ಮಾಧ್ಯಮ ಅಕಾಡೆಮಿಯಿಂದ ಪ್ರಥಮ ಛಾಯಾಚಿತ್ರ ಸ್ಪರ್ಧೆ – ಪ್ರದರ್ಶನ: ಫೆ. 20ರವರೆಗೆ ಅವಧಿ ವಿಸ್ತರಣೆ

Date:

ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನದ ಕೊನೆಯ ದಿನಾಂಕವನ್ನು ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಛಾಯಾಚಿತ್ರಗಳನ್ನು ಕಳುಹಿಸಲು ಫೆಬ್ರವರಿ 15 ಕೊನೆ ದಿನಾಂಕವಾಗಿತ್ತು. ಉಳಿದಂತೆ ಸ್ಪರ್ಧೆಯ ನಿಯಮ ಸೇರಿದಂತೆ ಯಾವುದರಲ್ಲೂ ಬದಲಾವಣೆ ಮಾಡಿಲ್ಲ.

ಇದನ್ನು ಓದಿದ್ದೀರಾ?: ಮಂಗಳೂರು | ಫೆ.28ರಿಂದ ಮಾ.3ವರೆಗೆ ನಿರ್ದಿಗಂತ ನಾಟಕೋತ್ಸವ: ಪ್ರಕಾಶ್ ರಾಜ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ 35,000 ರೂ., 25,000 ರೂ. ಹಾಗೂ 15,000 ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್‌ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.

ಸ್ಪರ್ಧೆಯ ಷರತ್ತುಗಳು

• ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ :01-01-.2024 ರಿಂದ 31-01-2025 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.
• ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ.
• ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ Accreditation Card ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
• ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್ ಮಾರ್ಕ್‌ಗಳು ಇರಬಾರದು.
• ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್‌ಗಳನ್ನು JPEG format ನಲ್ಲಿ ಮಾತ್ರ ಸಲ್ಲಿಸಬೇಕು.
• ಪ್ರದರ್ಶನಕ್ಕೆ ಆಯ್ಕೆಯಾಗುವ ಛಾಯಾಚಿತ್ರಗಳನ್ನು 20”x 30” ಅಳತೆಯಲ್ಲಿ ಮುದ್ರಣ ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್‌ಗಳು 20”x 30” ಅಳತೆಯ, 300 DPI ನಲ್ಲಿದ್ದು ಕನಿಷ್ಠ 5MB ಗಾತ್ರದಲ್ಲಿರಬೇಕು.
• ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
• ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನು ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.
• ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು mediaacademy.karnataka.gov.in ವೆಬ್‌ಸೈಟಿನಲ್ಲಿ ಇರುವ ನಿಗದಿತ ಅರ್ಜಿಯನ್ನು Download ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಇಮೇಜ್‌ಗಳನ್ನು photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ದಿನಾಂಕ: 20-02-2025 ರಂದು ಸಂಜೆ 5:00ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
• ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆ ಆಯ್ಕೆ ಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದು ಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.
• ಪ್ರಶಸ್ತಿಗೆ ಆಯ್ಕೆಯಾದ ಮೂರು ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ: ರೂ.35,000, ದ್ವಿತೀಯ ಬಹುಮಾನ: ರೂ. 25000, ಹಾಗೂ ತೃತೀಯ ಬಹುಮಾನ: ರೂ.15000ಗಳನ್ನು ನೀಡಲಾಗುವುದು.
• ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9448227768 ಹಾಗೂ 9449245980 ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ. ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...