ಬೆಂಗಳೂರು | ಕದ್ದ ಫೋನ್ ಪೋಸ್ಟ್‌ ಮೂಲಕ ಹಿಂತಿರುಗಿಸಿದರೆ ಪ್ರಕರಣ ದಾಖಲಿಸಲ್ಲ: ಪೊಲೀಸ್ ಇಲಾಖೆ

Date:

ಬೆಂಗಳೂರಿನಲ್ಲಿ ಮೊಬೈಲ್ ಫೋನ್ ಕಳ್ಳರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಕ್ರಮವಹಿಸಿ ಮೊಬೈಲ್‌ ಕಳ್ಳರನ್ನು ಬಂಧನ ಮಾಡುತ್ತಿದ್ದಾರೆ. ಇದೀಗ, ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪೋಸ್ಟ್‌ ಮೂಲಕ ಹಿಂತಿರುಗಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡದಿರಲು ಬೆಂಗಳೂರು ನಗರ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರ ಪೊಲೀಸರು ಎಷ್ಟೇ ಪ್ರಯತ್ನಿಸಿ ಕ್ರಮ ವಹಿಸಿದರೂ, ಈ ಮೊಬೈಲ್‌ ಕಳ್ಳತನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ, ಬೆಂಗಳೂರು ನಗರ ಪೊಲೀಸರು ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸರು ಮೊಬೈಲ್ ಕಳ್ಳರಿಗೆ ಒಂದು ಅವಕಾಶ ನೀಡಿದ್ದಾರೆ.

ರಸ್ತೆಯಲ್ಲಿ ಹೋಗುವಾಗ ಅಕಸ್ಮಾತಾಗಿ ಮೊಬೈಲ್ ಸಿಕ್ಕರೆ, ಅಂತಹವರು ಕೂಡ ಪೊಲೀಸ್ ಠಾಣೆಗೆ ಮೊಬೈಲ್ ತಂದು ಕೊಡುವ ಅವಶ್ಯಕತೆ ಇಲ್ಲ. ಬದಲಾಗಿ ಪೋಸ್ಟ್‌ ಬಾಕ್ಸ್‌ಗೆ ಹಾಕಿದರೆ ಮೊಬೈಲ್‌ಗಳನ್ನು ಪೊಲೀಸರು ಮಾಲೀಕರಿಗೆ ತಲುಪಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಕಳ್ಳರು ತಮ್ಮ ತಪ್ಪನ್ನು ಅರಿತು ಕದ್ದ ಮೊಬೈಲ್‌ಗಳನ್ನು ಪೋಸ್ಟ್‌ ಬಾಕ್ಸ್‌ಗೆ ಹಾಕಬೇಕು. ಪೋಸ್ಟ್ ಬಾಕ್ಸ್​ನಲ್ಲಿ ಮೊಬೈಲ್ ಡಂಪ್ ಮಾಡಿದರೆ ಅವರ ವಿರುದ್ಧ ಕೇಸ್ ದಾಖಲಾಗುವುದಿಲ್ಲ. ಇಲ್ಲದಿದ್ದರೆ, ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.

ಇನ್ನುಮುಂದೆ ಮೊಬೈಲ್ ಕಳೆದರೆ ಇ-ಲಾಸ್ಟ್​ನಲ್ಲಿ, ಎಫ್​ಐಆರ್, ಎನ್​ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದುಕೊಂಡವರು ಕಂಟ್ರೊಲ್ ರೂಂಗೆ ತಿಳಿಸಿ ನಂತರ ಕೇಂದ್ರ ಸಲಕರಣೆ ಗುರುತಿನ ನೋಂದಣಿ (Central equipment identity register) ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕು.

ಈ ಸುದ್ದಿ ಓದಿದ್ದೀರಾ? ಪೌರಕಾರ್ಮಿಕರಿಗೆ 12% ಬಡ್ಡಿಯೊಂದಿಗೆ ₹90.18 ಕೋಟಿ ಇಪಿಎಫ್ ಪಾವತಿಸುವಂತೆ ಹೈಕೋರ್ಟ್‌ ಸೂಚನೆ

ಈ ಆ್ಯಪ್ ಮುಖಾಂತರ ಪೊಲೀಸರು ಆದಷ್ಟು ಬೇಗ ಕಳೆದು ಹೋದ ಮೊಬೈಲ್ ಅನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಲಿದ್ದಾರೆ.

ಮೊದಲಿಗೆ ಕಮಾಂಡ್ ಸೆಂಟರ್ ಬಳಿ ಪೋಸ್ಟ್ ಬಾಕ್ಸ್ ಇಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಇನ್ನೆರಡು ದಿನದಲ್ಲಿ ಪೊಲೀಸರು ಸಿಇಐಆರ್ ಲಾಂಚ್ ಮಾಡಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...