ಬೆಂಗಳೂರಿನಲ್ಲಿ ಪೋಷಕರೇ ತಮ್ಮ ಮಕ್ಕಳಿಗೆ ಚಿತ್ರಹಿಂಸೆ ನೀಡಿ ಹಲ್ಲೆ ಮಾಡುವ ಅಮಾನುಷ ಘಟನೆಗಳು ವರದಿಯಾಗುತ್ತಿವೆ. ಇತ್ತೀಚಿಗೆ 2 ವರ್ಷದ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಕುಕ್ಕರ್‌ನಿಂದ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಆ ಘಟನೆ ಬೆನ್ನಲ್ಲೇ ಮತ್ತೊಂಂದು ಘಟನೆ ವರದಿಯಾಗಿದೆ. ತಾಯಿಯೊಬ್ಬಳು ತನ್ನ ಪ್ರಿಯಕರನ ಜತೆಗೆ ಸೇರಿ ಮಗುವನ್ನು ಕಚ್ಚಿ, ಗಾಯದ ಮೇಲೆ ಪ್ರಿಡ್ಜ್‌ನಲ್ಲಿದ್ದ ತಣ್ಣೀರು ಸುರಿದು ಕ್ರೌರ್ಯ ಮೆರೆದಿದ್ದಾಳೆ.
ಆಯೇಷಾ ಮಗುವಿಗೆ ಹಿಂಸೆ ನೀಡಿದ ತಾಯಿ. ಈಕೆಗೆ ಇಮ್ರಾನ್ ಖಾನ್ ಎಂಬುವವರ ಜತೆಗೆ ಮದುವೆಯಾಗಿ, ಒಂದು ಹೆಣ್ಣು ಮಗು ಜನಿಸಿತ್ತು. ಆಯೇಷಾ ತನ್ನ ಪತಿ ಇಮ್ರಾನ್ ಖಾನ್‌ನಿಂದ ವಿಚ್ಛೇದನ ಪಡೆದು ತನ್ನ ತಾಯಿಯ ಮನೆಯಲ್ಲಿ ನೆಲೆಸಿದ್ದಳು.
ಆಯೇಷಾಗೆ ಸಲೀಂ ಎಂಬ ಪ್ರಿಯಕರ ಇದ್ದ ಎನ್ನಲಾಗಿದೆ. ಆತನೊಂದಿಗೆ ಸೇರಿ ಪತಿಯ ಮೇಲಿನ ಕೋಪಕ್ಕೆ ಮಗುವಿಗೆ ಚಿತ್ರಹಿಂಸೆ ನೀಡಿದ್ದಾಳೆ. ಮಗುವಿಗೆ ಕಚ್ಚಿ, ಗಾಯದ ಮೇಲೆ ಫ್ರಿಡ್ಜ್ ನೀರು ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇದಲ್ಲದೇ, ಮಗುವಿನ ಕೈಗೆ ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು; ಸರ್ಕಾರ ಆದೇಶ
ಈ ಬಗ್ಗೆ ಮಗು ತನ್ನ ತಂದೆಗೆ ತಿಳಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಮಗು ತಂದೆಯ ಬಳಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿರಲಿಲ್ಲ. ಕೆಲ ದಿನ ಕಳೆದ ಬಳಿಕ ಮಗು ವಿಚಾರವನ್ನು ತಂದೆ ಬಳಿ ತಿಳಿಸಿದೆ.
ಈ ಬಗ್ಗೆ ಇಮ್ರಾನ್ ಜೆಜೆನಗರ ಪೊಲೀಸ್ ಠಾಣೆಯಲ್ಲಿ ಆಯೇಷಾ, ಆಕೆಯ ಪ್ರಿಯಕರ ಸಲೀಂ ಮತ್ತು ಜಬೀರ್ ಎಂಬವರ ವಿರುದ್ಧ ದೂರು ನೀಡಿದ್ದಾರೆ.




