ರೈಲಿಗೆ ಸಿಲುಕಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಏಪ್ರಿಲ್ 25ರಂದು ನಡೆದಿದೆ ಎನ್ನಲಾಗಿದೆ.
ಶಶಿಕುಮಾರ್ (23), ಲೋಕಿ (23) ಮೃತಪಟ್ಟವರು. ಮತ್ತೊಬ್ಬನ ಗುರಿತು ಪತ್ತೆಯಾಗಿಲ್ಲ. ಇನ್ನು ಮೃತಪಟ್ಟವರು ಅಂಧ್ರಪ್ರದೇಶದ ಚಿತ್ತೂರು ಮೂಲದವರು ಎನ್ನಲಾಗಿದೆ.
ಸಾರ್ವಜನಿಕರು ನೋಡಿದ ಕೂಡಲೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಏ.26ರಂದು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ವ್ಯತ್ಯಯ ಸಾಧ್ಯತೆ
ಇದು ಆತ್ಮಹತ್ಯೆಯೋ ಅಥವಾ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.




