ಬೆಂಗಳೂರು | ‘ಆರ್‌ಸಿಬಿ’ಗೆ ನಿರ್ಣಾಯಕ ಪಂದ್ಯ; ಮಳೆಯಾದ್ರೆ ಗತಿಯೇನು?

Date:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಹಂಗಾಮದಲ್ಲಿ 10 ತಂಡಗಳ ಹಣಾಹಣಿ ನಡೆಯುತ್ತಿದೆ. ಈಗಾಗಲೇ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೆಕೆಆರ್ ತಂಡ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಆದರೀಗ, ಫ್ಲೇ ಆಫ್‌ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿಗೆ ಉಳಿದಿರುವ ಎರಡು ಪಂದ್ಯಗಳು ನಿರ್ಣಾಯಕವಾಗಿವೆ.

ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ)ಯ ಎರಡು ನಿರ್ಣಾಯಕ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಹೈವೋಲ್ಟೆಜ್ ಅಂತಾನೇ ಕರೆಯಿಸಿಕೊಳ್ಳುತ್ತಿರುವ ಈ ಪಂದ್ಯ ಇಂದು ಅಂದರೆ, ಮೇ 12ರಂದಯ ಸಂಜೆ 7:30ಕ್ಕೆ ನಡೆಯಲಿದೆ. ಪ್ಲೇ ಆಫ್​ಗೆ ಏರಲು ಉಭಯ ತಂಡಗಳಿಗೂ ಈ ಪಂದ್ಯ ನಡೆಯುವುದು ಅತ್ಯವಶ್ಯಕವಾಗಿದೆ.

ಆದರೆ, ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ನಗರದಲ್ಲಿ ಸಾಯಂಕಲದಿಂದ ಮೋಡ ಕವಿದ ವಾತಾವರಣವಿದೆ. ಬೆಂಗಳೂರಿಗೂ ವರುಣ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಪಂದ್ಯ ನಡೆಯುವವ ವೇಳೆಯೂ ಮಳೆಯಾಗಬಹುದು ಎನ್ನಲಾಗಿದೆ. ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೇ 12ರ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆದ್ದು ಆರ್​ಸಿಬಿ ಪ್ಲೇಆಫ್​ಗೆ ಹತ್ತಿರವಾಗುವುದನ್ನು ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

2ನೇ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​ಸಿಬಿ ಎದುರಾಗಲಿದ್ದು, ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಪ್ಲೇ ಆಫ್​ಗಾಗಿ ರೇಸ್​ನಲ್ಲಿರುವ ತಂಡಗಳ ಪೈಕಿ ಎರಡೂ ಪೈಪೋಟಿಯಲ್ಲಿವೆ. ಡೆಲ್ಲಿ 12ರಲ್ಲಿ ತಲಾ 6 ಗೆಲುವು ಸೋಲು ಕಂಡಿದೆ. ರನ್​ರೇಟ್​ನಲ್ಲಿ -0.316 ಹೊಂದಿದ್ದು, ಆರ್​ಸಿಬಿ ವಿರುದ್ಧ ಗೆದ್ದಲ್ಲಿ ಪಾಯಿಂಟ್ಸ್​ ಮತ್ತು ರನ್​ರೇಟ್​ ಉತ್ತಮವಾಗಲಿದೆ. ಆಗ, ಲಖನೌ ವಿರುದ್ಧದ ಪಂದ್ಯದ ಫಲಿತಾಂಶದ ಮೇಲೆ ತಂಡದ ಹಣೆಬರಹ ಗೊತ್ತಾಗಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರಿನ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಸಾವು

ಇತ್ತ ಆರ್​ಸಿಬಿ ಸತತ 5 ಸೋಲುಗಳನ್ನು ಕಂಡ ಬಳಿಕ ಟೂರ್ನಿಯಲ್ಲಿ ಎಲಿಮಿನೇಟ್​ ಆಗುವ ಮೊದಲ ತಂಡವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಫೀನಿಕ್ಸ್​ ಹಕ್ಕಿಯಂತೆ ಎದ್ದು ಬಂದ ಫಾಫ್​ ಡು ಪ್ಲೆಸಿಸ್​ ನೇತೃತ್ವದ ಪಡೆ ಸತತ 4 ಗೆಲುವು ದಾಖಲಿಸಿತು. ಆಡಿರುವ 12ರಲ್ಲಿ 5 ಪಂದ್ಯ ಗೆದ್ದಿದ್ದು, 7ರಲ್ಲಿ ಸೋತು 10 ಪಾಯಿಂಟ್ಸ್​ ಹೊಂದಿದೆ. ಆರ್​​ಆರ್ ವಿರುದ್ಧ ಇಂದು ಚೆನ್ನೈ ಸೋಲಬೇಕು. ಡೆಲ್ಲಿ ವಿರುದ್ಧ ದೊಡ್ಡ ಅಂತರದಲ್ಲಿ ತಾನು ಗೆಲ್ಲಬೇಕು. ಕೊನೆಯ ಪಂದ್ಯ ಸಿಎಸ್​ಕೆ ವಿರುದ್ಧ ನಡೆಯಲಿದ್ದು, ಅಲ್ಲಿ ಗೆಲುವೊಂದೇ ಮಂತ್ರವಾಗಿದೆ. ಆಗ ಮಾತ್ರ ಪ್ಲೇಆಫ್​ ಹಾದಿಯಲ್ಲಿ ಉಳಿಯಲು ಸಾಧ್ಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...