಕುಟುಂಬವೊಂದು, ಅಮೆಜಾನ್ನಲ್ಲಿ ತಾವು ಆರ್ಡರ್ಮಾಡಿದ್ದ ಎಕ್ಸ್ಬಾಕ್ಸ್ಕಂಟ್ರೋಲರ್ಜೊತೆಗೆ ಜೀವಂತ ಹಾವನ್ನೂ ಸ್ವೀಕರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್‌, ವಿಷಕಾರಿ ಹಾವು ಪ್ಯಾಕಿಂಗ್ಟೇಪ್ನಲ್ಲೇ ಸಿಲುಕಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲಎಂದು ತಿಳಿಸಿದ್ದಾರೆ.

ಅಮೆಜಾನ್ ಆರ್ಡರ್ನಲ್ಲಿ ನಿಮಗೆ ಆದ ಅನಾನುಕೂಲತೆಯ ಬಗ್ಗೆ ವಿಷಾದಿಸುತ್ತೇವೆ. ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಹಂಚಿಕೊಳ್ಳಿ. ನಮ್ಮ ತಂಡವು ನವೀಕರಣದೊಂದಿಗೆ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ” ಎಂದು ಅಮೆಜಾನ್‌ ಟ್ವೀಟ್ ಮಾಡಿದೆ.

ಆದರೆ, ಅಮೆಜಾನ್ ವಿಷಪೂರಿತ ಹಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್​​​ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...