ಶಿವರಾತ್ರಿ ಹಬ್ಬ, ವಾರಾಂತ್ಯ ಸೇರಿದಂತೆ ಸತತ ಮೂರು ದಿನ ರಜೆ ಇರುವ ಹಿನ್ನೆಲೆ, ಜನ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಮಾರ್ಚ್ 8ರಂದು ಶಿವರಾತ್ರಿ ಹಬ್ಬ, ಮಾರ್ಚ್ 9 ಎರಡನೇ ಶನಿವಾರ ಹಾಗೂ ಮಾರ್ಚ್ 10 ರವಿವಾರ ರಜೆ ಇದೆ. ಹೀಗಾಗಿ, ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್, ಆನಂದ ರಾವ್ ಸರ್ಕಲ್, ಉಪ್ಪಾರಪೇಟೆ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ವಾಹನ ಸಂಚಾರ ದಟ್ಟನೆ ಉಂಟಾಗಿದ್ದು, ಜನ ಪರದಾಡುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯಕರನ ಜತೆ ಸೇರಿ ಮಗುವಿಗೆ ಚಿತ್ರಹಿಂಸೆ ನೀಡಿದ ತಾಯಿ
ಹಬ್ಬದ ಹಿನ್ನೆಲೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಜ್ಯ ಮತ್ತು ಹೊರ ರಾಜ್ಯದಪ್ರದೇಶಗಳಿಗೆ 1,500 ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರಿಗೆ ವಾಪಾಸ್ ಬರುವವರಿಗಾಗಿ ಮಾರ್ಚ್ 10 ಮತ್ತು 11 ರಂದು ವಿಶೇಷ ಬಸ್ ಬಿಡಲಿದೆ ಎಂದು ತಿಳಿಸಿದೆ.




