ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಸ್‌ಪಿ ರೋಡ್ ಉಲ್ಲೇಖ

Date:

ವಿಶ್ವದಕುಖ್ಯಾತ ಮಾರುಕಟ್ಟೆಗಳ ವಾರ್ಷಿಕ ಪಟ್ಟಿಯಲ್ಲಿ ಬೆಂಗಳೂರಿನ ಸದರ್ಪತ್ರಪ್ಪ ರಸ್ತೆ (ಎಸ್‌.ಪಿ ರಸ್ತೆ) ಮಾರುಕಟ್ಟೆಯ ಹೆಸರು ಉಲ್ಲೇಖವಾಗಿದೆ.

ಸರ್ಕಾರಿ ಸ್ವಾಮ್ಯದ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು (ಯುಎಸ್ಟಿಆರ್‌) ಮಂಗಳವಾರ ‘2023 ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

2023ರಲ್ಲಿನ ವಿಶ್ವದ ಕುಖ್ಯಾತ 39 ಆನ್ಲೈನ್ಮಾರ್ಕೆಟ್ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿ ಪ್ರಕಟಿಸಿದ್ದು, ಈ ಮಾರುಕಟ್ಟೆಗಳು ನಕಲಿ ಟ್ರೇಡ್ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ತೊಡಗಿವೆ ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಂಬೈನ ಹೀರಾ ಪನ್ನಾ ಮಾರುಕಟ್ಟೆ, ಕೋಲ್ಕತ್ತಾದ ಕಿಡ್ಡರ್ಪೋರ್ಮಾರುಕಟ್ಟೆ, ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಕಾಮರ್ಸ್ಉದ್ಯಮ ಇಂಡಿಯಾ ಮಾರ್ಟ್‌, ವೆಗಾಮೂವೀಸ್‌, ಡಬ್ಲ್ಯುಎಚ್ಎಂಸಿಎಸ್ಸ್ಟಾಟರ್ಸ್ಕೂಡ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯಲ್ಲಿವೆ.

ಕೋಲ್ಕತ್ತಾದ ಕಿಡ್ಡರ್‌ಪೋರ್‌ ಮಾರುಕಟ್ಟೆ, ಮುಂಬೈನ ಹೀರಾ ಪನ್ನಾ, ನವದೆಹಲಿಯ ಕರೋಲ್ ಬಾಗ್ನಲ್ಲಿರುವ ಟ್ಯಾಂಕ್ ರಸ್ತೆ ಹಾಗೂ ಬೆಂಗಳೂರಿನ ಸದರ್ ಪತ್ರಪ್ಪ ರಸ್ತೆ ಮಾರುಕಟ್ಟೆ ಪಟ್ಟಿಯಲ್ಲಿರುವ ಭಾರತೀಯ ಮಾರುಕಟ್ಟೆಗಳಾಗಿವೆ.

ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ನಕಲಿ ಮತ್ತು ದರೋಡೆ ಸರಕುಗಳ ವ್ಯಾಪಾರವು ಕಾರ್ಮಿಕರು, ಗ್ರಾಹಕರು ಹಾಗೂ ಸಣ್ಣ ವ್ಯವಹಾರಗಳಿಗೆ ಹಾನಿ ಮಾಡುತ್ತದೆ. ಅಂತಿಮವಾಗಿ ಯುಎಸ್ ಆರ್ಥಿಕತೆಗೆ ಹಾನಿ ಮಾಡುತ್ತದೆಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.

ವರ್ಷದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಮಹತ್ವದ್ದಾಗಿದೆ. ಏಕೆಂದರೆ, ಇದು ನಕಲಿ ಸರಕುಗಳ ಸಂಭಾವ್ಯ ಅಪಾಯಗಳನ್ನು ಒತ್ತಿ ಹೇಳುತ್ತದೆಎಂದು ಅವರು ಹೇಳಿದರು.

ಇದು ಚೀನಾಆಧಾರಿತ ಕಾಮರ್ಸ್ ಮತ್ತು ವಾಣಿಜ್ಯ ಮಾರುಕಟ್ಟೆಗಳಾದ ಟಾವೊಬಾವೊ, ವಿಚಾಟ್‌, ಡಿಎಚ್ಗೇಟ್ಪಿಂಡೂಡುವೋ ಪಟ್ಟಿಯಲ್ಲಿವೆ. ಚೀನಾ ಕುಖ್ಯಾತ ಮಾರುಕಟ್ಟೆಗಳನ್ನು ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಇತರ ಪಟ್ಟಿ ಮಾಡಿದ ಮಾರುಕಟ್ಟೆಗಳಲ್ಲಿ ಚೀನಾದಲ್ಲಿ ಏಳು ಭೌತಿಕ ಮಾರುಕಟ್ಟೆಗಳು ಸೇರಿವೆ. ಇದು ನಕಲಿ ಸರಕುಗಳ ತಯಾರಿಕೆ, ವಿತರಣೆ ಮತ್ತು ಮಾರಾಟಕ್ಕೆ ಹೆಸರುವಾಸಿಯಾಗಿದೆ.

ಈ ಸುದ್ದಿ ಓದಿದ್ದೀರಾ? ಕಳ್ಳತನ ಮಾಡಲು ಹೊಸ ಕ್ರೇಟಾ ಕಾರ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಳ್ಳರ ಬಂಧನ

ಯುಎಸ್ಟಿಆರ್‌ 2006ರಲ್ಲಿ ಮೊದಲ ಬಾರಿಗೆ ವಿಶೇಷ 301 ವರದಿಯಲ್ಲಿ ಕುಖ್ಯಾತ ಮಾರುಕಟ್ಟೆಗಳನ್ನು ಗುರುತಿಸಿದೆ. ಫೆಬ್ರವರಿ 2011ರಿಂದ, ಯುಎಸ್ಟಿಆರ್ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಮತ್ತು ಮಾರುಕಟ್ಟೆ ನಿರ್ವಾಹಕರು ಮತ್ತು ಸರ್ಕಾರಗಳು ಯುಎಸ್‌ ಅನ್ನು ರಕ್ಷಿಸುವ ಬೌದ್ಧಿಕ ಆಸ್ತಿ ಜಾರಿ ಪ್ರಯತ್ನಗಳಿಗೆ ಆದ್ಯತೆ ನೀಡಲು, ಪ್ರತ್ಯೇಕವಾಗಿ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ವಾರ್ಷಿಕವಾಗಿ ಪ್ರಕಟಿಸಿದೆ. ವಿಶ್ವದಲ್ಲೇ ನಕಲಿ ಉತ್ಪನ್ನಗಳ ಮೊದಲ ಮೂಲವಾಗಿ ಚೀನಾ ಮುಂದುವರಿದಿದೆ ಎಂದು ವರದಿ ಹೇಳುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...