ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿ’ಗಳಿಗೆ ಚಾಲನೆ

Date:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಹದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ ‘ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿ’ ಪರಿಚಯಿಸಿದೆ.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ ಎಸ್‌ಯುವಿ ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಬಿಐಎಎಲ್‌ನ ಸಿಇಒ ಹರಿ ಮರಾರ್, “ಏರ್‌ಪೋರ್ಟ್‌ನಲ್ಲಿ ಪರಿಸರಯುಕ್ತ ವಾತಾವರಣ ನಿರ್ಮಾಣ ಮಾಡಲು ಈ ಪರಿಸರ ದಿನದಂದೇ ಬಹುತೇಕ ಇಂಧನಯುಕ್ತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಟ್ಯಾಕ್ಸಿಗಳಾಗಿ ಪರಿವರ್ತಿಸಲಾಗಿದೆ. ಇದೀಗ 75 ಕಾಂಪ್ಯಾಕ್ಟ್‌ ಎಸ್‌ಯುವಿ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಸೇರಿದಂತೆ ಶೇ.50 ಟ್ಯಾಕ್ಸಿಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಿಫೆಕ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ಮಾತನಾಡಿ, “ರಿಫೆಕ್ಸ್‌ನ ಗ್ರೀನ್, ರಿಫೆಕ್ಸ್ ಇವೀಲ್ ಮೂಲಕ ಏರ್‌ಪೋರ್ಟ್‌ನಲ್ಲಿ ಇವಿ ಟ್ಯಾಕ್ಸಿ ಒದಗಿಸುವ ಅವಕಾಶ ನಮಗೆ ದೊರೆತಿದೆ. ಈ ನೂತನ ಇವಿ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರು ಸುಲಭವಾಗಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಲ್ಲಿ ಹಾಗೂ ಬಳಕೆದಾರ ಸ್ನೇಹಿ ಬೆಂಗಳೂರು ಪಲ್ಸ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಬುಕ್‌ ಮಾಡಬಹುದು” ಎಂದು ತಿಳಿಸಿದರು.

“ಇನ್ನು, ಮರುವಿನ್ಯಾಸಗೊಳಿಸಲಾದ ಇವಿ ಟ್ಯಾಕ್ಸಿಗಳು ಎರಡು ವಿಶಿಷ್ಟ ಬಣ್ಣಗಳಲ್ಲಿ ಇರಲಿವೆ. ಒಂದು ತಿಳಿನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣ. ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ. ಇನ್ನು, ಗುಲಾಬಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿರುವುದು ವಿಶೇಷ. ಪ್ರತಿ ಪ್ರಯಾಣಿಕರಿಗೆ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೋಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ ‘ಪಿಂಕ್ ಕಾರ್ಡ್’ ಅನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ” ಎಂದು ತಿಳಿಸಿದರು.

“ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು ಇವಿ ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ, ಬೆಂಗಳೂರು ಏರ್‌ಪೋರ್ಟ್‌ನಲ್ಲಿರುವ ಎಲ್ಲ ವಾಹನಗಳನ್ನು ಸಮರ್ಥನೀಯ ಆಯ್ಕೆಗಳಿಗೆ ಪರಿವರ್ತಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ ಬಿಐಎಎಲ್‌ ಹೊಂದಾಣಿಕೆಯನ್ನು ಮುಂದುವರೆಸಿದೆ. ಈ ಉಪಕ್ರಮಗಳು ಪ್ರಯಾಣಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಮಾತ್ರವಲ್ಲದೆ, ವಿಶಾಲವಾದ ಪರಿಸರಮಯ ವಾತಾವರಣ ನಿರ್ಮಾಣದ ಗುರಿ ಹೊಂದಿದ್ದು, ಎಲ್ಲರಲ್ಲೂ ಹಸಿರುಯುಕ್ತ ಭವಿಷ್ಯವನ್ನು ಉತ್ತೇಜಿಸುತ್ತವೆ” ಎಂದರು.

ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ । ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದವರು!

ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ನೆನಪಿನಾರ್ಹ, ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲಿ 100 ಸಸಿಗಳನ್ನು ನೆಡುವ ಮೂಲಕ, ಸುತ್ತಮುತ್ತಲಿನ ಪರಿಸರವನ್ನು ಪೋಷಿಸಲು ಮತ್ತು ಪುನರುಜ್ಜೀವನಗೊಳಿಸಲು ತನ್ನ ಸಮರ್ಪಣೆಯನ್ನು ಪ್ರದರ್ಶಿಸಿದೆ, ಇದರಿಂದ ಪ್ರತಿಯೊಬ್ಬರಿಗೂ ನೆರಳು ನೀಡುವ ಹಸಿರುಮಯ ವಾತಾವರಣ ಸೃಷ್ಟಿಯಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...