ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟವಾದ ನಿದರ್ಶನದಂತೆ ಎಲ್ಲಾ ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು, ಸ್ಥಳೀಯ ಭಾಷೆಯಲ್ಲಿ ಪ್ರತಿಯೊಂದು ವ್ಯವಹಾರ ನಡೆಸಬೇಕೆಂದು ಆದೇಶವಿದ್ದರೂ, ಕನ್ನಡದಲ್ಲಿ ಯಾವುದೇ ಖಾತೆ ಅರ್ಜಿ ಮತ್ತು ಹಣ ವರ್ಗಾವಣೆ ಮಾಡುವ, ಹಣ ಬಿಡಿಸುವ ಅರ್ಜಿಗಳಿಲ್ಲದೇ ಕನ್ನಡ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಮುಖಂಡರು ದಾವಣಗೆರೆ ನಗರದ ಪಿ.ಬಿ ರಸ್ತೆಯಲ್ಲಿರುವ ಬರೋಡ ಬ್ಯಾಂಕ್ ನ ಕಚೇರಿಯ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬ್ಯಾಂಕಿನಲ್ಲಿ ಕನ್ನಡ ಭಾಷೆಯಲ್ಲಿ ಯಾವುದೇ ಖಾತೆ ಅರ್ಜಿ ಮತ್ತು ಹಣ ವರ್ಗಾವಣೆ ಮಾಡುವ, ಹಣ ಬಿಡಿಸುವ ವ್ಯವಹಾರದ ಅರ್ಜಿಗಳಿಲ್ಲ. ಎಲ್ಲವೂ ಸಹ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಇದ್ದು, ಕನ್ನಡವನ್ನು ಅವಗಣನೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಬರೋಡಾ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರತಿಭಟನೆ ಮೂಲಕ ಎಚ್ಚರಿಸಲಾಯಿತು.

“ಬ್ಯಾಂಕಿನ ವ್ಯವಸ್ಥಾಪಕರು ಒಂದು ವಾರದ ಒಳಗಾಗಿ ಕನ್ನಡದಲ್ಲಿ ಮುದ್ರಣ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ. ಬರೋಡಾ ಬ್ಯಾಂಕಿನ ಪಿಜೆ ಬಡಾವಣೆಯ ಶಾಖೆಯಲ್ಲೂ ಸಹ ಇದೇ ರೀತಿ ಕನ್ನಡ ಕಡೆಗಣಿಸಲಾಗಿದೆ, ಇದನ್ನು ಖಂಡಿಸುತ್ತೇವೆ. ಒಂದು ವಾರದ ಒಳಗಾಗಿ ಸರಿಪಡಿಸದೆ ಹೋದರೆ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಲಾಗುವುದು” ಎಂದು ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೀದಿ ನಾಯಿ ದಾಳಿಗೆ ವೃದ್ಧ, ನಾಲ್ವರು ಮಕ್ಕಳಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷರಾದ ಗೋಪಾಲ ದೇವರ ಮನೆ, ತನ್ವೀರ್ ಭಾಷಾ, ಮೋಹನ್ ಜಿಲ್ಲಾ ಕಾರ್ಯದರ್ಶಿ ಜಿಎಸ್ ಸಂತೋಷ ಹಾಜರಿದ್ದರು.





